ಕರಾವಳಿ

ಡ್ರಗ್ಸ್ ವಿಚಾರದಲ್ಲಿ ಚೋಟಾ ಮೋಟಾಗಳ ಧಮ್ಕಿಗೆ ಡೋಂಟ್ ಕೇರ್: ಶೋಭಾ ಕರಂದ್ಲಾಜೆ (Video)

Pinterest LinkedIn Tumblr

ಕುಂದಾಪುರ: ಯುವ ಜನಾಂಗದ ದಾರಿ ತಪ್ಪಿಸುತ್ತಿರುವ ಗಾಂಜಾ ಮೊದಲಾದ ಡ್ರಗ್ಸ್ ಪಿಡುಗು ನಿವಾರಣೆಗೆ ಸರಕಾರ ಬದ್ಧವಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕುಂದಾಪುರದ ಶೇಡಿಮನೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಾಂಜಾ, ಮಾಧವ ದ್ರವ್ಯಗಳು ಜೀವನ ವ್ಯವಸ್ಥೆಯನ್ನೇ ಹಾಳು ಮಾಡುತ್ತಿವೆ. ಕಾಲೇಜು, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸುಲಭವಾಗಿ ಇಂಥಹ ಮಾಧಕ ವಸ್ತುಗಳು ಸಿಗುತ್ತಿವೆ ಎನ್ನುವ ಮಾಹಿತಿ ಇದೆ. ಡ್ರಗ್ಸ್ ರಾಜ್ಯದ ಒಳಗೆ ಹೇಗೆ ಬರುತ್ತದೆ ಎನ್ನುವುದರ ಮೂಲ ಪತ್ತೆ ಹಚ್ಚುವ ಕೆಲಸ ಆಗುತ್ತಿದೆ. ರಾಜ್ಯದಲ್ಲಿ ಡ್ರಗ್ಸ್‍ನ್ನು ಸರಬರಾಜು ಮಾಡುವ ಜಾಲವನ್ನು ಪತ್ತೆ ಹಚ್ಚುವ ಕೆಲಸ ಆಗಲಿದೆ. ಈ ವಿಚಾರದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಚೋಟ ಮೋಟಗಳ ಯಾವ ಬೆದರಿಕೆಗೂ ಸರ್ಕಾರ ಜಗ್ಗುವುದೂ ಇಲ್ಲ, ಬಗ್ಗುವುದು ಇಲ್ಲ, ಸೂಕ್ತ ಶಿಕ್ಷೆ ಆಗಲಿದೆ ಎಂದು ಹೇಳಿದ್ದಾರೆ.

ಡ್ರಗ್ಸ್ ಅನ್ನು ರಾಜ್ಯದೊಳಗೆ ಸರಬರಾಜು ಮಾಡುತ್ತಿರುವ ಮೂಲಪುರುಷರು ಯಾರು ಎನ್ನುವುದನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡುವ ಕೆಲಸ ಆಗುತ್ತದೆ. ಡ್ರಗ್ಸ್ ಮಾಫಿಯಾ ಮತ್ತು ಡ್ರಗ್ಸ್ ಜಿಹಾದಿಯನ್ನು ಸಂಪೂರ್ಣ ನಿಯಂತ್ರಿಸುಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಅವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೂಡಲೇ ಆರಂಭವಾಗುತ್ತದೆ. ಈಗಾಗಲೇ ಕೊರೋನಾದಿಂದಾಗಿ ಕುಂಠಿತವಾಗಿದೆ. ನಾಳೆಯಿಂದಲೇ ಕೆಲಸ ಆರಂಭವಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಾ ಆದೇಶ ಮಾಡಲಿದ್ದಾರೆ ಎಂದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.