ಕರಾವಳಿ

ಬಾಳೆಎಲೆ ಊಟದ ಮೇಲೆ ಮತ್ತು ಸುತ್ತಲೂ ವೃತ್ತಾಕಾರದಲ್ಲಿ ನೀರು ಚಿಮುಕಿಸುವುದರ ಹಿಂದೆ ಇರುವ ಲಾಜಿಕ್ ಗೋತ್ತೆ…?

Pinterest LinkedIn Tumblr

ಅದರಲ್ಲಿ ಒಂದು; ಊಟ ಮಾಡುವ ಮುಂಚೆ ಊಟದ ಮೇಲೆ ಮತ್ತು ಸುತ್ತಲೂ ವೃತ್ತಾಕಾರದಲ್ಲಿ ನೀರು ಚಿಮುಕಿಸುವುದರ ಸಂಪ್ರದಾಯ. ಇದು ಇನ್ನೂ ದಕ್ಷಿಣ ಮತ್ತು ಉತ್ತರ ಭಾರತದ ಕೆಲವು ಕಡೆ ಆಚರಣೆಯಲ್ಲಿದೆ, ಅಂದರೆ ಮೊದಲು ದೇವರಿಗೆ ಅರ್ಪಿಸಿ ಅವರ ಆಶೀರ್ವಾದ ಪಡೆಯಲ ಈ ರೀತಿ ಮಾಡುತ್ತಾರೆ. ಆದರೆ ಇದರ ಹಿಂದೆ ಇದಿಷ್ಟೇ ಕಾರಣ ಅಲ್ಲ, ಕೆಲವು ಆರೋಗ್ಯಕರವಾದ ಮಹತ್ವದ ಸಂಗತಿಗಳಿವೆ.

ಲಾಜಿಕ್ ಏನು?
ಈ ಪುರಾತನ ನಂಬಿಕೆ ಹಲವು ಲಕ್ಷ ವರ್ಷಗಳ ಹಿಂದೆ ನಮ್ಮ ಪೂರ್ವಜರು ಪ್ರಾರಂಭ ಮಾಡಿದ್ದಾರೆ.

ಕಾರಣ; ಆ ಕಾಲದಲ್ಲಿ ನೆಲಗಳಲ್ಲಿ ಸಿಮೆಂಟ್ ಅಥವಾ ಟೈಲ್ಸ್ ಹಾಕುತ್ತಿರಲಿಲ್ಲ ಎಂಬುದು ನಮಗೆ ಗೊತ್ತೇ ಇದೆ. ಆಗ ಮಣ್ಣಿನ ನೆಲದಲ್ಲೇ ಬಾಳೆಎಲೆಯಲ್ಲಿ ಊಟ ಮಾಡುವುದು ಅನಿವಾರ್ಯವಾಗಿತ್ತು. ಹಾಗಾಗಿ ನೆಲದಲ್ಲಿರುವ ಮಣ್ಣು, ಧೂಳು ಆಹಾರವನ್ನು ಅನಾರೋಗ್ಯಕರವನ್ನಾಗಿ ಅದರಲ್ಲಿರುವ ಬ್ಯಾಕ್ಟೀರೀಯಾ ಮತ್ತು ಇತರ ರೋಗಾಣುಗಳು ಖಾಯಿಲೆಗೆ ಎಡೆ ಮಾಡಿಕೊಡಬಹುದು ಎಂಬ ಕಾರಣಕ್ಕೆ ಧೂಳು ಏಳದಂತೆ ಊಟದ ಸುತ್ತ ನೀರು ಸಿಂಪಡಿಸುತ್ತಿದ್ದರಂತೆ.

ಇನ್ನೊಂದು ಕಾರಣ ಇರುವೆ ಅಥವಾ ಕ್ರಿಮಿ ಕೀಟಗಳಿಂದ ಆಹಾರವನ್ನು ಕಾಪಾಡುವುದು. ಆ ಕಾಲದಲ್ಲಿ ಬೆಳಕಿನ ವ್ಯವಸ್ಥೆ ಇರದ ಕಾರಣ ರಾತ್ರಿ ಊಟ ಮಾಡುವಾಗ ಈ ಕ್ರಿಮಿಗಳು ಊಟದ ಮೇಲೆ ಬರದೆ ಇರಲಿ ಎಂದು ಊಟದ ಸುತ್ತ ನೀರು ಹಾಕುತ್ತಿದ್ದರು ಎಂದು ಹೇಳಲಾಗುತ್ತದೆ.

ಇನ್ನಿತರ ಕಾರಣಗಳು:
ಭಾರತೀಯ ಆಹಾರಗಳು ಸಾಮಾನ್ಯವಾಗಿ ಮಸಾಲೆಗಳಿಂದ ಕೂಡಿದ್ದು, ಬಹಳ ಖಾರವಾಗಿರುತ್ತದೆ. ಅದನ್ನು ತಟಸ್ಥಗೊಳಿಸಲು ಈ ರೀತಿ ಊಟದ ಮೇಲೆ ನೀರು ಸಿಂಪಡಿಸುತ್ತಿದ್ದರು.
ಇನ್ನು ದಕ್ಷಿಣ ಭಾರತದ ಆಹಾರಗಳು ಅನ್ನ ಮತ್ತು ಸ್ಟಾರ್ಚ್ ನಿಂದ ಕೂಡಿರುತ್ತದೆ. ಆ ಊಟದ ಮೇಲೆ ನೀರು ಸಿಂಪಡಿಸುವುದರಿಂದ ಈ ಅಂಶಗಳು ಕಡಿಮೆಯಾಗಿ ಜೀರ್ಣಕ್ರೀಯೆ ಉತ್ತಮವಾಗಬಹುದು.

Comments are closed.