ಕರಾವಳಿ

ಪ್ರಸವಾನಂತರದ ಖಿನ್ನತೆಯನ್ನು ನಿಭಾಯಿಸಲು ಕೆಲವು ಸಲಹೆ

Pinterest LinkedIn Tumblr

ಹೊಸ ತಾಯಿಯು, ಅಳುವ ಪುಟಾಣಿಯೊಂದಿಗೆ ತನ್ನ ಮನೆಯನ್ನು ಪ್ರವೇಶಿಸುವಾಗ, ಹತ್ತು ಹಲವು ಭಾವನೆಗಳ ಮೂಲಕ ಹಾದು ಹೋಗುತ್ತಾರೆ. ತಾಯಿಯಾಗಿ, ಭಯ, ಸಂತೋಷ ಹಾಗೂ ಕೆಲವೊಮ್ಮೆ ಖಿನ್ನತೆಗೂ ಒಳಗಾಗುತ್ತಾರೆ. ನೀವು ದುಃಖದಿಂದ ನಿಮ್ಮ ದಿನವನ್ನು ಪ್ರಾರಂಭಿಸಿ, ದಿನವಿಡೀ ಅದೇ ಮನೋಭಾವದಲ್ಲಿದ್ದರೆ ನೀವು ಪ್ರಸವಾನಂತರದ ಖಿನ್ನತೆಗೆ (PPD)ಒಳಗಾಗಿದ್ದೀರೆಂದು ತಿಳಿದುಕೊಳ್ಳಬೇಕು.

ಇದು ಎಲ್ಲಾ ಪ್ರಸವದ ಮೊದಲ ಕೆಲವು ವಾರಗಳಲ್ಲಿ ಪ್ರಾರಂಭವಾಗುವ ಈ ಮನೋರೋಗವು ನೀವು ಜನ್ಮ ನೀಡಿದ ನಂತರ ಸುಮಾರು ಆರು ತಿಂಗಳ ಕಾಲ ಉಳಿಯಬಹುದು.ಭಾವನೆಗಳ ತೊಳ‍‍ಲಾಟಗಳ ಏರಿಳಿತಗಳ‍‍ಲ್ಲಿ ಸಿಲುಕಿ ನೀವು ನಲುಗುವ ನಿಮಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಕಠಿಣವಾಗುವುದರೊಂದಿಗೆ, ಮಗುವಿನೊಂದಿಗೆ ಭಾವನಾತ್ಮಕವಾಗಿ ಸ್ಪಂದಿಸಲೂ ಕಷ್ಟವಾಗುತ್ತದೆ.

ನೀವು ಈ ಎಲ್ಲಾ ವಿಷಯಗಳನ್ನೂ ಅನುಭವಿಸುತ್ತಿರುವವರು ನೀವು ಮಾತ್ರ ಮೊದಲಿಗರಲ್ಲ.ಪ್ರತೀ ೭ ಮಹಿಳೆಯರಲ್ಲೊಬ್ಬರು ಪ್ರಸವಾನಂತರದ ಖಿನ್ನತೆಯಿಂದ ಬಳ‍‍ಲುತ್ತಾರೆ.ಪ್ರಸವಾನಂತರದ ಖಿನ್ನತೆಯ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಉತ್ತಮವಾದ ಮಾರ್ಗವೆಂದರೆ ವೈದ್ಯರನ್ನು ಭೇಟಿ ಮಾಡುವುದೇ ಆಗಿದೆ.

ಪ್ರಸವಾನಂತರದ ಖಿನ್ನತೆಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವ ಕೆಲವು ವಿಧಾನಗಳು ಇಲ್ಲಿವೆ:

