ಕರಾವಳಿ

ತೆಂಗು ಉತ್ಪಾದಕರ ಒಕ್ಕೂಟ ಮತ್ತು ತೋಟಗಾರಿಕಾ ಇಲಾಖೆಯಿಂದ ಸಂಘ ರಚನೆ ಕಾರ್ಯಗಾರ.

Pinterest LinkedIn Tumblr

bntwal_sanga_photo_1

ಬಂಟ್ವಾಳ: ತಾಲೂಕು ತೆಂಗು ಉತ್ಪಾದಕರ ಒಕ್ಕೂಟ ಮತ್ತು ತೋಟಗಾರಿಕಾ ಇಲಾಖೆ ಬಂಟ್ವಾಳ ಆಶ್ರಯದಲ್ಲಿ ತೆಂಗು ಉತ್ಪಾದಕರ ಸಂಘ ರಚನೆ ಕುರಿತು ಕಾರ್ಯಗಾರ. ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ನಡೆಯಿತು. ತೆಂಗು ಉತ್ಪಾದಕರ ಸಂಘದ ಅಧ್ಯಕ್ಷ ಪಿ.ರಾಜಶೇಖರ ರೈ ಉದ್ಘಾಟಿಸಿದರು.

ಸಂಘಟನೆಯಿಂದ ಮಾತ್ರ ಕೃಷಿಕರು ಒಟ್ಟಾಗಲು ಸಾಧ್ಯ ಮತ್ತು ರೈತರ ಸಮಸ್ಯೆಯನ್ನು ನಿವಾರಿಸಲು ಸಾಧ್ಯ. ಕೃಷಿಕರ ಒಗ್ಗೂಡುವಿಕೆಯಿಂದ ಕೃಷಿಯ ಅಭಿವೃದ್ದಿ ಕೂಡ ಮಾಡಬಹುದು. ಜೊತೆಗೆ ಕೃಷಿಯೇತರ ಚಟುವಟಿಕೆಯಲ್ಲಿ ಭಾಗವಹಿಸಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.

ತೆಂಗು ಉತ್ಪಾದಕರ ಸಂಘದ ಉಪಾದ್ಯಕ್ಷರುಗಳಾದ ಕೆ. ಪದ್ಮನಾಭ ರೈ, ಸುಂದರ ಬೆಳ್ಚಾಡ, ಜೊತೆ ಕಾರ್ಯದರ್ಶಿ ರಾಡ್ಪಿ ಪೆರ್ನಾಂಡಿಸ್, ಅಲ್ಪೋನ್ಸ ಮಿನೇಜಸ್, ಪತ್ರಕರ್ತ ರಾಜ ಬಂಟ್ವಾಳ ಉಪಸ್ಥಿತರಿದ್ದರು. ತೋಟಗಾರಿಕಾ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ಮಹಮ್ಮದ್ ನಂದರಬೆಟ್ಟು ವಂದಿಸಿದರು.

Write A Comment