ಕರಾವಳಿ

ಸುಂದರ ನಗುವಿನ ಹಿಂದೆ ಅಡಗಿರುವ ಹಲ್ಲುಗಳ ಸೌಂದರ್ಯತೆ ಕಾಪಾಡುವ ಟಿಪ್ಸ್

Pinterest LinkedIn Tumblr

ನಮ್ಮ ಅಂದವನ್ನ ಇನ್ನಷ್ಟು ಹೆಚ್ಚಿಸುವುದೇ ನಮ್ಮ ಮುಖದಲ್ಲಿನ ನಗು. ನಗು ಒಂದು ಚೆನ್ನಾಗಿದ್ದರೆ ಎಂತಹ ಕುರೂಪಿಯೂ ಅಂದವಾಗಿ ಕಾಣುತ್ತಾನೆ. ನಗಲು ಮನಸಿನಲ್ಲಿ ಖುಷಿಯೊಂದಿದ್ದರೆ ಸಾಲದು ಒಳ್ಳೆಯ ಹಲ್ಲುಗಳು ಸಹ ಬೇಕು, ನಾವು ನಕ್ಕಾಗ ಜನರು ಹೆಚ್ಚಾಗಿ ಗಮನಿಸುವುದು ನಮ್ಮ ಹಲ್ಲುಗಳನ್ನೇ ಹೊರತು ಬೇರೆ ಏನನ್ನು ಅಲ್ಲ, ಹಲ್ಲುಗಳು ಸುಂದರವಾಗಿದ್ದರೆ ಎಲ್ಲರೂ ನಮ್ಮ ನಗುವನ್ನ ಇಷ್ಟಪಡುತ್ತಾರೆ ಆದರೆ ನಮ್ಮ ಹಲ್ಲುಗಳು ಹಳದಿಗಟ್ಟಿದ್ದರೆ, ಮುಗಿತು..!

ನಮ್ಮನ್ನ ನಗಿಸಲು ಸಹ ಯಾರು ಇಷ್ಟಪಡುವುದಿಲ್ಲ, ನಮ್ಮ ಹಲ್ಲುಗಳು ಸುಂದರವಾಗಿ ಪಳಪಳ ಹೊಳೆಯುವಂತೆ ಮಾಡುವುದು ಹೇಗೆ ಎಂದು ಯೋಚಿಸುವ ಅವಶ್ಯಕತೆ ಇಲ್ಲ, ಎಲ್ಲರ ಮನೆಯಲ್ಲೂ ಸುಲಭವಾಗಿ ಸಿಗುವ ಪದಾರ್ಥಗಳನ್ನ ಬಳಸಿಕೊಂಡು ಹಲ್ಲುಗಳನ್ನ ಬಿಳಿಯಾಗಿಸಬಹುದು.

ಬೇಕಾಗುವ ಪದಾರ್ಥಗಳು
ಹಳದಿಯಾಗಿರುವ ಹಲ್ಲುಗಳನ್ನು ಬಿಳಿಯಾಗಿ ಮಾಡಲು ಕೇವಲ ಎರಡು ಪದಾರ್ಥಗಳು ಸಾಕು. ಅಡುಗೆ ಮಾಡಲು ಉಪಯೋಗಿಸುವ ‘ಬೇಕಿಂಗ್ ಸೋಡಾ ನಿಂಬೆ ರಸ.

ವಿಧಾನ
ಒಂದು ಚಿಕ್ಕ ಬೌಲ್ ನಲ್ಲಿ ಒಂದು ಚಮಚ ಬೇಕಿಂಗ್ ಸೋಡಾ ಹಾಕಿ ಅದಕ್ಕೆ ಅರ್ಧ ನಿಂಬೆ ಹಣ್ಣಿನ ರಸ ಬೆರೆಸಿ ಕಲೆಸುತ್ತಿದ್ದರೆ ಒಂದು ದ್ರಾವಣ ತಯಾರಾಗುತ್ತದೆ. ಈ ದ್ರಾವಣವನ್ನು ಬೆರಳಿನಿಂದ ಅದ್ದಿಕೊಂಡು ಹಲ್ಲುಗಳನ್ನು ತಿಕ್ಕಬೇಕು. ನಂತರ ನೀರಿನಿಂದ ಬಾಯನ್ನು ಮುಕ್ಕಳಿಸಬೇಕು. ಹೀಗೆ ಮಾಡುವುದರಿಂದ ಕೆಲವೇ ಕ್ಷಣಗಳಲ್ಲಿ ಹಲ್ಲುಗಳು ಬಿಳಿಯಾಗುತ್ತವೆ. ಇದನ್ನ ಪ್ರತಿದಿನ ಮಾಡುವುದು ಉತ್ತಮ.

Comments are closed.