(೧) ನಿಮಗಾಗಿ ಕೆಲವು ಸಮಯವನ್ನು ಮೀಸಲಾಗಿಡಿ
ಮನೆಗೆಲಸದ ಹೊರೆಯನ್ನು ಅನುಭವಿಸುವ ನೀವು,ಮಗುವನ್ನು ಶುಶ್ರೂಷೆ ಮಾಡುವ ಮಂಚದ ಮೇಲೆ ಅಂಟಿಕೊಳ್ಳಬೇಕಾಗಿಬರಬಹುದು. ಗೊಂದಲಮಯ ಮನೆ ಮತ್ತು ಇತರ ಜವಾಬ್ದಾರಿಗಳ ದುಷ್ಪರಿಣಾಮವನ್ನು ನೋಡುತ್ತಾ ನೀವು ಮನೆಗೆಲಸ ಮಾಡಬೇಕಾದ ಒತ್ತಡವನ್ನು ನಿಭಾಯಿಸಲು, ಕುಟುಂಬದ ಇತರ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಬಹುದು ಅಥವಾ ಕೆಲವೇ ವಾರಗಳವರೆಗೆ ಬೇಬಿಸಿಟ್ಟರ್ ಅನ್ನು ನೇಮಿಸಿಕೊಳ್ಳಬಹುದು.ಇದರಿಂದ ನಿಮ್ಮ ಮಾನಸಿಕ ಒತ್ತಡವನ್ನು ಮೀರಿಸಬಹುದು.

ಹೀಗೆ ಸುಶ್ರೂಷಾ ಅಧಿವೇಶನಗಳ ನಡುವೆ ನಿಮಗಾಗಿ ಸಮಯವನ್ನು ಕಂಡುಹಿಡಿಯಲು ನಿಮಗೆ ಸಾಧ್ಯವಾಗುತ್ತದೆ. ಈ ರೀತಿ ನೀವು ಚಲನಚಿತ್ರ ವೀಕ್ಷಣೆ, ಓದು, ಸುತ್ತಾಟ ಅಥವಾ ಶಾಂತಿಯುತ ಕಿರು ನಿದ್ದೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ !

(೨) ಆರೋಗ್ಯಕರ ಆಹಾರ ಸೇವನೆ
ಆರೋಗ್ಯಕರ ಆಹಾರ ಸೇವನೆಯಿಂದ ನಿಮ್ಮ ಖಿನ್ನತೆಯೇನೂ ಗುಣಪಡುವುದಿಲ್ಲ. ಆದರೆ ಅನಾರೋಗ್ಯಕರವಾದ ಆಹಾರಗಳಿಂದ ನಿಮ್ಮನ್ನು ದೂರವಿರಿಸಬಹುದು. ಈ ರೀತಿಯಾಗಿ ನೀವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಸಮಸ್ಯೆಗಳೊಂದಿಗೆ ವ್ಯವಹರಿಸುವಾಗ ಕೆಲವು ಒಳ್ಳೆಯತನವನ್ನು ಕಾಪಾಡಲು ಸಾಕಷ್ಟು ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳುತ್ತೀರಿ.

ಸೇಬುಗಳು, ಕ್ಯಾರೆಟ್ಗಳು ಅಥವಾ ಕಡಲೆಕಾಯಿ ಬೆಣ್ಣೆ ಮುಂತಾದ ಸಂಪೂರ್ಣ ಆಹಾರವನ್ನು ಆಯ್ಕೆ ಮಾಡಿ! ತೀರಾ ಬ್ಯುಸಿಯಾಗಿರುವ ತಾಯಿಯರು ಆಯ್ಕೆಮಾಡಲಿರುವ ಅತ್ಯುತ್ತಮ ಆಹಾರಗಳಾಗಿವೆ.

(೩) ವ್ಯಾಯಾಮ
ಮಾತೃತ್ವದ ಮೊದಲ ಹೆಜ್ಜೆ ಖಂಡಿತವಾಗಿಯೂ ನಿಮ್ಮನ್ನು ಕಂಗೆಡಿಸಿರುತ್ತವೆ. ದಿನದ ಅಂತ್ಯದ ವೇಳೆಗೆ ನೀವು ಸುಸ್ತಾಗಿರಬಹುದು, ಆದರೆ ಇದು ವ್ಯಾಯಾಮ ಮಾಡದಿರುವುದಕ್ಕೆ ನೀಡಬಹುದಾದ ಕಾರಣವಲ್ಲ. ದೈಹಿಕ ಚಟುವಟಿಕೆಯು ಪ್ರಸವಾನಂತರದ ಖಿನ್ನತೆಯನ್ನು ಗುಣಪಡಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ವ್ಯಾಯಾಮವೆಂದರೆ ನಿಂದುಕೊಂಡಂತೆ ಮಾಡುವ ದೇಹದಂಡನೆಯಲ್ಲ. ಶ್ರಮದಾಯಕ ವ್ಯಾಯಾಮಗಳನ್ನು ಮಾಡಬೇಕು ಎಂದು ಅರ್ಥವಲ್ಲ. ನಿಮ್ಮ ಮಗುವಿನೊಂದಿಗೆ, ಅದರ ನೆಚ್ಚಿನ ಉದ್ಯಾನವನದಲ್ಲಿ ಚುರುಕಾಗಿ ನಡೆಯುವುದು ಕೂಡಾ ವ್ಯಾಯಾಮವೇ…. ಮತ್ತು ವಾಕಿಂಗ್ ತನ್ನ ಮ್ಯಾಜಿಕ್ ಖಂಡಿತವಾಗಿಯೂ ಮಾಡುತ್ತದೆ!

