ಕರಾವಳಿ

ಮಲ್ಪೆ ಬೀಚಿಗಿಳಿದ ಪ್ರವಾಸಿಗರಿಗೆ ಲಾಠಿ ರುಚಿ ತೋರಿಸಿದ ಹೋಮ್ ಗಾರ್ಡ್, ವಿಡಿಯೋ ವೈರಲ್

Pinterest LinkedIn Tumblr

ಉಡುಪಿ: ಮಲ್ಪೆ ಬೀಚ್ ನಲ್ಲಿ ಸಮುದ್ರಕ್ಕಿಳಿದು ಮೋಜು ಮಸ್ತಿ ಮಾಡುತ್ತಿದ್ದ ಪ್ರವಾಸಿಗರಿಗೆ ಪ್ರವಾಸಿ ಮಿತ್ರ ಯೋಜನೆಯಡಿ ನಿಯುಕ್ತಿಗೊಂಡಿರುವ ಹೋಮ್ ಗಾರ್ಡ್ ಸಿಬ್ಬಂದಿ ಹೊಡೆದಿರುವ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂಗಾರು ಹಿನ್ನೆಲೆಯಲ್ಲಿ ಬೀಚ್ ಗೆ ಇಳಿಯದಂತೆ 1 ಕಿ.ಮೀ. ದೂರಕ್ಕೆ 7 ಅಡಿ ಎತ್ತರದಲ್ಲಿ ನೆಟ್ ಅಳವಡಿಸಲಾಗಿತ್ತು. ಆದರೆ ಹೊರ ಜಿಲ್ಲೆಗಳಿಂದ ಮಲ್ಫೆಗೆ ಬಂದಿದ್ದ ಪ್ರವಾಸಿಗರು ಸಮುದ್ರಕ್ಕಿಳಿದಿದ್ದಾರೆ. ಈ ವೇಳೆ ಪ್ರವಾಸಿಗರು ಮೇಲೆ ಬರುವಂತೆ ಪದೇ ಪದೇ ಎಚ್ಚರಿಸಿದರೂ ಪ್ರವಾಸಿಗರು ಮಾತ್ರ ಮೇಲೆ ಬಂದಿರಲಿಲ್ಲ. ಈ ವೇಳೆ ಪ್ರವಾಸಿ ಮಿತ್ರ ಸಿಬ್ಬಂದಿ ಲಾಠಿ ಬೀಸಿದ್ದಾರೆ ಎಂದು ಆರೋಪಿಸಲಾಗಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

Comments are closed.