ಕುಂದಾಪುರ: ದೇಶೀ ತಳಿಗಳ ರಕ್ಷಣೆ, ಸಾಕಲಾಗದೆ ತಂದು ಬಿಡುವ ಹಸು-ಕರು,ಹೋರಿ, ಅನಾರೋಗ್ಯ ಪೀಡಿತ, ಬೀಡಾಡಿ ದನಗಳು, ಅನಾರೋಗ್ಯ ಪೀಡಿತ ಜಾನುವಾರು ರಕ್ಷಣೆಗೆ ಇನ್ನು ಮುಂದೆ ಗೋ ಶಾಲೆ ಎಲ್ಲಿದೆ ಎಂದು ಹುಡುಕಿ ಹೊರಡುವ ಪ್ರಮೇಯ ಇಲ್ಲ. ನಮ್ಮ ನಿಮ್ಮೂರ ದೇವಸ್ಥಾನಗಳಲ್ಲಿ ಗೋ ಕೇಂದ್ರ ತೆರೆಯುವ ಮೂಲಕ ಸರ್ಕಾರವೇ ಗೋವುಗಳ ರಕ್ಷಣೆಗೆ ಮುಂದಾಗಲಿದೆ.
ಗೋ ಕೇಂದ್ರ ತೆರೆಯುವ ಉದ್ದೇಶ ರಾಜ್ಯ ಬಿಜೆಪಿ ಸರ್ಕಾರ ಹಳೇ ವಿಷಯವಾಗಿದ್ದು, ಹಳೇ ಯೋಜನೆಗೆ ಹೊಸ ರೂಪ ನೀಡಿ, ರಾಜ್ಯದ ಬೇರೆ ಕಡೆ ಎ ದರ್ಜೆ ದೇವಸ್ಥಾನಗಳಲ್ಲಿ ಗೋವು ಕೇಂದ್ರ ಆರಂಭವಾಗಲಿದೆ. ಸರ್ಕಾರ ರಾಜ್ಯದ 25 ಎ ದರ್ಜೆ ದೇವಸ್ಥಾನ ಗುರುತಿಸಿದ್ದು, ಸರಳ ಸಾಮೂಹಿಕ ವಿವಾಹ ನಂತರ ಗೋವು ಕೇಂದ್ರ ಒಂದೊಂದಾಗಿ ಸೇವೆಗೆ ಸಿದ್ದವಾಗಲಿದೆ.

(ಸಾಂದರ್ಭಿಕ ಚಿತ್ರ)
ಕೊಲ್ಲೂರು ಶ್ರೀ ಮೂಕಾಬಿಂಕಾ ದೇವಸ್ಥಾನ (ಕೊಲ್ಲೂರಲ್ಲಿ ಗೋಶಾಲೆ ಈಗಾಗಲೇ ಇದೆ), ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಹಿತಿ ರಾಜ್ಯದ ಬೇರೆ ಬೇರೆ ಜಿಲ್ಲೆ ಪ್ರಥಮ ದರ್ಜೆ ದೇವಸ್ಥಾನಗಳಲ್ಲಿ ಗೋವು ಕೇಂದ್ರ ತೆರೆಯಲಾಗುತ್ತಿದ್ದು, ಗೋವು ಕೇಂದ್ರ ಹೇಗಿರಬೇಕು, ಹೇಗಿರಬಾರದು ಎನ್ನುವ ಬಗ್ಗೆ ವಿವಿಧ ಮಠ ಸ್ವಾಮೀಜಿ, ಸಾಧು-ಸಂತರು, ಧಾರ್ಮಿಕ ಮುಖಂಡರು, ತಜ್ಞರ ಜೊತೆ ಸಮಾಲೋಚನೆ ನಡೆಸಲಾಗಿದೆ. ಉಡುಪಿ ಜಿಲ್ಲೆ ಬ್ರಹ್ಮಾವರ ನೀಲಾವರದಲ್ಲಿ ಪೇಜಾವರ ಸ್ವಾಮಿ ನಡೆಸುತ್ತಿರುವ ಗೋಶಾಲೆ ಹಾಗೂ ಹೊಸನಗರ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಕಲ್ಪನೆ ಗೋಸ್ವರ್ಗ ಮಾದರಿಯಲ್ಲಿ ಗೋವು ಸೇವಾ ಕೇಂದ್ರ ಇರಲಿದ ಎಂಬ ಚಿಕ್ಕ ಸುಳಿವನ್ನು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಟ್ಟುಕೊಟ್ಟಿದ್ದಾರೆ.

10ಎಕ್ರೆ ಜಾಗದಲ್ಲಿ ಗೋವು ಸೇವಾ ಕೇಂದ್ರ..