(೪) ಮನಸ್ಸನ್ನು ಸಂತೋಷಕರವಾಗಿರಿಸಿಕೊಳ್ಳಿ
ನೀವು ಸಾಧ್ಯವಾದಷ್ಟು ಧನಾತ್ಮಕವಾಗಿ ಉಳಿಯಲು ಪ್ರಯತ್ನಿಸಿ. ಇದು ಋಣಾತ್ಮಕ ಜಾಲಗಳಲ್ಲಿ ನೀವು ಜಾರಿ ಬೀಳ‍‍ಲು ಅವಕಾಶ ನೀಡುವುದಿಲ್ಲ. ನಿಮ್ಮ ಮಗುವನ್ನು ನೀವು ಎಷ್ಟು ಪ್ರೀತಿಸುವಿರೆಂದೂ ಮತ್ತು ನಿಮ್ಮ ಕುಟುಂಬಕ್ಕೆ ನಿಮ್ಮ ಅಗತ್ಯವಿದೆಯೆಂಬುದನ್ನು ನೀವು ನೆನಪಿಸಿಕೊಳ್ಳಿ. ಖಿನ್ನತೆ ತಾತ್ಕಾಲಿಕವೆಂಬ ವಿಷಯವನ್ನು ಅರ್ಥಮಾಡಿಕೊಳ್ಳಿ ! ಈ ರೀತಿಯಾಗಿ ನಿಮ್ಮ ಜೀವನ ಮತ್ತು ಜವಾಬ್ದಾರಿಗಳನ್ನು ನೀವು ಉತ್ತಮವಾಗಿ ನಿಭಾಯಿಸಿ. ನಿಮಗೆ ಸಂತೋಷವನ್ನುಂಟುಮಾಡುವ ವಿಷಯಗಳತ್ತ ಗಮನ ಕೇಂದ್ರೀಕರಿಸಿ.

(೫) ಶರೀರ ಸೌಂದರ್ಯ
ಸ್ವಲ್ಪ ಸಮಯದವರೆಗೆ ನಿಮ್ಮ ಮಗುವು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರೂ, ನಿಮ್ಮ ಶರೀರ ಸೌಂದರ್ಯ ಹಾಗೂ ನಿಲುವನ್ನು ಕಾಪಾಡಿಕೊಳ್ಳಿ . ವಾಸ್ತವವಾಗಿ, ನಿಮ್ಮ ವಿಶ್ವಾಸದ 45% ನಿಮ್ಮನ್ನು ನೀವು ಪ್ರದರ್ಶಿಸುವ ವಿಧಾನದಲ್ಲಿದೆ. ಆದ್ದರಿಂದ, ನಿಮ್ಮ ಕೂದಲನ್ನು ಹರಿಯಬಿಟ್ಟು, ಧಿರಿಸುಗಳ‍‍ಲ್ಲಿ ಗಮನಹರಿಸಿ. ಪ್ರಸಾಧನಗಳ ಬಳಕೆಯಿಂದ ಎಲ್ಲರ ಕಣ್ಣುಗುಡ್ಡೆಗಳನ್ನು ನಿಮ್ಮತ್ತ ತಿರುಗುವಂತಾಗಿಸಿ. ನಿಮ್ಮ ದೇಹವನ್ನು ಆರೈಕೆ ಮಾಡಿ ಸ್ವಯಂ-ಚಿತ್ರಣವನ್ನು ಸುಧಾರಿಸುವುದು, ನಿಮ್ಮ ಹಳೆಯ ಸ್ಥಾನಕ್ಕೆ ಮರಳಿ ಬರಲಿರುವ ಉತ್ತಮ ಮಾರ್ಗವೂ ಹೌದು !!

