ಕರಾವಳಿ

ಜೂ.25ರಂದು ಕುಂದಾಪುರದಲ್ಲಿ ಬೃಹತ್ ಉದ್ಯೋಗ ಮೇಳ: 2500ಕ್ಕೂ ಅಧಿಕ ಉದ್ಯೋಗಾವಕಾಶಗಳು..!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯ ಮಿಷನ್, ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಎನ್.ಯು.ಎಲ್.ಎಂ, ಎನ್.ಆರ್.ಎಲ್.ಎಮ್, ಉದ್ಯೋಗ ವಿನಿಮಯ ಕಛೇರಿ ಹಾಗೂ ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ಇವರ ಸಹಯೋಗದೊಂದಿಗೆ ಉದ್ಯೋಗ ಮೇಳ ಆಯೋಜಿಸಿದೆ. ಜೂನ್​ 25 ರಂದು ಕುಂದಾಪುರದ ಭಂಡಾರ್ಕಾರ್ಸ್​ ಕಾಲೇಜಿನಲ್ಲಿ ಈ ಉದ್ಯೋಗ ಮೇಳ ನಡೆಯಲಿದೆ.

ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು ಆಗಮಿಸಲಿದ್ದು, ಅಭ್ಯರ್ಥಿಗಳನ್ನು ಸ್ಥಳದಲ್ಲೇ ನೇರ ಸಂದರ್ಶನ ನಡೆಸಲಿದೆ. ಈ ಮೂಲಕ ತಮ್ಮ ಸಂಸ್ಥೆಗೆ ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.

ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು ಆಗಮಿಸಲಿದ್ದು, ಅಭ್ಯರ್ಥಿಗಳನ್ನು ಸ್ಥಳದಲ್ಲೇ ನೇರ ಸಂದರ್ಶನ ನಡೆಸಲಿದೆ. ಈ ಮೂಲಕ ತಮ್ಮ ಸಂಸ್ಥೆಗೆ ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.

ಈ ಉದ್ಯೋಗ ಮೇಳೆದಲ್ಲಿ ಎಸ್ಎಸ್​ಎಲ್​ಸಿ, ಐಟಿಐ ಮತ್ತು ಡಿಪ್ಲೋಮಾ, ಪದವಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಭಾಗಿಯಾಗಬಹುದಾಗಿದೆ.

ಉದ್ಯೋಗ ಮೇಳದಲ್ಲಿ ಭಾಗಿಯಾಗುವ ಅಭ್ಯರ್ಥಿಗಳು 18 ರಿಂದ 35 ವರ್ಷ ಒಳಗಿನವರು ಆಗಿರಬೇಕಿದೆ. ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳನ್ನು ತಮ್ಮ ಶೈಕ್ಷಣಿಕ ಮಾಹಿತಿ ದಾಖಲೆ, ರೆಸ್ಯೂಮ್​ ಮತ್ತು ಆಧಾರ್​ಕಾರ್ಡ್​ ಹಾಗೂ ಇತ್ತೀಚಿನ ಎರಡು ಪಾಸ್​​ಪೋರ್ಟ್​ ಸೈಜ್​​ ಭಾವಚಿತ್ರವನ್ನು ತರಬೇಕು.

ಉದ್ಯೋಗ ಮೇಳದಲ್ಲೇ ಅಭ್ಯರ್ಥಿಗಳು ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಬೇಕಿದೆ. ಈ ಮೇಳದಲ್ಲಿ ಭಾಗಿಯಾಗಲು ಅಭ್ಯರ್ಥಿಗಳಿಗೆ ಪ್ರವೇಶ ಉಚಿತವಾಗಿದ್ದು, ಯಾವುದೇ ಅರ್ಜಿ ಅಥವಾ ರಿಜಿಸ್ಟ್ರೇಶನ್ ಶುಲ್ಕ ಇರುವುದಿಲ್ಲ.

ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಭಾಗವಹಿಸಲು ಆಸಕ್ತರಿರುವ ಯುವಕ/ಯುವತಿಯರು ಉಡುಪಿ ಜಿಲ್ಲಾಡಳಿತದ https://udupi.nic.in/ ಈ ವೆಬ್​ಸೈಟ್​​ಗೆ ಭೇಟಿ ನೀಡುವ ಮೂಲಕ ನೊಂದಾಯಿಸಿಕೊಳ್ಳಬಹುದು. ರಿಜಿಸ್ಟರ್​ ಆದ ಅಭ್ಯರ್ಥಿಗಳು ಮಾತ್ರ ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಅರ್ಹರಾಗಿರುತ್ತಾರೆ.

ಉದ್ಯೋಗ ಮೇಳಕ್ಕೆ ಹಾಜರಾಗುವ ಅಭ್ಯರ್ಥಿಗಳು ರಿಜಿಸ್ಟೇಷನ್​ ಮಾಡಿಕೊಂಡ ಬಳಿಕ ಅವರ ಇಮೇಲ್​ ವಿಳಾಸದಲ್ಲಿ ಸ್ವೀಕೃತಿಯನ್ನು ಪಡೆಯುವರು. ಈ ಸ್ವೀಕೃತಿ ಅರ್ಜಿಯನ್ನು ಉದ್ಯೋಗ ಮೇಳದ ದಿನ ತಪ್ಪದೇ ಕಡ್ಡಾಯವಾಗಿ ತರಬೇಕಿದೆ.
ಉದ್ಯೋಗ ಮೇಳಕ್ಕೆ ಹಾಜರಾಗುವ ಅಭ್ಯರ್ಥಿಗಳು ರಿಜಿಸ್ಟೇಷನ್​ ಮಾಡಿಕೊಂಡ ಬಳಿಕ ಅವರ ಇಮೇಲ್​ ವಿಳಾಸದಲ್ಲಿ ಸ್ವೀಕೃತಿಯನ್ನು ಪಡೆಯುವರು. ಈ ಸ್ವೀಕೃತಿ ಅರ್ಜಿಯನ್ನು ಉದ್ಯೋಗ ಮೇಳದ ದಿನ ತಪ್ಪದೇ ಕಡ್ಡಾಯವಾಗಿ ತರಬೇಕಿದೆ.

ಈ ಉದ್ಯೋಗ ಮೇಳ ಕುರಿತ ಹೆಚ್ಚಿನ ವಿವರ ಹಾಗೂ ಮಾಹಿತಿ ಪಡೆಯಲು ಅಭ್ಯರ್ಥಿಗಳು 99014817229, 9483772449ಗೆ ಕರೆ ಮಾಡಬಹುದಾಗಿದೆ.

Comments are closed.