ಕರಾವಳಿ

ಈ ಮನೆಮದ್ದು ಬಳಸಿ – ಹಳದಿ ಉಗುರುಗಳಿಗೆ ಹೇಳಿ ಟಾಟಾ

Pinterest LinkedIn Tumblr

ನಿಮ್ಮ ಉಗುರುಗಳೂ ಹಳದಿ ಬಣ್ಣಕ್ಕೆ ತಿರುಗಿವೆಯೇ? ಬಹುತೇಕ ಬಾರಿ, ಈ ಹಳದಿ ಬಣ್ಣದ ಉಗುರುಗಳಿಗೆ ಕಾರಣವಾಗುವುದು ನೈಲ್ ಪಾಲಿಶ್. ಅದರಲ್ಲೂ ಮುಖ್ಯವಾಗಿ ಗಾಢ ಬಣ್ಣದ ನೈಲ್ ಪಾಲೀಶುಗಳ ಹಾಗೇ ಉಳಿಯುವ ವರ್ಣದ್ರವ್ಯವು ಉಗುರುಗಳನ್ನ ಹಳದಿ ಬಣ್ಣಕ್ಕೆ ತಿರುಗಿಸುತ್ತವೆ. ಇದಕ್ಕೆ ಇನ್ನೊಂದು ಕಾರಣ ಎಂದರೆ ಅದು ಸಿಗರೇಟ್ ಅಲ್ಲಿರುವ ನಿಕೋಟಿನ್ ಮತ್ತು ಟಾರ್ ಕೂಡ ಆಗಿರಬಹುದು. ಅದೃಷ್ಟವಶಾತ್, ನಾವು ಈ ಹಳದಿ ಬಣ್ಣವನ್ನ ಕೆಲವು ಮನೆಮದ್ದುಗಳಿಂದ ಸಹಾಯದಿಂದಲೇ ತೆಗೆದು ಹಾಕಬಹುದು. ನಮ್ಮ ಈ ಲೇಖನವು ನೀವು ನಿಮ್ಮ ಹಳದಿ ಉಗುರುಗಳಿಗೆ ಟಾಟಾ ಹೇಳಿ, ಸುಂದರವಾದ ಉಗುರುಗಳನ್ನ ಪಡೆಯಲು ಸಹಾಯ ಮಾಡುತ್ತದೆ.

೧. ನಿಂಬೆಹಣ್ಣು
ಒಂದು ಬಟ್ಟಲು ತೆಗೆದುಕೊಳ್ಳಿ ಮತ್ತು ಅದರ ಅರ್ಧ ಭಾಗದದಷ್ಟು ನಿಂಬೆಹಣ್ಣಿನ ರಸವನ್ನ ಅದರಲ್ಲಿ ಹೀರಿಕೊಳ್ಳಿ. ನಂತರ ಆ ನಿಂಬೆರಸದಲ್ಲಿ ನಿಮ್ಮ ಉಗುರುಗಳನ್ನ 15 ನಿಮಿಷಗಳ ಕಾಲ ಹಾಗೆಯೇ ಇಡಿ. ಅದರ ನಂತರ ಒಂದು ಟೂತ್ ಬ್ರಷ್ ಉಪಯೋಗಿಸಿ ಹಳದಿ ಬಣ್ಣದ ಕಳೆಯ ಮೇಲೆ ಉಜ್ಜಿರಿ. ನಂತರ ನಿಮ್ಮ ಕೈಗಳನ್ನ ತೊಳೆದು, ಅವುಗಳಿಗೆ ಮೋಯಿಶ್ಚರೈಸಿಂಗ್ ಕ್ರೀಮ್ ಅನ್ನು ಹಚ್ಚಿಕೊಳ್ಳಿ. ಹೀಗೆ ದಿನಕ್ಕೆ 2 ಬಾರಿ ಮಾಡಿದರೆ ಹಳದಿ ಬಣ್ಣದ ಕಲೆಗಳು ಕ್ಷೀಣಿಸುತ್ತಾ ಹೋಗುತ್ತವೆ.

