ಕರಾವಳಿ

ರಾಜ್ಯದ 28 ಮಂದಿ ಕ್ರೀಡಾ ಪಟುಗಳಿಗೆ ಏಕಲವ್ಯ, ಕ್ರೀಡಾ ರತ್ನ ಪ್ರಶಸ್ತಿ; ಕುಂದಾಪುರದ ಅನೂಪ್ ಡಿಕಾಸ್ತಾಗೆ ಏಕಲವ್ಯ

Pinterest LinkedIn Tumblr

ಉಡುಪಿ: 2015ನೇ ಸಾಲಿನ ಪ್ರತಿಷ್ಟಿತ ಏಕಲವ್ಯ ಪ್ರಶಸ್ತಿಯ ಪಟ್ಟಿಯನ್ನು ಉಡುಪಿಯಲ್ಲಿ ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಪ್ರಕಟಿಸಿದರು. ಈ ಪ್ರಶಸ್ತಿಯನ್ನು ನಾಳೆ ಮೈಸೂರಿನ ಜೆ.ಕೆ ಗ್ರೌಂಡ್ಸ್ ಅಮೃತಮಹೋತ್ಸವ ಭವನದಲ್ಲಿ ಪ್ರಶಸ್ತಿಯನ್ನು ಸಿ‌ಎಂ ಸಿದ್ದರಾಮಯ್ಯ ವಿತರಣೆ ಮಾಡಲಿದ್ದಾರೆ.

karnataka_yekalavya_award-2 karnataka_yekalavya_award-3

ಕ್ರೀಡಾಪಟುಗಳಿಗೆ ಪ್ರೋತ್ಸಾಹವನ್ನು ನೀಡುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಏಕಲವ್ಯ ಪ್ರಶಸ್ತಿಯನ್ನು ಹಾಗೂ ಈ ಬಾರಿ ಹೊಸತಾಗಿ ಆರಂಭಿಸಲಾಗಿರುವ ಕ್ರೀಡಾ ರತ್ನ ಪ್ರಶಸ್ತಿ ಹಾಗೂ ಇಬ್ಬರು ತರಬೇತುದಾರರಿಗೆ ಜೀವ ಮಾನ ಸಾಧನೆ ಪ್ರಶಸ್ತಿಯ ಪಟ್ಟಿಯನ್ನು ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಪ್ರಕಟಿಸಿದರು. ಏಕಲವ್ಯ ಪ್ರಶಸ್ತಿಯು 2 ಲಕ್ಷ ನಗದು ಹಾಗೂ ಏಕಲವ್ಯ ಕಂಚಿನ ಮೂರ್ತಿಯನ್ನು ಒಳಗೊಂಡಿರುತ್ತದೆ.

karnataka_yekalavya_award-1

(ಅನುಪ್‌ ಡಿ’ಕೋಸ್ಟ-ಕುಂದಾಪುರ)

ಗ್ರಾಮೀಣ ಕ್ರಿಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಈ ಬಾರಿ ಹೊಸತಾಗಿ ಕ್ರೀಡಾರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದ್ದು ಇದರ ಜೊತೆಗೆ ತರಬೇತುದಾದರಿಗೆ ಉತ್ತೆಜನ ನಿಡುವ ಸಲುವಾಗಿಯೂ ಇಬ್ಬರು ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ತರಬೇತುದಾದರಿಗೆ ನಿಡುವ ಜೀವಮಾನ ಪ್ರಶಸ್ತಿಯು 1.50 ಲಕ್ಷ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಇನ್ನು ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರಿಗೆ 1 ಲಕ್ಶ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತಿದೆ.

