ಕರಾವಳಿ

ಕುಂಭಾಸಿ ಮಕ್ಕಳ ಮನೆಯಲ್ಲಿ ದಿ. ಮೀರಾ ಮುರ್ಡೇಶ್ವರ ಸ್ಮರಣಾರ್ಥ ಕೊರಗ ಸಮುದಾಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನ

Pinterest LinkedIn Tumblr

ಕುಂದಾಪುರ: ದಿ. ಮೀರಾ ಮುರುಡೇಶ್ವರ ಇವರ ಜನ್ಮದಿನವನ್ನು ಅವರ ಕುಟುಂಬಿಕರು ಕುಂಭಾಶಿ ಮಕ್ಕಳ ಮನೆಯಲ್ಲಿ ಆಯೋಜಿಸಿದರು.

ಇದೇ ಸಂದರ್ಭದಲ್ಲಿ ದಿ. ಮೀರಾ ಅವರ ಸ್ಮರಣಾರ್ಥವಾಗಿ ಉಡುಪಿ ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ಕೊರಗ ಸಮುದಾಯದ ವಿದ್ಯಾರ್ಥಿಗಳಾದ ಅಖಿಲೇಶ್, ಪ್ರಜ್ಞಾ, ದೀಕ್ಷಾ, ಸುಶನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ದಿ.ಮೀರಾ ಅವರ ಕುಟುಂಬಸ್ಥರಾದ ಜಿ.ಎಸ್ ಮುರ್ಡೇಶ್ವರ್, ಪದ್ಮಾ, ಸುರೇಂದ್ರ ಹಾಗೂ ಕೊರಗ ಸಮುದಾಯದ ಮುಖಂಡರುಗಳಾದ ಮಂಜುನಾಥ್, ಶುಭಾಷ್ ಶಿರಸಿ, ಗಣೇಶ್ ವಿ. ಕುಂದಾಪುರ, ಶೇಖರ್ ಮರವಂತೆ, ಪ್ರಮೋದ್ ಹೊನ್ನಾವರ ಮತ್ತಿತರರು ಉಪಸ್ಥಿತರಿದ್ದರು.

ಲಕ್ಷ್ಮಣ್ ಬೈಂದೂರು ಕಾರ್ಯಕ್ರಮ ನಿರೂಪಿಸಿ, ಗಣೇಶ್ ವಿ.ಸ್ವಾಗತಿಸಿ, ವಿನೀತಾ ವಂದಿಸಿದರು.

Comments are closed.