ಆತನ ಹೆಸರು ಕಾಬಿ. ವಯಸ್ಸು 27, USನಲ್ಲಿ ಇರುತ್ತಾನೆ. ವಿಡಿಯೋ ಬ್ಲಾಗಿಂಗ್ ಮಡುವುದನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದಾನೆ. ಅದರ ಭಾಗವಾಗಿ..ಫೇಸ್‍ಬುಕ್‌ನಲ್ಲಿ 15 ವರ್ಷಗಳ ಬಾಲಕನಂತೆ ಒಂದು ಫೇಕ್ ಖಾತೆಯನ್ನು ಸೃಷ್ಟಿಸಿದ್ದಾನೆ. ಇನ್ನು ಆ ಪ್ರದೇಶದಲ್ಲಿ ಇರುವ 12, 13,14 ವರ್ಷದ ಹುಡುಗಿಯರಿಗೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿ, ಅವರನ್ನು ಫ್ರೆಂಡ್ ಮಾಡಿಕೊಂಡ. ಕೆಲವು ದಿನಗಳ ಕಾಲ ಅವರೊಂದಿಗೆ ತುಂಬಾ ಡೀಪ್ ಆಗಿ ಚಾಟ್ ಮಾಡಿದ. ಒಂದು ದಿನ ಆತನ ಫೇಕ್ ಫ್ರೆಂಡ್ ಪಟ್ಟಿಯಲ್ಲಿರುವ ಮೂವರು ಹುಡುಗಿಯರನ್ನು ಭೇಟಿಯಾಗಬೇಕೆಂದು, ಒಬ್ಬೊಬ್ಬರಿಗೆ ಒಂದೊಂದು ಸಮಯಕ್ಕೆ, ನಿಗದಿತ ಸ್ಥಳಕ್ಕೆ ಬರಬೇಕೆಂದು ಮೆಸೇಜ್ ಮಾಡಿದ ಕಾಬಿ.
ಬೆಳಗ್ಗೆ:
ಕಾಬಿ ಫೇಕ್ ಖಾತೆಯಲ್ಲಿ ಚಾಟ್ ಮಾಡಿದ 12 ವರ್ಷಗಳ ಹುಡುಗಿ, ನಮ್ಮ ಮನೆಯವರು ಇನ್ನೊಂದು 10 ನಿಮಿಷಕ್ಕೆ ಹೊರಗೆ ಹೋಗುತ್ತಾರೆ ಆಗ ನಾನು ಬಿಡುತ್ತೇನೆ ಎಂದು ಹೇಳಿದಳು.. ಮನೆಯಲ್ಲಿ ಪೇರೆಂಟ್ಸ್ ಹೋದ ಕೂಡಲೆ ಮೊದಲೇ ತಿಳಿಸಿದ್ದ ಪಾರ್ಕ್ ಬಳಿಗೆ ಬಂದಳು… ತನ್ನೊಂದಿಗೆ ಚಾಟ್ ಮಾಡಿದ ವ್ಯಕ್ತಿಗಾಗಿ ಹುಡುಕಿದಳು.. ಅಷ್ಟರಲ್ಲಿ ಅವರ ತಂದೆ ಪ್ರತ್ಯಕ್ಷವಾದ…
ರಾತ್ರಿ:
ತನ್ನೊಂದಿಗೆ ಚಾಟ್ ಮಾಡಿದ 13 ವರ್ಷದ ಹುಡುಗಿಯನ್ನು ತನ್ನ ಬಳಿ ಬರುವಂತೆ ಕೋರಿದ ಕಾಬಿ. ವೆಯಿಟ್ ನಮ್ಮ ತಂದೆ ಮಲಗಿದ ಕೂಡಲೆ ಬರುತ್ತೇನೆ ಎಂದು ರಿಪ್ಲೈ… ಸ್ವಲ್ಪ ಹೊತ್ತಾದ ಮೇಲೆ ಕಾಬಿ ತಿಳಿಸಿದ ವಿಳಾಸದ ಬಳಿಗೆ ಬಂದಳು ಆ 13 ವರ್ಷ ಹುಡುಗಿ… ತನ್ನೊಂದಿಗೆ ಚಾಟ್ ಮಾಡಿದ ವ್ಯಕ್ತಿಗೆ ಹುಡುಕಿದಳು… ಅಲ್ಲೂ ಅಷ್ಟೇ ಆ ಹುಡುಗಿಯ ತಂದೆ ಪ್ರತ್ಯಕ್ಷರಾದರು.
