ಕರಾವಳಿ

ಬೌದ್ಧ ಧರ್ಮದ ಪ್ರಕಾರ ಕುಂದಾಪುರದ ತಲ್ಲೂರಿನಲ್ಲಿ ನಡೆಯಿತು ‘ಮಾಯಾ ನಂದನ’ ಗೃಹಪ್ರವೇಶ.!

Pinterest LinkedIn Tumblr

ಕುಂದಾಪುರ: ಬುದ್ಧನ ಶಾಂತಿ, ಅಂಬೇಡ್ಕರ್ ಅವರ ಅಧ್ಯಯನ ಮೂಲಕ ಇಡೀ ಜಗತ್ತು ಭಾರತ ದೇಶವನ್ನು ಗುರುತಿಸುತ್ತದೆ. ದಾರ್ಶನಿಕ ವ್ಯಕ್ತಿಯಾದ ಬುದ್ಧನ ಚಿಂತನೆಗಳು ಇಂದಿಗೂ ಅಮರ. ಅವರ ಮೈತ್ರಿ ಭಾವನೆಯನ್ನು‌ ಪರಿಣಾಮಕಾರಿಯಾಗಿ ಮೈಗೂಡಿಸಿಕೊಳ್ಳಬೇಕು. ಬುದ್ಧನನ್ನು ಮರೆತರೆ ಯುದ್ಧ ಖಚಿತ. ಅಂಬೇಡ್ಕರ್ ಚಿಂತನೆಯಂತೆ‌ ವಿದ್ಯೆ ಅತ್ಯಗತ್ಯ. ಜಗತ್ತೇ ಶಾಂತಿಯಿಲ್ಲದೆ ಕಂಗೆಡುತ್ತಿರುವ ಈ ಕಾಲಘಟ್ಟದಲ್ಲಿ ಬುದ್ಧನ ಶಾಂತಿ, ಕರುಣೆ, ಮೈತ್ರಿ‌‌ ನೆಲೆಸಲಿ ಎಂದು ಅಣದೂರು ಬುದ್ಧವಿಹಾರದ ಪೂಜ್ಯ ವರಜ್ಯೋತಿ ಬಂತೇಜಿಯವರು ಅಭಿಪ್ರಾಯಪಟ್ಟರು.

ಕುಂದಾಪುರ ತಾಲೂಕಿನ ತಲ್ಲೂರು ಸಮೀಪದ ಗುಡ್ಡೆಯಂಗಡಿ ಬಳಿ ನಿರ್ಮಿಸಿದ ನೂತನ‌ಗೃಹ ‘ಮಾಯಾ ನಂದನ’ ಗೃಹಪ್ರವೇಶವು ಮನೆಯವರ ಇಚ್ಚೆಯಂತೆ ಬುದ್ಧ ಧರ್ಮದ ಪ್ರಕಾರವಾಗಿ ನಡೆದಿದ್ದು ಈ‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವದಿಸಿದರು.

ಮೊದಲಿಗೆ ತ್ರಿಶರಣ ಪಂಚಶೀಲ ಬೋಧನೆ, ಬುದ್ಧ-ಧಮ್ಮ- ಸಂಘ ವಂದನೆ, ಕರಣೀಯ ಮೆತ್ತಸುತ್ತ-ಮೈತ್ರೀಯ ಘಾತಗಳು, ಪರಿತ್ರಾಣ ಪಾಠ ಹಾಗೂ ಜಯ ಮಂಗಳಾಘಾತ ನೆರವೇರಿಸಿದರು.

ಈ ಸಂದರ್ಭದಲ್ಲಿ ‘ಮಾಯಾ ನಂದನ’ ನಿವಾಸದ ಯಜಮಾನರಾದ ಮಂಜುನಾಥ-ಸಾಧು ದಂಪತಿ, ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ರಾಜ್ಯ ಸಂಚಾಲಕರಾದ ಉದಯ್ ಕುಮಾರ್ ತಲ್ಲೂರು, ರಾಜ್ಯ ಸಂಘಟನಾ ಸಂಚಾಲಕರಾದ ನಾಗಣ್ಣ ಕಲ್ಲದೇವನಹಳ್ಳಿ, ಚಂದ್ರಮ ತಲ್ಲೂರು,ತಲ್ಲೂರು ಗ್ರಾಪಂ ಅಧ್ಯಕ್ಷೆ ಭೀಮವ್ವ, ಸದಸ್ಯರಾದ ಚಂದ್ರ ದೇವಾಡಿಗ, ಸಂಜೀವ ದೇವಾಡಿಗ, ಕೃಷ್ಣ ಪೂಜಾರಿ, ಮಾಜಿ ಸದಸ್ಯ ವೆಂಕಟ, ಬೌದ್ಧಧರ್ಮಾಚಾರಿ ಶಂಭು ಸುವರ್ಣ ಉಡುಪಿ, ಭೀಮಘರ್ಜನೆ ಸಂಘಟನೆಯ ಪ್ರಮುಖರಾದ ಚಂದ್ರ ಅಲ್ತಾರು, ಕೃಷ್ಣ ಅಲ್ತಾರು, ಕೆ.ಎಸ್ ವಿಜಯ್ ಕುಂದಾಪುರ, ಸುಖಾನಂದ,ಬಾಬು, ಉದಯ್,ಕಿರಣ್, ವಸಂತ್‌ ಮೊದಲಾದವರಿದ್ದರು.

ವಸಂತ ವಂಡ್ಸೆ ಕಾರ್ಯಕ್ರಮ ನಿರ್ವಹಿಸಿದರು.

Comments are closed.