ಕರಾವಳಿ

ಪೈಲ್ಸ್‌ನಿಂದ ಅಗುವ ನೋವಿನ ಉಪಶಮಕ್ಕೆ ಈ ಮೂರರ ಮಿಶ್ರಣ ಉತ್ತಮ

Pinterest LinkedIn Tumblr

ಪ್ರಕೃತಿ ನಮಗೆ ಕರುಣಿಸಿದ ದಿವ್ಯೌಷದ ಅರಶಿನ. ಅಂದ ಆರೋಗ್ಯ ಎರಡನ್ನೂ ನೀಡುವಲ್ಲಿ ಅರಶಿನ ಮುಖ್ಯ ಪಾತ್ರವಹಿಸುತ್ತದೆ. ಸಾವಿರಾರು ವರ್ಷಗಳಿಂದ ಅರಶಿನವನ್ನು ಔಷದಿಯಾಗಿ, ಸೌಂದರ್ಯ ವರ್ಧಕವಾಗಿ ಹಾಗೂ ಅಡುಗೆಯಲ್ಲಿ ಉಪಯೋಗಿಸುತ್ತಿದ್ದೇವೆ. ಅರಶಿನದಲ್ಲಿ ಆಂಟಿ ಇನ್ ಫ್ಲಮೇಟರಿ, ಆಂಟೀ ಬ್ಯಾಕ್ಟೀರಿಯಲ್, ಆಂಟಿ ಆಕ್ಸಿಡೆಂಟ್ ಗುಣಗಳು ಹೇರಳವಾಗಿವೆ. ಅಡುಗೆ ಮನೆಯಲ್ಲೇ ಸುಲಭವಾಗಿ ಸಿಗುವ ಅರಶಿನವನ್ನು ಕಡೆಗೆಣಿಸ ನಾವಿಂದು ವಿವಿಧ ಔಷದಿಗಳ ಮೊರೆಹೋಗುತ್ತಿದ್ದೇವೆ. ‘ಹಿತ್ತಲ ಗಿಡ ಮದ್ದಲ್ಲ’ ಎಂಬ ಗಾದೆಯಂತೆ ನಾವು ಅರಶಿನದ ಉಪಯೋಗಗಳನ್ನು ಕಡೆಗಾಣಿಸಿದರೂ ವಿದೇಶೀಯರು ಇದರ ಗುಣಗಳನ್ನು ಗುರುತಿಸಿ ಪೇಟೆಂಟ್ ಮಾಡಿದ್ದಾರೆ. ಇದರರ್ಥ ಮುಂಬರುವ ದಿನಗಳಲ್ಲಿ ನಮ್ಮ ಪೂರ್ವೀಕರು ಹೇಳಿರುವ ರೀತಿಯಲ್ಲಿ ಅರಶಿನವನ್ನು ಉಪಯೋಗಿಸಬೇಕಾದರೆ, ನಾವು ತೆರಿಗೆ ಕಟ್ಟಬೇಕು. ಬದಲಾದ ಜೀವನ ಶೈಲಿ ಹಾಗು ಆಹಾರ ಶೈಲಿಯಿಂದಾಗಿ ಹಲವಾರು ಜನರು ಮೂಲವ್ಯಾದಿ ಸಮಸ್ಯೆಯಿಂದ ನರಳುತ್ತಿದ್ದಾರೆ. ಅರಶಿನವನ್ನು ಯಾವ ರೀತಿ ಉಪಯೋಗಿಸಿದರೆ ಈ ಸಮಸ್ಯೆಯನ್ನು ನಿವಾರಿಸ ಬಹುದೆಂದುದನ್ನು ನೋಡೋಣ.

ಬೇಕಾಗುವ ಪದಾರ್ಥಗಳುಅರಶಿನ, ಸಾಸಿವೆ ಎಣ್ಣೆ, ಈರುಳ್ಳಿ.
ಮೊದಲಿಗೆ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಅರಶಿನ ಹಾಗೂ ಸಾಸಿವೆ ಎಣ್ಣೆ ಹಾಕಿ ಕಲೆಸಬೇಕು. ಈ ಪೇಸ್ಟನ್ನು ಪೈಲ್ಸ್ ಇರುವ ಜಾಗದಲ್ಲಿ ಹಚ್ಚಬೇಕು. ಹೀಗೆ ಮಾಡುವುದರಿಂದ ನೋವಿನಿಂದ ಉಪಶಮನ ದೊರೆಯುತ್ತದೆ. ಅದೇ ರೀತಿ ಫೈಲ್ಸ್ ಸಹ ಕಡಿಮೆಯಾಗುತ್ತವೆ.

ಅರಶಿನದ ಮತ್ತಷ್ಟು ಉಪಯೋಗಗಳು:
* ಮದ್ಯಪಾನ ಸೇವಿಸುವ ಅಭ್ಯಾಸವಿರುವವರು, ಬೆಳಿಗ್ಗೆ ಒಂದು ಲೋಟ ಮಜ್ಜಿಗೆಯಲ್ಲಿ ಸ್ವಲ್ಪ ಅರಶಿನ ಹಾಕಿ ಕುಡಿಯುವುದರಿಂದ ‘ಯಕೃತ್ತ್’ (ಲಿವರ್) ಹಾಳಾಗದಂತೆ ರಕ್ಷಿಸುತ್ತದೆ.
* ಕ್ಯಾನ್ಸರ್ ರೋಗವನ್ನು ಗುಣಪಡಿಸುವ ಶಕ್ತಿ ಅರಶಿನ ದಲ್ಲಿದೆ.
* ಹರಳೆಣ್ಣೆಗೆ ಸ್ವಲ್ಪ ಅರಶಿನ ಹಾಕಿ, ಈ ಮಿಶ್ರಣವನ್ನು ಶರೀರಕ್ಕೆ ಹಚ್ಚಿ ಅರ್ಧ ಗಂಟೆಯನಂತರ ಸ್ನಾನ ಮಾಡುವುದರಿಂದ ತುರಿಕೆ, ಚರ್ಮ ರೋಗಗಳು, ಮಚ್ಚೆಗಳು ಗುಣವಾಗುತ್ತವೆ.
* ರಾತ್ರಿ ಒಂದು ಲೋಟ ‘ರೋಸ್ ವಾಟರ್’ ಗೆ ಒಂದು ಚಮಚ ಅರಶಿನ ಬೆರೆಸಿ ಇಡಬೇಕು. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾ

Comments are closed.