ಕರ್ನಾಟಕದ ಹೆಸರಾಂತ ಕ್ರೀಡಾಪಟು ಸಯ್ಯದ್ ಕಿರ್ಮಾನಿಯವರ ಅದ್ಯಕ್ಷತೆಯಲ್ಲಿ ಪ್ರಶಸ್ತಿಗಳನ್ನು ಆಯ್ಕೆ ಮಾಡಲಾಗಿದ್ದು ಕ್ರಿಡಾ ಸಚಿವ ಪ್ರಮೋದ್ ಮದ್ವರಾಜ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಈ ಹೆಸರುಗಳನ್ನು ಅಂತಿಮಗೊಳಿಸಿದೆ. ಈ ಪ್ರಶಸ್ತಿಗಳನ್ನು ಇಂದು ( ಅ.7)ರಂದು ಮೈಸೂರಿನ ಜೆ.ಕೆ ಗ್ರೌಂಡ್ಸ್ ನ ಅಮೃತಮಹೋತ್ಸವ ಭವನದಲ್ಲಿ ಸಂಜೆ ನಾಲ್ಕು ಗಂಟೆಗೆ ಸಿ.ಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಳುಗಳು
ದಾಮಿನಿ ಗೌಡ -ಈಜು
ವಿದ್ಯಾ ಪಿಳೈ -ಬಿಲಿಯರ್ಡ್ಸ್
ಪವನ್‌ ಶೆಟ್ಟಿ -ಬಾಡಿ ಬಿಲ್ಡಿಂಗ್‌
ನಿತಿನ್‌ ತಿಮ್ಮಯ್ಯ -ಹಾಕಿ
ರಾಜಗುರು ಎನ್‌ -ಕಬಡ್ಡಿ
ಕೃಷ್ಣ.ಎ.ನಾಯ್ಕೊಡಿ -ಸೈಕ್ಲಿಂಗ್‌
ಅರವಿಂದ ಎ -ಬಾಸ್ಕೆಟ್‌ ಬಾಲ್‌
ಅರ್ಪಿತಾ ಎಂ -ಅಥ್ಲೆಟಿಕ್ಸ್‌
ಮೊಹಮದ್‌ ರಫೀಕ್‌ ಹೋಳಿ -ಕುಸ್ತಿ
ಮೇಘನ ಎಂ ಸಜ್ಜನರ್‌ -ರೈಪಲ್‌ ಶೂಟಿಂಗ್‌
ಧೃತಿ ತಾತಾಚಾರ್‌ ವೇಣುಗೋಪಾಲ್‌ -ಲಾನ್‌ ಟೆನ್ನಿಸ್‌
ಅನುಪ್‌ ಡಿ’ಕೋಸ್ಟ- ವಾಲಿಬಾಲ್‌
ಜೆ.ಎಂ.ನಿಶ್ಚಿತಾ-ಶಟಲ್‌ ಬ್ಯಾಡ್ಮಿಂಟನ್‌
ಶಾವದ್‌ ಜೆ.ಎಂ-ಪ್ಯಾರಾ ಅಥ್ಲೆಟಿಕ್ಸ್‌
ಉಮೇಶ್‌ ಆರ್‌ ಖಾಡೆ -ಪ್ಯಾರಾ ಈಜು
ಕಂಚನ್‌ ಮುನ್ನೋಳ್‌ ಕರ್‌ -ಭಾರ ಎತ್ತುವುದು

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾದವರು

ಡಿ.ಎನ್‌.ರುದ್ರಸ್ವಾಮಿ-ಯೋಗ
ಪೂರ್ಣಿಮಾ ವಿ- ಥ್ರೋ ಬಾಲ್‌ (ಪೂತ್ತೂರು )
ಅಮೋಘ. ಯು.ಚಚಡಿ -ಅಟ್ಯಾ-ಪಾಟ್ಯಾ
ರಂಜಿತ ಎಂ.ಪಿ.ಬಾಲ್‌ ಬ್ಯಾಂಡ್ಮಿಂಟನ್‌
ಪ್ರದೀಪ್‌ ಕೆ.ಸಿ.ಖೋ-ಖೋ
ಸುಮಿತಾ ಯು .ಎಂ-ಕಬಡ್ಡಿ
ಡಾ.ಜೀವಂಧರ್‌ ಬಲ್ಲಾಳ್‌ -ಕಂಬಳ
ಆನಂದ್‌ ಇರ್ವತ್ತೂರು -ಕಂಬಳ
ಆನಂದ್‌ ಎಲ್‌ -ಕುಸ್ತಿ
ಮೊಳಪ್ಪ ವೀರಪ್ಪ ಗುಳಬಾಳ-ಗುಂಡು ಎತ್ತುವುದು

ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾದವರು
ಜಾನ್‌ ಕ್ರಿಸ್ಟೋಫ‌ರ್‌ ನಿರ್ಮಲ್‌ ಕುಮಾರ್‌ -ಈಜು
ಶಿವಾನಂದ್‌ ಆರ್‌-ಕುಸ್ತಿ

Comments are closed.