೨. ಅಡುಗೆ ಸೋಡಾ
ಒಂದು ಚಮಚ ಅಡುಗೆ ಸೋಡಾಗೆ, ಒಂದು ಚಮಚ ನಿಂಬೆರಸ ಬೆರೆಸಿ, ಗಟ್ಟಿಯಾದ ಪೇಸ್ಟ್ ಮಾಡಿಕೊಳ್ಳಿ. ಅದರ ನಂತರ ಒಂದು ಟೂತ್ ಬ್ರಷ್ ಬಳಸಿ ಆ ಪೇಸ್ಟ್ ಅನ್ನು ನಿಮ್ಮ ಉಗುರುಗಳ ಮೇಲೆ ಹಚ್ಚಿಕೊಳ್ಳಿ. 5 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯರಿ. ಪ್ರತಿ ಎರಡು ವಾರಗಳಿಗೊಮ್ಮೆ ಒಮ್ಮೆ ಇದನ್ನ ಮಾಡಬೇಕು.

೩. ಟೂತ್ ಪೇಸ್ಟ್
ನಿಮ್ಮ ಟೂತ್ಪೇಸ್ಟ್ ಅನ್ನು ಹಾಗೇ ನಿಮಮ್ ಉಗುರುಗಳ ಮೇಲೆ ಹಚ್ಚಿಕೊಳ್ಳಿ. 10 ನಿಮಿಷಗಳ ಕಾಲ ಕಾಯಿರಿ. ನಂತರ ನೈಲ್ ಬ್ರಷ್ ಅಥವಾ ಇನ್ಯಾವುದಾದರೂ ವಸ್ತುವಿನಲ್ಲಿ ಚೆನ್ನಾಗಿ ಸ್ಕ್ರಬ್ ಮಾಡಿ. ನಂತರ ಹತ್ತಿಯ ಉಂಡೆಯನ್ನು ನೀರಿನಲ್ಲಿ ನೆನೆಸಿ, ಅದರಿಂದ ಉಗುರಿನ ಮೇಲಿನ ಟೂತ್ಪೇಸ್ಟ್ ಅನ್ನು ಒರೆಸಿ. ನೀವು ಇದನ್ನ ವಾರಕ್ಕೆ 2-3 ಬಾರಿ ಒಂದು ವಾರದವರೆಗೆ ಮಾಡಬೇಕು.

೪. ಕಿತ್ತಳೆ ಹಣ್ಣಿನ ಸಿಪ್ಪೆ
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ನೀವು ದಿನಕ್ಕೆ 2-3 ಬಾರಿ ನಿಮ್ಮ ಉಗುರುಗಳಿಗೆ ಚೆನ್ನಾಗಿ ಉಜ್ಜಬೇಕು. ಹೀಗೆ ಹಲವು ವಾರಗಳ ಕಾಲ ನೀವು ಮಾಡಿದರೆ, ಉತ್ತಮ ಫಲಿತಾಂಶ ದೊರಕುವುದು. ಅಥವಾ, ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಅದನ್ನು ಪುಡಿ ಮಾಡಿಕೊಳ್ಳಿ. ನಂತರ ಎರಡು ಚಮಚದಷ್ಟು ಪುಡಿಗೆ ಸ್ವಲ್ಪ ನೀರು ಬೆರೆಸಿ ಗಟ್ಟಿಯಾದ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಉಗುರುಗಳಿಗೆ ಹಚ್ಚಿಕೊಂಡು 10 ನಿಮಿಷಗಳ ಕಾಲ ಬಿಡಿ. ಕೊನೆಗೆ ನಿಮ್ಮ ಉಗುರುಗಳನ್ನ ನಲ್ಲಿ ನೀರಿನಲ್ಲಿ ತೊಳೆಯಿರಿ. ಹೀಗೆ ಪ್ರತಿದಿನ ಎರಡು ಬಾರಿ 1-2 ವಾರಗಳ ಕಾಲ ಮಾಡಿ.

Comments are closed.