ಕರ್ನಾಟಕ

ಅನ್ನ ಚೆಲ್ಲಲು ಹೊರಟ ಭಕ್ತನಿಗೆ ಅನ್ನದ ಮಹತ್ವ ಸಾರಿದ ಮಠದ ಬಾಲಕ (Video)

Pinterest LinkedIn Tumblr

ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಮಂಗಳವಾರ ಅನ್ನದಾಸೋಹ ಮಾಡಲಾಗಿತ್ತು. ಈ ವೇಳೆ ಭಕ್ತರೊಬ್ಬರು ಅನ್ನ ಚೆಲ್ಲಲು ಮುಂದಾದಾಗ ಮಠದ ಬಾಲಕ ಅವರಿಗೆ ಅನ್ನದ ಮಹತ್ವವನ್ನು ತಿಳಿಸಿದ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಡೆದಾಡುವ ದೇವರು ಸಿದ್ದಗಂಗಾ ಅವರು ಮಠದಲ್ಲಿ ಮಕ್ಕಳಿಗೆ ಊಟ, ಶಿಕ್ಷಣ ನೀಡಿದ್ದು ಮಾತ್ರವಲ್ಲ, ಮಕ್ಕಳಿಗೆ ಅನ್ನದ ಮಹತ್ವ ತಿಳಿಸಿದ್ದಾರೆ. ಮಂಗಳವಾರ ಶ್ರೀಗಳ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಉಚಿತ ಅನ್ನದಾಸೋಹ ಸಂದರ್ಭದಲ್ಲಿ ಮೇಲುಸ್ತುವಾರಿ ಮಾಡುತ್ತಿದ್ದ ಮಠದ ವಿದ್ಯಾರ್ಥಿ, ಅನ್ನದ ಮಹತ್ವ ತಿಳಿಸಿಕೊಟ್ಟಿದ್ದಾನೆ. ಅಲ್ಲದೇ ಪ್ರಸಾದ ಚೆಲ್ಲಬೇಡಿ, ಮುಂದೆ ಅನ್ನ ಸಿಗದ ಕಾಲ ಬರುತ್ತೆ ಎಂದು ಬಾಲಕ ಹೇಳಿದ್ದಾನೆ. ಅನ್ನ ತಿಂದರೆ ಶಕ್ತಿ ಬರುತ್ತೆ, ಇರುವ ಅನ್ನ ಚೆಲ್ಲಿದರೆ ಇನ್ನೊಬ್ಬರಿಗೆ ಅನ್ನ ಇಲ್ಲದಂತಾಗುತ್ತೆ ಎಂದು ಹಿರಿಯ ವ್ಯಕ್ತಿಗೆ ಆ ಬಾಲಕ ವಿನಮ್ರತೆಯಿಂದ ಹೇಳಿದ ವಿಡಿಯೋ ಇದು.

Comments are closed.