ಯಾವ ದೇವಸ್ಥಾನದಲ್ಲಿ ಗೋ ಕೇಂದ್ರ ಆರಂಭಿಸಲಾಗುತ್ತದೋ ಅಲ್ಲಿರುವ 10ಎಕ್ರೆ ಸರ್ಕಾರಿ ಜಾಗ ಧಾರ್ಮಿಕ ದತ್ತಿ ಇಲಾಖೆ ವಶಕ್ಕೆ ಪಡೆಯುತ್ತದೆ. ಜಾಗ ದೇವಸ್ಥಾನ ಬಳಿ ಇರಬೇಕು ಅಂತೇನು ಎಲ್ಲಾ. ದೇವಸ್ಥಾನ ಸರಿಹದ್ದಿನಲ್ಲಿರುವ ಹುಲ್ಲುಗಾವಲು, ಬೆಟ್ಟದ ಮಗ್ಗಲು, ಅರಣ್ಯ ಪರಿಸರ ಸ್ಥಳವಾದರೂ ನಡೆಯುತ್ತದೆ. ಕೇಂದ್ರದಲ್ಲಿ ಅನಾಥ, ಬೀಡಾಡಿ ಹಸುಗಳ ರಕ್ಷಣೆ ಮಾಡಲಾಗುತ್ತದೆ. ಗೋವು ಕೇಂದ್ರದಲ್ಲಿ ಕುಡಿಯುವ ನೀರು, ಹುಲ್ಲು, ಔಷಧೋಪಚಾರ ಅಲ್ಲದೆ, ಪೊಲೀಸರು ವಶಕ್ಕೆ ಪಡೆದ ಗೋವುಗಳಿಗೆ ಆಶ್ರಯ ನೀಡಲಾಗುತ್ತದೆ. ನೀರು, ನೆರಳ ಆಹಾರ ವಿಹಾರ ಗೋವು ಕೇಂದ್ರದಲ್ಲಿ ಇರಬೇಕು ಎನ್ನುವುದು ಸರ್ಕಾರದ ಗುರಿ, ಆರಂಭದಲ್ಲಿ ನೂರು ಗೋವು ರಕ್ಷಣೆ ಗುರಿಯಾಗಿದ್ದು, ನಂತರ ಅನುಕೂಲಕ್ಕೆ ತಕ್ಕಂತೆ ವಿಸ್ತರಣೆ ಮಾಡಲಾಗುತ್ತದೆ. ಗೋ ಕೇಂದ್ರದ ಖರ್ಚುವೆಚ್ಚಕ್ಕೆ ದೇವಸ್ಥಾನದಲ್ಲಿ ಸಿಗುವ ಆದಾಯವನ್ನೇ ಬಳಸಲಾಗುತ್ತದೆ. ಇಷ್ಟು ಭಾಗ ಬಳಸಬೇಕು, ಎಷ್ಟು ಶೇ. ಉಪಯೋಗಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಗರ ಮಧ್ಯದಲ್ಲಿರುವ ದೇವಸ್ಥಾನಗಳಿಗೆ ಪ್ರಧಾನತೆ ನೀಡದೆ ಗ್ರಾಮಿಣ ಭಾಗದ ದೇವಸ್ಥಾನಗಳಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಖಾಸಗಿ ದೇವಸ್ಥಾವನಗಳಿಗೆ ಆದ್ಯತೆ ಇಲ್ಲ. ವಯಸ್ಸಾದ ಹಸು ತಂದು ಬಿಡಿ ಎನ್ನುವ ಉದ್ದೇಶ ಗೋವು ಕೇಂದ್ರಕ್ಕೆ ಇಲ್ಲ. ಅನಿವಾರ್ಯವಾಗಿ ಬಿಡಬೇಕಾದ ಸ್ಥಿತಿ ಬಂದರೆ ಸಕಾರಣ ಕೊಟ್ಟರೆ ಅವುಗಳಿಗೂ ಅವಕಾಶವಿದೆ.
ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಕಾಲದಲ್ಲಿ ರಾಜ್ಯದ 25 ಎ ದರ್ಜೆ ದೇವಸ್ಥಾನಗಳಲ್ಲಿ ಗೋವು ಕೇಂದ್ರ ಸ್ಥಾಪಿಸುವ ಯೋಜನೆ ಸಿದ್ದ ಮಾಡಿದ್ದು, ಬಿಜೆಪಿ ಸರ್ಕಾರ ಹೋದ ನಂತರ ಯೋಜನೆ ಮೂಲೆ ಗುಂಪಾಗಿತ್ತು. ಅದನ್ನೇ ಈಗ ಕೈಗೆತ್ತಿಕೊಂಡು ಗೋ ಕೇಂದ್ರ ಆರಂಭಿಸಲು ಚಾಲನೆ ನೀಡಲಾಗುತ್ತದೆ. ಆರಂಭದಲ್ಲಿ ಗೋ ಕೇಂದ್ರದಲ್ಲಿ 100 ಗೋವುಗಳಿಗೆ ಆಶ್ರಯ ನೀಡುವ ಅವಕಾಶ ಮಾಡಿಕೊಡಲಾಗುತ್ತಿದ್ದು, ಅವಶ್ಯಕತೆಗೆ ಅನುಸಾರ ವಿಸ್ತರಣೆ ಮಾಡಲಾಗುತ್ತದೆ. ಗೋವು ಕೇಂದ್ರದ ಮೂಲ ಉದ್ದೇಶ ದೇಶೀಯ ತಳಿಗಳ ರಕ್ಷಣೆ, ಶುದ್ಧ ಹಾಲು, ಕೃಷಿಗೆ ಗೊಬ್ಬರ ಮುಂತಾದ ಸೃಜನಾತ್ಮಕ ಉದ್ದೇಶ ಇಟ್ಟುಕೊಂಡಿದ್ದು, ಗೋವುಗಳ ಉಸ್ತುವಾರಿ ನೋಡಿಕೊಳ್ಳಲು ಆಳು-ಕಾಳು, ಮೇವು ನೀರು ಎಲ್ಲವನ್ನೂ ದೇವಳದ ವತಿಯಿಂದ ನೋಡಿಕೊಳ್ಳುವ ಜೊತೆ ನಿರ್ವಹಣೆ ವೆಚ್ಚ ದೇವಸ್ಥಾನದಿಂದಲೇ ಭರಿಸಲಾಗುತ್ತದೆ.ದಕ, ಉಡುಪಿ ಜಿಲ್ಲೆ ಸೇರಿ ರಾಜ್ಯದ ೨೫ ಎ ದರ್ಜೆ ದೇವಸ್ಥಾನಗಳಲ್ಲಿ ಗೋ ಕೇಂದ್ರ ತೆರೆಯಲಾಗುತ್ತಿದ್ದು, ಅವಶ್ಯಕತೆಗೆ ಅನುಗುಣವಾಗಿ ಬೇರೆ ಬೇರೆ ದೇವಸ್ಥಾನಗಳಿಗೂ ವಿಸ್ತರಿಸಲಾಗುತ್ತದೆ. ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆಸುತ್ತಿರುವ ಗೋಸ್ವರ್ಗದ ಮಾದರಿಯಲ್ಲಿ ಗೋ ಕೇಂದ್ರಗಳಿರುತ್ತದೆ.
– ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಮುಜರಾಯಿ ಸಚಿವ
ಈಗಾಗಲೇ ಕೊಲ್ಲೂರು ದೇವಸ್ಥಾನ ವತಿಯಿಂದ ಗೋಶಾಲೆ ನಡೆಸುತ್ತಿದ್ದು, ಸರ್ಕಾರವೇ ದೇವಸ್ಥಾನಗಳಲ್ಲಿ ಗೋವು ಕೇಂದ್ರ ಮೂಲಕ ಗೋವುಗಳ ರಕ್ಷಣೆಗೆ ಮುಂದಾಗಿರುವುದು ಸ್ವಾಗತಾರ್ಹ ಹಾಗೂ ಪ್ರಶಂಸಾರ್ಹ. ದೇವಸ್ಥಾನ ವತಿಯಿಂದ ಸರ್ಕಾರ ಗೋವುಗಳ ರಕ್ಷಣೆ ಮೂಲಭೂತ ಸೌಕರ್ಯ ಜಾಗದ ವ್ಯವಸ್ಥೆ ಮೂಲಕ ಗೋವುಗಳ ರಕ್ಷಣೆ ಆಗಬೇಕು. ವಿಸೇಷಚಾಗಿ ದೇಶೀ ತಳಿಗಳ ಹಾಗೂ ದೇಶೀ ಹಾಲು ಅಭಿವೃದ್ಧಿ ಆಗಬೇಕು. ಹಿಂದೆ ಹೇಗೆ ಮನೆಮನೆಗಳ ಹಾಲು ಜನ ಬಳಸುತ್ತಿದ್ದರೋ ಅಂತಾದ್ದೇ ವಾತಾವರಣ ಬರಬೇಕು. ಗೋವುಗಳ ರಕ್ಷಣೆ, ಸಂಖ್ಯೆ ವೃದ್ಧಿ ಮಾಡುವ ಯೋಜನೆ ಸ್ವಾಗತಿಸಲೇ ಬೇಕು.
– ಹರೀಶ್ ಶೆಟ್ಟಿ, ಅಧ್ಯಕ್ಷ ವ್ಯವಸ್ಥಾಪನಾ ಸಮಿತಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ.
Comments are closed.