(೬) ನಗುವೇ ಪರಿಹಾರ
ಜೋರಾಗಿ ನಗಲಿರುವ ಯಾವುದೇ ಸಂದರ್ಭವನ್ನೂ ಕಳೆದುಕೊಳ್ಳಬೇಡಿ ! ನಗುವುದು ಸ್ವಯಂಚಾಲಿತವಾಗಿ ನಿಮಗೆ ಧನಾತ್ಮಕ ಮತ್ತು ಸಂತೋಷದ ಅನುಭವವನ್ನು ನೀಡುತ್ತದೆ ಮತ್ತು ಆ ಮೂಲಕ ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ನಿಮ್ಮನ್ನು ನಗುವಂತೆ ಮಾಡುವ ಜನರೊಂದಿಗೆ ಮತ್ತು ವಿಷಯಗಳಿಂದ (ಇದು ನಿಮ್ಮ ಮೆಚ್ಚಿನ ಟಿವಿ ಶೋ ಅಥವಾ ನಿಮ್ಮ ಉತ್ತಮ ಸ್ನೇಹಿತನೊಂದಿಗೆ ವಿನೋದ ಗಾಸಿಪ್ ಅಧಿವೇಶನವಾಗಿರಬಹುದು) ನಿಮ್ಮನ್ನು ಸುತ್ತುವರೆಸಿರಿ.

(೭) ಹಾಡು
ನೀವು ಹಾಡಿದಾಗ, ನಿಮ್ಮ ಧ್ವನಿಯು ನಿಮ್ಮ ಮನಸ್ಥಿತಿ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವುದು. ಈ ರೀತಿ ನೀವು ನಿಮ್ಮ ಮಗುವಿಗಾಗಿ ಕೂಡಾ ಹಾಡಬಹುದು ಮತ್ತು ಒಮ್ಮೆ ನಿಮ್ಮ ಮಗು ನಿಮ್ಮೊಂದಿಗೆ ಪರಸ್ಪರ ಸಂಪರ್ಕವನ್ನು ಪ್ರಾರಂಭಿಸಿದಾಗ, ಅವಳ ಮುಖದ ಮೇಲೆ ಕಿರುನಗೆ ಪ್ರತಿಫಲನಗೊಂಡು ನಿಮ್ಮನ್ನು ಹಗುರಗೊಳಿಸುತ್ತದೆ.

ಪ್ರಸವಾನಂತರದ ಖಿನ್ನತೆ ಬಹಳ ತಾತ್ಕಾಲಿಕ ಹಂತವಾಗಿದ್ದು ಅದರಿಂದ ಸುಲಭವಾಗಿ ಹೊರಬರಲು ಸಾಧ್ಯವಿದೆ. ಔಷಧಿಗಳು ಮತ್ತು ಇತರ ಪರಿಹಾರಗಳು ಲಭ್ಯವಿವೆಯಾದರೂ, ನೀವು ಸ್ವತಃ ಸಹಾಯ ಮಾಡಲು ಸಿದ್ಧರಿದ್ದರೆ, ಸ್ವತಃ ಚಿಕಿತ್ಸೆ ಮಾಡಬಹುದು. ನಿಮ್ಮ ಮಗುವಿನೊಂದಿಗೆ ನೀವು ಎಷ್ಟು ವಿನೋದವನ್ನು ಹೊಂದಲಿದ್ದೀರೆಂದೂ, ನಿಮ್ಮ ಕುಟುಂಬದೊಂದಿಗೆ ಎಷ್ಟು ಸುಂದರವಾದ ಜೀವನವು ನಡೆಸಲಿದ್ದೀರೆಂದೂ ಯೋಚಿಸಿ ನೋಡಿದರೆ ನೀವು ಖಂಡಿತವಾಗಿಯೂ ಯೋಧ ವನಿತೆಯರಂತಾಗಿ, ನಿಮ್ಮ ವಿಷಾದ ಭಾವನೆಯನ್ನು ಜಯಿಸಲು ಹೋರಾಡಲು ಸಿದ್ಧರಾಗುವಿರಿ …

Comments are closed.