ಕರಾವಳಿ

ಗುಡ್ಡಮ್ಮಾಡಿ ಬಾವಿಗೆ ಬಿದ್ದವರ ರಕ್ಷಿಸಲು ಜೀವದ ಹಂಗು ತೊರೆದು ಬಾವಿಗಿಳಿದ ಕಿರಿಮಂಜೇಶ್ವರ 108 ಫೈಲಟ್(Video)

Pinterest LinkedIn Tumblr

ಕುಂದಾಪುರ: ಮನೆ ಸಮೀಪದ ಬಾವಿಯ ಕೆಲಸಕ್ಕೆ ಅಣಿಯಾಗುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದವರು ಮತ್ತು ಅವರನ್ನು ರಕ್ಷಿಸಲು ಬಾವಿಗಿಳಿದು ಆಕ್ಸಿಜನ್ ಸಮಸ್ಯೆಯಿಂದಾಗಿ ಅಸ್ವಸ್ಥಗೊಂಡಿದ್ದವರನ್ನು ರಕ್ಷಿಸಲು ತನ್ನ ಜೀವದ ಹಂಗು ತೊರೆದು ಬಾವಿಗಿಳಿದ ಕಿರಿಮಂಜೇಶ್ವರ 108 ಫೈಲಟ್ (ಚಾಲಕ) ಶ್ರೀಧರ್ ಅವರ ಸಮಯ ಪ್ರಜ್ಞೆ ನಾಗರಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.

 

ಸುಮಾರು 11 ಗಂಟೆ ಸಮಯಕ್ಕೆ ಕಿರಿಮಂಜೇಶ್ವರ 108 ಆಂಬುಲೆನ್ಸ್ ವಾಹನಕ್ಕೆ ಕುಂದಾಪುರದ ಗುಡ್ಡಮ್ಮಾಡಿಯಲ್ಲಿ ಬಾವಿಗೆ ಬಿದ್ದ ಕುರಿತು ಕರೆ ಬರುತ್ತದೆ. ತಕ್ಷಣ ಸ್ಥಳಕ್ಕಾಗಮಿಸಿದ 108 ಚಾಲಕ ನೋಡುವಾಗ ಇಬ್ಬರು ಕೂಡ ಬಾವಿಯಲ್ಲಿ ಅಸ್ವಸ್ಥರಾಗಿದ್ದರು. ತಕ್ಷಣ ಹಿಂದೆಮುಂದೆ ನೋಡದ ಚಾಲಕ ಶ್ರೀಧರ್ ಬಾವಿಗೆ ಇಳಿದಿದ್ದಾರೆ. ಮೊದಲಿಗೆ ವಾಲ್ಟರ್‌ ಡಿ ಅಲ್ಮೇಡಾ ಅವರನ್ನು ನಾಜೂಕಾಗಿ ಮೇಲಕ್ಕೆತ್ತುವ ಕೆಲಸ ಮಾಡಿದ್ದಾರೆ. ಬಳಿಕ ಇನ್ನೊಬ್ಬರನ್ನು ಮೇಲಕ್ಕೆತ್ತಲು ಸ್ಥಳೀಯ ವ್ಯಕ್ತಿ ಅಣ್ಣಪ್ಪ ಎನ್ನುವರು ಶ್ರೀಧರ್ ಅವರಿಗೆ ಸಹಾಯ ಮಾಡಿದ್ದಾರೆ. ಇಬ್ಬರನ್ನು ಮೇಲಕ್ಕೆತ್ತಿದ ಬಳಿಕ ಸ್ಥಳದಲ್ಲಿ ಕಿರಿಮಂಜೇಶ್ವರದ ಸ್ಟಾಫ್ ನರ್ಸ್ (ಇಎಂಟಿ) ಸಹನಾ ಅವರು ಪ್ರಾಥಮಿಕ ಚಿಕಿತ್ಸೆ ವ್ಯವಸ್ಥೆ ಮಾಡಿ ತಕ್ಷಣ ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಕೂಡ ಅಷ್ಟರಲ್ಲಾಗಲೇ ವಾಲ್ಟರ್ ಮೃತಪಟ್ಟಿದ್ದರು.

ಅಂಬುಲೆನ್ಸ್ ಚಾಲಕ ಶ್ರೀಧರ್ ಹಾಗೂ ಸ್ಟಾಪ್ ನರ್ಸ್ ಸಹನಾ ಅವರ ಸಮಯ ಪ್ರಜ್ಞೆಯಿಂದಾಗಿ ಬಾವಿಯಲ್ಲಿದ್ದ ಇನ್ನೋರ್ವರಾದ ಅಲ್ಬನ್ ಅಲ್ಮೇಡ ಅವರನ್ನು ಬದುಕಿಸಲು ಸಾಧ್ಯವಾಗಿದ್ದು ಸಾರ್ವಜನಿಕರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ- 

ಕುಂದಾಪುರ ಗುಡ್ಡಮ್ಮಾಡಿಯಲ್ಲಿ ಬಾವಿಗೆ ಬಿದ್ದು ವ್ಯಕ್ತಿ ಸಾವು: ಬಚಾವ್ ಮಾಡಲು ಹೋದ ಸೋದರ ಪಾರು

Comments are closed.