ಅಂತರಾಷ್ಟ್ರೀಯ

ರಾಜಸ್ಥಾನ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸುಧೀರ್ ಅತ್ತಾವರ್ ನಿರ್ದೇಶನದ “ಮಡಿ” ಆಯ್ಕೆ

Pinterest LinkedIn Tumblr

 

ಮಾರ್ಚ್ 20 ರಿಂದ 24ನೇ ತಾರೀಕಿನ ವರೆಗೆ ನಡೆಯಲಿರುವ ರಾಜಸ್ಥಾನ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ಸ್ಫರ್ಧಾ ವಿಭಾಗದಲ್ಲಿ ಸುಧೀರ್ ಅತ್ತಾವರ್ ನಿರ್ದೇಶನದ ಮಡಿ- (ಮಲಿನ ಮನಸ್ಸುಗಳ ಕ್ರೌರ್ಯ್- ಟ್ಯಾಗ್ ಲೈನ್ ) ಚಿತ್ರ ಆಯ್ಕೆ ಗೊಂಡಿದೆ.

ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯಿರುವ ಈ ಸಿನಿಮಾವನ್ನು ವಿದ್ಯಾಧರ್ ಶೆಟ್ಟಿ ಮತ್ತು ಸೂರಜ್ ಚಾರ್ಲ್ಸ್ ನಿರ್ಮಿಸಿದ್ದು, ಮುಂಬಾಯಿಯ ಸಕ್ಸಸ್ ಫಿಲಂಸ್ ಮತ್ತು ಸೂರಜ್ ವಿಷುವಲ್ಸ್ ಸಂಸ್ಥೆಗಳ ಬ್ಯಾನರ್ ನ ಅಡಿ ತಯಾರಿಸಲಾಗಿದೆ.

ಈಗಾಗಲೇ ಮೊದಲ ಬಾರಿಗೆ ಆನ್ಲೈನ್ ಪ್ರೀಮಿಯರ್ ಮಾಡಿಕೊಂಡಿರುವ “ಮಡಿ” ಸಿನಿಮಾವನ್ನು ಅಂತಾ ರಾಷ್ಟ್ರೀಯ ಕಲಾವಿದೆ ಶರೋನ್ ಪ್ರಭಾಕರ್, ಫೆಮಿನಾ ಮಿಸ್ ಇಂಡಿಯಾದ ಸ್ಮೈಲ್ ಡಿಸೈನರ್ ಡಾ ಸಂದೇಶ್ ಮಯೇಕರ್ ಮೊದಲಾದ ಸೆಲೆಬ್ರಿಟಿಗಳ ಸಮೇತ, ದೇಶಾದ್ಯಂತ ಹಲವಾರು ಸಿನಿ ಪ್ರಿಯರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರಲ್ಲದೆ, ಸಿನಿಮಾವು ಆಸ್ಕರ್ ಪ್ರಶಸ್ತಿ ಗಳಿಸಲು ಅರ್ಹ ಎನ್ನುವಂತಹ ಕಾಮೆಂಟನ್ನು ಕೂಡಾ ಯು ಟ್ಯೂಬ್ನಲ್ಲಿ ಮಾಡಿರುತ್ತಾರೆ .

ಜೈಪುರ ಮತ್ತು ಜೋದ್ ಪುರ ದಲ್ಲಿ ನಡೆಯುವ ಈ ಚಿತ್ರೋತ್ಸವದಲ್ಲಿ ಪ್ರಪಂಚದಾದ್ಯಂತದ ಸುಮಾರು 50 ಕ್ಕಿಂತಲೂ ಹೆಚ್ಚು ಸಿನಿಮಾಗಳು ಪ್ರದರ್ಷನಕ್ಕೆ ಆಯ್ಕೆಯಾಗಿದ್ದು, ವರ್ಲ್ಡ್ ಸ್ಪರ್ಧಾ ವಿಭಾಗದಲ್ಲಿ ಸುಮಾರು 15 ಸಿನಿಮಾಗಳೊಂದಿಗೆ “ಮಡಿ” ಪ್ರತಿಷ್ಟಿತ ಪ್ರಶಸ್ತಿಗೆ ಸೆಣಸಾಡಲಿದೆ.

ಮಾರ್ಚ್ 24ರಂದು ಜೈಪುರದ ಮಿರಾಜ್ ಸಿನಿಮಾಸ್ ಮತ್ತು ಜೋಧ್ ಪುರದ ಮಿರಾಜ್ ಬಯೋಸ್ಕೋಪ್ ಸಿನಿಮಾಹಾಲ್ ಗಳಲ್ಲಿ “ಮಡಿ” ಪ್ರದರ್ಷನ ಗೊಳ್ಳಲಿ್ದೆ.

ಕನ್ನಡದ ಖ್ಯಾತ ಕಲಾವಿದೆ ಎಂ ಡಿ ಪಲ್ಲವಿ, ಖ್ಯಾತ ರಂಗಭೂಮಿ ಕಲಾವಿದ ರಾಮಚಂದ್ರ ದೇವಾಡಿಗ, ಮಾಸ್ಟರ್  ಸಂತೋಷ್, ವೆಂಕಟ್ ರಾವ್, ವಿದ್ಯಾಧರ್ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು ಅಭಿನಯಿಸಿರುವ ಈ ಚಿತ್ರ ಕ್ಕೆ ಬಿ ಎಸ್ ಶಾಸ್ತ್ರಿ-ಕ್ಯಾಮರಾ, ವಿದ್ಯಾಧರ್ ಶೆಟ್ಟಿ- ಸಂಕಲನ , ಆಕಾಶ್ ಪತುಲೆ-ಸಂಗೀತ ವಿದ್ದು, ಕಥೆ-ಚಿತ್ರಕಥೆ-ಸಂಭಾಷಣೆಯ ಜೊತೆಗೆ ಕಲಾನಿರ್ದೇಶನ ಮತ್ತು ಕಾಸ್ಟ್ಯೂಮ್ ಡಿಸೈನ್ ಕೂಡಾ ಸುಧೀರ್ ಅತ್ತಾವರ್ ಮಾಡಿರುತ್ತಾರೆ.

Comments are closed.