ಮನೋರಂಜನೆ

ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಿದ್ದ ರಾಣು ಮಂಡಲ್‌ಗೆ ಒಲಿದ ಅದೃಷ್ಟ; ಹಿಮೇಶ್ ರೇಶಮಿಯಾ ಚಿತ್ರದಲ್ಲಿ ಹಾಡಲು ಅವಕಾಶ ! ವೈರಲ್‌ ಆದ ವಿಡಿಯೋ

Pinterest LinkedIn Tumblr

ಮುಂಬೈ: ಕೋಲ್ಕತ ರೈಲು ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಅವರ ಏಕ್ ಪ್ಯಾರ್ ಕಾ ನಾಗ್ಮಾ ಹೈ ಹಾಡುವ ಎರಡು ನಿಮಿಷಗಳ ಕ್ಲಿಪ್ ಆಕೆಯನ್ನು ಪ್ರಸಿದ್ಧಿ ಮಾಡುತ್ತದೆ ಎಂದು ಬಹುಶಃ ಆಕೆಯೇ ಊಹಿಸಿರಲಿಲ್ಲ. ಹೊಟ್ಟೆ ಪಾಡಿಗಾಗಿ ಪಶ್ಚಿಮ ಬಂಗಾಳದಲ್ಲಿ ಹಾಡು ಹೇಳಿ ಬದುಕುತ್ತಿದ್ದ ರಾಣು ಮರಿಯಾ ಮಂಡಾಲ್ ಇದೀಗ ಇಂಟರ್‌ನೆಟ್‌ ಸೆನ್ಸೇಷನಲ್‌ ಸ್ಟಾರ್‌ ಆಗಿ ಬದಲಾಗಿದ್ದಾರೆ.

ರಾಣು ಇದೀಗ ರಿಯಾಲಿಟಿ ಶೋ ಸೂಪರ್‌ಸ್ಟಾರ್ ಸಿಂಗರ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯುವುದರೊಂದಿಗೆ ತನ್ನ ಮೊದಲ ಹಾಡನ್ನು ಸಹ ರೆಕಾರ್ಡ್ ಮಾಡಿದ್ದಾರೆ. ಈಕೆಯ ಗಾನಕ್ಕೆ ಮನಸೋತ ಸಂಗೀತ ನಿರ್ದೇಶಕ ಮತ್ತು ಗಾಯಕ ಹಿಮೇಶ್ ರೇಶಮಿಯಾ ಅವರ ಮುಂಬರುವ ಚಿತ್ರ ಹ್ಯಾಪಿ ಹಾರ್ಡಿ ಮತ್ತು ಹೀರ್‌ನಲ್ಲಿ ಒಂದು ಹಾಡನ್ನು ಹಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

https://www.instagram.com/p/B1eVI_cjQS3/?utm_source=ig_embed

ಲತಾ ಮಂಗೇಶ್ಕರ್ ಅವರ ‘ಎಕ್ ಪ್ಯಾರ್ ಕಾ ನಗ್ಮಾ ಹೈ’ ಹಾಡನ್ನು ರಾನು ಮಂಡಲ್ ರೈಲ್ವೆ ನಿಲ್ದಾಣವೊಂದರಲ್ಲಿ ಹಾಡುತ್ತಿದ್ದಾಗ ಯಾರೂ ಒಬ್ಬರು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ರಾಣು ಅವರ ಕಂಠಕ್ಕೆ ಸೋತ ಕೇಳುಗರು ವಿಡಿಯೋವನ್ನು ವೈರಲ್ ಮಾಡಿದರು. ಇದಾದ ಬಳಿಕ ಮಂಡಲ್‌ಗೆ ಟಿವಿ ರಿಯಾಲಿಟಿ ಶೋವೊಂದಕ್ಕೆ ಆಹ್ವಾನಿಸಲಾಗಿತ್ತು. ಈ ಶೋನಲ್ಲಿ ರಾಣು ಅವರ ಗಾಯನಕ್ಕೆ ಪಿಧಾ ಆದ ಜಡ್ಜ್ ಹಿಮೇಶ್ ರೇಶಮಿಯಾ, ಅವರ ಮುಂದಿನ ಚಿತ್ರದಲ್ಲಿ ಹಾಡೊಂದನ್ನು ಹಾಡಲು ಅವಕಾಶ ನೀಡಿದ್ದರು.

‘ತೇರಿ ಮೇರಿ ತೇರಿ ಮೇರಿ ತೇರಿ ಮೇರಿ ಕಹಾನಿ…ಹಾಡನ್ನು ಹಿಮೇಶ್​ ಅವರು ರಾಣು ಕೈಯಲ್ಲಿ ಹಾಡಿಸಿದ್ದು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇನ್ನು ರಾಣು ಮಂಡಲ್‌ ಅವರ ಗಾಯನ ಮತ್ತು ಹಿಮೇಶ್‌ ಅವರು ಹಾಡಲು ಅವಕಾಶ ನೀಡಿದ್ದಕ್ಕೆ ನೆಟ್ಟಿಗರು ಫುಲ್‌ ಖುಷ್‌ ಆಗಿದ್ದು, ಮೆಚ್ಚುಗೆಯ ಸುರಿಮಳೆಗೈಯುತ್ತಿದ್ದಾರೆ.

26 ವರ್ಷದ ಎಂಜಿನಿಯರ್‌ ಅತಿಂದ್ರ ಚಕ್ರವರ್ತಿ ಎಂಬುವರು ರೈಲ್ವೆ ನಿಲ್ದಾಣದಲ್ಲಿ ಮಂಡಲ್‌ ಹಾಡನ್ನು ವಿಡಿಯೋ ಮಾಡಿದ್ದರು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಫ್ಲಾಟ್‌ ಫಾರ್ಮ್‌ 6ರ ಟೀ ಸ್ಟಾಲ್‌ ಬಳಿಯಲ್ಲಿ ಸ್ನೇಹಿತರೊಂದಿಗೆ ನಿಂತಿದ್ದೆ. ರಫಿ ಅವರ ಹಾಡು ರೇಡಿಯೋದಲ್ಲಿ ಕೇಳಿ ಬರುತ್ತಿತ್ತು. ಈ ವೇಳೆ ಮಹಿಳೆಯೊಬ್ಬರು ಇದೇ ಹಾಡನ್ನು ಗುನುಗುತ್ತಿದ್ದದ್ದು ಕೇಳಿಸಿತು. ಅವರ ಬಳಿ ಹೋಗಿ ಬೇರೊಂದು ಹಾಡನ್ನು ಹಾಡಬಹುದಾ ಎಂದು ಕೇಳಿದೆ ಎಂದು ಹೇಳಿದ್ದಾರೆ.

ಮಹಿಳೆಯು ಹಾಡಿದ್ದನ್ನು ರೆಕಾರ್ಡ್‌ ಮಾಡಿ ಎರಡು ನಿಮಿಷದ ವಿಡಿಯೋವನ್ನು ಜು. 23ರಂದು ಫೇಸ್‌ಬುಕ್‌ಗೆ ಪೋಸ್ಟ್‌ ಮಾಡಿದ್ದರು. ಈ ವಿಡಿಯೂ ಇಡೀ ದೇಶಾದ್ಯಂತ ವೈರಲ್‌ ಆಗಿತ್ತು.

Comments are closed.