ಕರಾವಳಿ

ಬ್ಲಾಕ್ ಟಿ v/s ಬ್ಲಾಕ್ ಕಾಫಿ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ…?

Pinterest LinkedIn Tumblr

ಈಗ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ಎಲ್ಲರೂ ತೋರುತ್ತಿದ್ದಾರೆ. ಪಾನೀಯಗಳ ವಿಚಾರದಲ್ಲೂ ಅಷ್ಟೇ ಹೆಚ್ಚು ಹೆಚ್ಚು ಮುತುವರ್ಜಿ ವಹಿಸುತ್ತಿದ್ದಾರೆ. ಕಾಫಿ, ಟಿ ವಿಚಾರದಲ್ಲೂ ಸಾಕಷ್ಟು ಮಂದಿ ತಲೆಕೆಡಿಸಿಕೊಳ್ಳುತ್ತಾರೆ. ಬ್ಲಾಕ್ ಟಿ ಉತ್ತಮವೇ ಬ್ಲಾಕ್ ಕಾಫಿ ಉತ್ತಮವೇ ಎಂದು ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ? ಇಲ್ಲಿದೆ ನೋಡಿ ಡೀಟೇಲ್ಸ್.

ಬ್ಲಾಕ್‌ ಟಿಯಿಂದ ಆಗುವ ಲಾಭಗಳು:
ಇದು ದೇಹವನ್ನು ಬೆಚ್ಚಗಿಡುತ್ತದೆ. ಇದರಲ್ಲಿ ಪಾಲಿಫೆನಾಲ್‌ನ ಪ್ರಮಾಣ ಹೆಚ್ಚು ಇದ್ದು, ಇದು ರಾಸಾಯನಿಕಗಳು ದೇಹವನ್ನು ಪ್ರವೇಶಿಸದಂತೆ ತಡೆಯುತ್ತದೆ. ಈ ಮೂಲಕ ದೇಹದ ಆ್ಯಂಟಿ ಆಕ್ಸಿಡೆಂಟ್‌ ಗಳ ಪ್ರಮಾಣ ಹೆಚ್ಚಾಗುವುದರಿಂದ ದೇಹದ ಇಮ್ಯೂನಿಟಿಯೂ ಹೆಚ್ಚುತ್ತದೆ. ಪಾಲಿಫೆನಾಲ್‌ಗಳು ಮೂಳೆಗಳನ್ನು ಗಟ್ಟಿಗೊಳಿಸುತ್ತವೆ, ಗರ್ಭಾಶಯದ ಕ್ಯಾನ್ಸರ್‌ ವಿರುದ್ಧವೂ ಹೋರಾಡುತ್ತದೆ. ಇದಲ್ಲದೆ ಬ್ಲಾಕ್‌ ಟೀಯಲ್ಲಿ ಆಲ್ಕಲಮೈನ್‌ ಆ್ಯಂಟಿಜೆನ್‌ಗಳು ಹಾಗೂ ಟ್ಯಾನಿನ್‌ಗಳು ಅಧಿಕವಾಗಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಕರುಳುಗಳನ್ನೂ ಬಲಗೊಳಿಸುತ್ತವೆ.

ಬ್ಲಾಕ್‌ ಕಾಫಿಯಿಂದ ಆಗುವ ಆರೋಗ್ಯ ಲಾಭಗಳು
ಇದು ಜಿಮ್‌ ಗೆ ಹೋಗುವವರಿಗೆ ಹೆಚ್ಚು ಪ್ರಿಯ. ಇದನ್ನು ಕುಡಿಯುವುದರಿಂದ ವ್ಯಕ್ತಿಯ ಜೀವಿತಾವಧಿ ಹೆಚ್ಚುತ್ತದೆ ಎನ್ನಲಾಗುತ್ತದೆ. ಇದರಲ್ಲಿ ಪೊಟ್ಯಾಷಿಯಮ್‌ ಹಾಗೂ ಮೆಗ್ನೇಷಿಯಮ್‌ ಗಳು ಹೇರಳವಾಗಿವೆ. ಆ್ಯಂಟಿ ಆಕ್ಸಿಡೆಂಟ್‌ ಕೂಡ ಅಧಿಕವಾಗಿದೆ. ಪಾರ್ಕಿನ್‌ಸನ್‌, ಬೇಸಲ್‌ ಸೆಲ್‌ ಕಾರ್ಸಿನೋಮಾ, ಆಲ್‌ಜೈಮರ್‌, ಡಯಾಬಿಟಿಸ್‌, ಪ್ರಾಸ್ಟೇಟ್‌ ಕ್ಯಾನ್ಸರ್‌, ಎಂಡೋಮೆಟ್ರಿಯಲ್‌ ಕ್ಯಾನ್ಸರ್‌ ಇತ್ಯಾದಿ ಗಳ ವಿರುದ್ಧ ಹೋರಾಡಲೂ ಇದು ಸಹಕಾರಿ.ಹೀಗೆ ಬ್ಲಾಕ್‌ ಕಾಫಿ ಮತ್ತು ಟೀ -ಎರಡರಲ್ಲೂ ಹಲವು ವಿಧದ ಪ್ರಯೋಜನಗಳಿದ್ದು ಯಾರು ಯಾವ ಅನುಕೂಲವನ್ನು ಆಯ್ಕೆ ಮಾಡುತ್ತಾರೆ ಎಂಬುದರ ಮೇಲೆ ಅವರ ಪೇಯದ ಆಯ್ಕೆ ನಿಂತಿದೆ.

Comments are closed.