ಕರಾವಳಿ

ನಾಳೆ, ನಾಡಿದ್ದು ನಡೆಯುವ ಸಿಇಟಿ ಪರೀಕ್ಷೆಗೆ ಕುಂದಾಪುರದಲ್ಲಿ ಸಂಪೂರ್ಣ ತಯಾರಿ..!

Pinterest LinkedIn Tumblr

ಕುಂದಾಪುರ: ಗುರುವಾರ ಮತ್ತು ಶುಕ್ರವಾರ ನಡೆಯಲಿರುವ ಸಿಇಟಿ ಪರೀಕ್ಷೆಗೆ ಉಡುಪಿ ಜಿಲ್ಲೆಯ ಅತೀ ದೊಡ್ಡ ಪರೀಕ್ಷಾ ಕೇಂದ್ರವಾದ ಕುಂದಾಪುರ ಜ್ಯೂನಿಯರ್ ಕಾಲೇಜಿನಲ್ಲಿ (ಸರಕಾರಿ ಪದವಿ ಪೂರ್ವ ಕಾಲೇಜು) ತಯಾರಿ ಅಂತಿಮಗೊಂಡಿದೆ. ಪರೀಕ್ಷಾ ಕೇಂದ್ರ ಸ್ಯಾನಿಟೈಸಿಂಗ್, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್, ವಿದ್ಯಾರ್ಥಿಗಳ ಅನುಕೂಲಕ್ಕೆ ಪರೀಕ್ಷಾ ಕೊಠಡಿಗಳ ನಕಾಶೆ, ಸೂಚನಾ ಫಲಕಗಳು ಸೇರಿದಂತೆ ಸಕಲ ತಯಾರಿಯನ್ನು ಕಾಲೇಜಿನ ಪ್ರಾಂಶುಪಾಲ ಭುಜಂಗ ಶೆಟ್ಟಿ ಹಾಗೂ ಉಪನ್ಯಾಸಕರು ಮಾಡಿದರು.

ಎರಡು ದಿನ ನಡೆಯುವ ಸಿಇಟಿ ಪರೀಕ್ಷೆಯನ್ನು ಈ ಕೇಂದ್ರದಲ್ಲಿ 552 ವಿದ್ಯಾರ್ಥಿಗಳು ಬರೆಯಲಿದ್ದು 23 ಸಾಮಾನ್ಯ ಕೊಠಡಿ ಹಾಗೂ 2 ವಿಶೇಷ ಮೀಸಲು ಕೊಠಡಿ ಸಿದ್ಧವಾಗಿದೆ. ಜು.30 ಗುರುವಾರ ಜೀವಶಾಸ್ತ್ರ, ಗಣಿತ ಪರೀಕ್ಷೆ ಹಾಗೂ ಜು.31 ಶುಕ್ರವಾರ ಭೌತಶಾಸ್ತ್ರ, ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿದೆ.ಪರೀಕ್ಷೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಮೊದಲು ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಇರಲಿದೆ. ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು ಸಾಮಾಜಿಕ ಅಂತರ ಪಾಲನೆಗೂ ಒತ್ತು‌ ನೀಡಬೇಕಿದೆ.

ಕುಂದಾಪುರದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಒಟ್ಟು ಮೂರು ಪರೀಕ್ಷಾ ಕೇಂದ್ರಗಳಿದ್ದು ಎಲ್ಲಾದರಲ್ಲೂ ಸೂಕ್ತ ತಯಾರಿ ಮಾಡಿಕೊಳ್ಳಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.