ರಾಷ್ಟ್ರೀಯ

ಜಲ್ಲಿಕಟ್ಟು ವೇಳೆ ಯುವಕನ ಚಡ್ಡಿವನ್ನೇ ಕಿತ್ತು ಎಳೆದೊಯ್ದ ಗೂಳಿ ! ವಿಡಿಯೋ ವೈರಲ್!

Pinterest LinkedIn Tumblr

ಪ್ರತಿ ವರ್ಷದಂತೆ ಈ ಬಾರಿಯೂ ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಅದ್ಧೂರಿಯಾಗಿ ನಡೆಯುತ್ತಿದ್ದು ಅಳಂಗನಲ್ಲೂರ್ ನಲ್ಲಿ ನಡೆದ ಜಲ್ಲಿಕಟ್ಟುವಿನಲ್ಲಿ ಗೂಳಿಯನ್ನು ಹಿಡಿಯಲು ಮುಂದಾಗಿದ್ದ ಯುವಕನ ಚಡ್ಡಿಯನ್ನೇ ಗೂಳಿಯೊಂದು ಎಳೆದೊಯ್ದಿರುವ ಘಟನೆ ನಡೆದಿದೆ.

ಗೂಳಿಯನ್ನು ಹಿಡಿದು ತಮ್ಮ ಪ್ರರಾಕ್ರಮ ಮೆರೆದು ಬಹುಮಾನ ಗೆಲ್ಲುವ ಉತ್ಸಾಹದಲ್ಲಿ ನುರಿತ ನೂರಾರು ಯುವಕರು ಜಲ್ಲಿಕಟ್ಟುವಿನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಪಾಯಕಾರಿ ಜಲ್ಲಿಕಟ್ಟುವನ್ನು ನೋಡಲು ಸಹ ಸಾವಿರಾರು ಸಂಖ್ಯೆಯಲ್ಲಿ ಜನರು ಅಳಂಗನಲ್ಲೂರ್ ನಲ್ಲಿ ಸೇರಿದ್ದರು.

ಈ ವೇಳೆ ಸ್ಪರ್ಧಾ ಗೂಡಿನಿಂದ ಹೊರಬಂದ ಗೂಳಿ ಯುವನೊರ್ವನನ್ನು ತಿವಿಯಲು ಮುಂದಾಗಿದೆ. ಈ ವೇಳೆ ಯುವಕನ ಚಡ್ಡಿ ಗೂಳಿಯ ಗೊಂಬುಗಳಿಗೆ ಸಿಕ್ಕಿಹಾಕಿಕೊಂಡಿದೆ. ಕೂಡಲೇ ಗೂಳಿ ಅಲ್ಲಿಂದ ಮುಂದೆ ಹೋಗಲು ಪ್ರಯತ್ನಿಸಿದ್ದರಿಂದ ಯುವಕ ಚಡ್ಡಿ ಕಿತ್ತು ಬಂದಿದೆ. ಕೂಡಲೇ ಯುವಕ ತನ್ನ ಮಾನ ಉಳಿಸಿಕೊಳ್ಳಲು ಆಚೆಕಡೆಗೆ ಓಡಿ ಹೋಗಿದ್ದಾನೆ.

Comments are closed.