ಕರಾವಳಿ

ಭಾನುವಾರ ಲಾಕ್‌ಡೌನ್ ಇದ್ದರೂ ನಿಗದಿಯಾದ ಮದುವೆ ನಡೆಸಲು ಅಡ್ಡಿಯಿಲ್ಲ: ಉಡುಪಿ ಡಿಸಿ ಜಿ. ಜಗದೀಶ್ (Video)

Pinterest LinkedIn Tumblr

ಉಡುಪಿ: ಕೋವಿಡ್-19 ಕೊರೋನಾ ಸೋಂಕಿನ ಹಿನ್ನೆಲೆ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಆದರೆ ನಾಲ್ಕನೇ ಹಂತದ ಲಾಕ್‌ಡೌನ್ ರಿಯಾಯಿತಿ ಇದ್ದು ರಾಜ್ಯ ಸರಕಾರವು ಇತ್ತೀಚೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಭಾನುವಾರ ಸಂಪೂರ್ಣ ಲಾಕ್‌ಡೌನ್ ಇರಲಿದೆ. ಆದರೆ ಭಾನುವಾರದಂದು ಮೊದಲೇ ನಿಗದಿಯಾದ ಮದುವೆ ಸಮಾರಂಭ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಕುಂದಾಪುರದಲ್ಲಿ ಜಿಲ್ಲೆಯ ಜನತೆಗೆ ಶುಭಸುದ್ದಿ ನೀಡಿದ್ದಾರೆ.

ಭಾನುವಾರ ಎಲ್ಲೆಡೆ ಪೂರ್ಣ ಪ್ರಮಾಣದ ಲಾಕ್‌ಡೌನ್‌ ನಡೆಯಲಿದೆ. ಎಲ್ಲ ಮಳಿಗೆಗಳೂ ಮುಚ್ಚಿರಲಿದ್ದು ಯಾವುದೇ ವಾಹನಗಳು ಬೀದಿಗಿಳಿಯುವಂತಿಲ್ಲ. ಆದರೆ ಸರಕಾರದ ನಿಯಾಮವಳಿಗಳನ್ನು ಪಾಲಿಸಬೇಕೆಂದು ಆದೇಶವಿದೆ. ಆದ್ದರಿಂದ ಪೂರ್ವ ನಿಗದಿಯಾದ ಮದುವೆ ಕಾರ್ಯಕ್ರಮಗಳು ನಡೆಸಲು ರಿಯಾಯಿತಿ ನೀಡಲಾಗುತ್ತದೆ. ಮದುವೆ ಪ್ರಕರಣಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರಕಾರದ ನಿಯಮಾವಳಿ ಪ್ರಕಾರ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡಲಾಗಿದೆ ಎಂದರು.

ಈ ಸಂದರ್ಭ ಸಹಾಯಕ ಕಮಿಷನರ್‌ ಕೆ. ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ, ತಾಲೂಕು ಸರಕಾರಿ ಆಸ್ಪತ್ರೆ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ| ರಾಬರ್ಟ್‌ ರೆಬೆಲ್ಲೋ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪರಿಸರ ಎಂಜಿನಿಯರ್‌ ರಾಘವೇಂದ್ರ, ಕಿರಿಯ ಆರೋಗ್ಯ ಎಂಜಿನಿಯರ್‌ ರಾಘವೇಂದ್ರ ಉಪಸ್ಥಿತರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.