ಅದೇ ದಿನ ನಡುರಾತ್ರಿ:
ತನ್ನೊಂದಿಗೆ ಚಾಟ್ ಮಾಡಿದ 14 ವರ್ಷದ ಹುಡುಗಿಗೆ ಕಾರಿನಲ್ಲಿ ಹಾಗೆಯೇ ಸುತ್ತಾಡಿ ಬರೋಣ ಬಾ.. ಎಂದು ಕೇಳಿದ ಕಾಬಿ. ಕೂಡಲೆ ಆ ಹುಡುಗಿ ಆತ ಹೇಳಿದ ಕಾರ್‌ನಲ್ಲಿ ಹತ್ತಿದಳು ಒಳಗೆ ಯಾರಿದ್ದಾರೆ ಎಂಬುದನ್ನೂ ನೋಡಿಕೊಳ್ಳದೆ.. ಕಾರ್ ಒಳಗೆ ಹತ್ತಿದ ಕೂಡಲೆ ಆ ಹುಡುಗಿಯನ್ನು ಜೋರಾಗಿ ಒಳಗೆ ಎಳೆದರು.. ಆ ಹುಡುಗಿ ನನ್ನನ್ನು ಕಿಡ್ನಾಪ್ ಮಾಡುತ್ತಿದ್ದಾರೆಂದುಕೊಂಡಳು. ಕಟ್ ಮಾಡಿದರೆ ಕಾರಿನ ಹಿಂಬದಿಯಲ್ಲಿ ಇದ್ದದ್ದು ಅವಳ ತಂದೆತಾಯಿ.
ಅಂದರೆ ಈ ಮೂರು ಸೀನ್‌ಗಳಲ್ಲಿ ಸಹ ಅವರ ಪೇರೆಂಟ್ಸ್ ಎಂಟರ್ ಆದರು. ಅಸಲಿ ವಿಷಯ ಏನು ಗೊತ್ತಾ! ಇದೆಲ್ಲವನ್ನೂ ಈ ವಿಡಿಯೋ ಬ್ಲಾಗರ್ ಮಾಡಿದ್ದು.. ಆ ಮಕ್ಕಳಿಗೆ ಆ ರೀತಿ ರಹಸ್ಯ ಪ್ರದೇಶಗಳಿಗೆ ಕರೆದಾಗ ಮೊದಲೇ ಆ ಮಾಹಿತಿಯನ್ನು ಅವರ ತಂದೆತಾಯಿಗೂ ಕೊಟ್ಟಿದ್ದ. ಮಕ್ಕಳ ಜತೆ ಚಾಟಿಂಗ್, ರಹಸ್ಯ ಪ್ರದೇಶಗಳಿಗೆ ಕರೆದದ್ದು ಮಾತ್ರ ನಿಜ…. ಸಾಮಾಜಿಕ ಮಾಧ್ಯಮಗಳಲ್ಲಿ ಮುಖ ಗೊತ್ತಿಲ್ಲದೆ ಪರಿಚಿತರಾದವರನ್ನು ಅವರು ಕರೆದ ಜಾಗಕ್ಕೆ ಟೇನೇಜ್ ಮಕ್ಕಳು ಹೇಗೆ ಹೋಗುತ್ತಿದ್ದಾರೋ ಎಂಬುದನ್ನು ತಿಳಿಸುವುದೇ ತನ್ನ ವಿಡಿಯೋ ಉದ್ದೇಶ ಎಂದು ಹೇಳಿದ್ದಾನೆ ಕಾಬಿ. ಆ ರೀತಿ ಬಂದವರನ್ನು ಕಿಡ್ನಾಪ್ ಮಾಡಿದರೆ ಪರಿಸ್ಥಿತಿ ಏನು?
watch video:
7 ಲಕ್ಷ 50 ಸಾವಿರ ಮಂದಿ ಹೈಜಾಕ್ ಮಾಡುವವರು ಈ ಫೇಸ್‌ಬುಕ್‌ನಲ್ಲೇ ಇದ್ದಾರೆ ಸೋ ಎಚ್ಚರವಾಗಿ ಇರಬೇಕಾದ ಅಗತ್ಯ ಇದೆ ಎಂದು ಸಹ ಹೇಳುತ್ತಿದ್ದಾನೆ ಕಾಬಿ… ನೀವು ಎಚ್ಚರದಿಂದ ಇರಿ.. ನಿಮ್ಮ ಮಕ್ಕಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹೇಗಿರಬೇಕು ಎಂಬ ಬಗ್ಗೆ ಒಂದು ಕಣ್ಣಿಡಿ
Comments are closed.