ಕರಾವಳಿ

ಜೂನ್.8 ರಿಂದ ದೇವಾಲಯಗಳು ತೆರೆಯುತ್ತೆ: ಭಕ್ತರು ಪಾಲಿಸಬೇಕಾದ ನಿಯಮಗಳೇನು ಗೊತ್ತಾ? (Video)

Pinterest LinkedIn Tumblr

ಉಡುಪಿ: ಕೇಂದ್ರ ಸರ್ಕಾರದ ಆದೇಶದಂತೆ  ರಾಜ್ಯದಲ್ಲಿ ದಾರ್ಮಿಕ ದತ್ತಿ ಹಾಗೂ ಖಾಸಗಿ ಎಲ್ಲಾ ದೇವಸ್ಥಾನಗಳನ್ನು ಜೂನ್ 8 ರಿಂದ ತೆರೆಯಲಾಗುವುದು , ಕೋವಿಡ್-19 ಹರಡುವುದನ್ನು ತಡೆಗಟ್ಟುವ ಸಲುವಾಗಿ ಭಕ್ತಾಧಿಗಳು ಮತ್ತು ಸಾರ್ವಜನಿಕರು ಈ ಮುಂದಿನ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮುಂಜಾಗ್ರತಾ ಕ್ರಮಗಳೇನು?: ದೇವಾಲಯಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ (ಮುಖ ಗವಸು ) ಧರಿಸುವುದು. ಮಾಸ್ಕ್ ಇಲ್ಲದೇ ಇರುವವರು ದೇವಸ್ಥಾನದ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆಗೆ ಒಳಪಡಿಸಲಾಗುವುದು ಮತ್ತು ನೀಡಲಾದ ಸ್ಯಾನಿಟೈಸರ್ ಬಳಸುವುದು, ದೇವಸ್ಥಾನದ ಎದುರುಗಡೆ ಆಳವಡಿಸಿರುವ ನಲ್ಲಿ (ಸೋಪ್/ಹ್ಯಾಂಡ್ ವಾಷ್) ಯಲ್ಲಿ ಕೈ ತೊಳೆದುಕೊಂಡು ದೇವಾಲಯಕ್ಕೆ ಪ್ರವೇಶಿಸುವುದು. ದೇವಾಲಯದ ಒಳಗೆ ಮತ್ತು ಜೊತೆಗೆ ಶಿಬಾಚುವಾಗಿ (6 ಅಡಿ) ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಉಸಿರಾಟದ ತೊಂದರೆ ಜ್ವರ, ಕೆಮ್ಮು, ನೆಗಡಿ, ಅಂತಹ ರೋಗ ಲಕ್ಷಣಗಳನ್ನು ಹೊಂದಿರುವವರು ದೇವಾಲಯದ ಪ್ರದೇಶಕ್ಕೆ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

ಸ್ಮಾರ್ಟ್ ಫೋನ್ ಹೊಂದಿರುವವರು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಅಳವಡಿಸಿಕೊಳ್ಳುವುದು, ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ದರ್ಶನಕ್ಕೆ ಬರುವವರು ಹೂ, ಹಣ್ಣು, ಕಾಯಿ ಮುಂತಾದ ಪೂಜಾ ಸಾಮಗ್ರಿಗಳನ್ನು ತರಬಾರದು, ಕರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸೇವೆಗಳಿಗೆ ಅವಕಾಶವಿರುವುದಿಲ್ಲ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಕರಿಗೆ ಹಾಗೂ 10 ವರ್ಷದ ಕೆಳಗಿನ ಮಕ್ಕಳು ಮತ್ತು ಗರ್ಭಿಣಿಯರು ಪ್ರವೇಶ ಮಾಡಬಾರದು, ಭಕ್ತಾದಿಗಳು ಪಾದರಕ್ಷೆಯನ್ನು ತಮ್ಮ ವಾಹನದಲ್ಲೇ ಬಿಟ್ಟು ಬರುವುದು, ದೇವಸ್ಥಾನದ ಆವರಣದಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

Comments are closed.