ಉಡುಪಿ: ರಾಜ್ಯದಲ್ಲಿ 2024-25 ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಜ್ಞಾನಸುಧಾ ವಿದ್ಯಾರ್ಥಿನಿ ಸ್ವಸ್ತಿ ಕಾಮತ್ 625ಕ್ಕೆ 625 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರಾಜ್ಯದಲ್ಲಿ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದು, ಅದರಲ್ಲಿ ಸ್ವಸ್ತಿ ಕಾಮತ್ ಒಬ್ಬರಾಗಿದ್ದಾರೆ. ಇವರು ಪಳ್ಳಿ ಗ್ರಾಮದ ಜನಾರ್ದನ್ ಕಾಮತ್, ಶಾಂತಿ ಕಾಮತ್ ದಂಪತಿ ಪುತ್ರಿ.
ಇಂದು ತಂದೆಯ ಹುಟ್ಟುಹಬ್ಬವಾಗಿದ್ದು ಈ ದಿನವೇ ಪರೀಕ್ಷಾ ಫಲಿಂತಾಂಶ ಬಂದಿತ್ತು. ಅದರಲ್ಲಿ ಪುತ್ರಿ ಸ್ವಸ್ತಿ ಕಾಮತ್ ಶೈಕ್ಷಣಿಕ ಸಾಧನೆಯು ತಂದೆ ಹಾಗೂ ಕುಟುಂಬದವರ ಸಂತಸ ಇಮ್ಮಡಿಗೊಳಿಸಿದೆ.
Comments are closed.