ಕರ್ನಾಟಕ

ಬುದ್ಧಿವಾದ ಹೇಳಿದ್ದಕ್ಕೆ ಹೆತ್ತ ತಾಯಿಗೆ ಪೊರಕೆಯಲ್ಲಿ ಹೊಡೆದ ಮಗ…ಈ ವೀಡಿಯೊ ನೋಡಿ

Pinterest LinkedIn Tumblr

ಬೆಂಗಳೂರು: ಅಪ್ರಾಪ್ತಳ ಜತೆಗಿನ ಲವ್ ಕಹಾನಿ ಕುರಿತು ಬುದ್ಧಿವಾದ ಹೇಳಿದ್ದಕ್ಕೆ ಹೆತ್ತ ತಾಯಿಗೆ ಮಗನೇ ಪೊರಕೆಯಲ್ಲಿ ಹೊಡೆದಿರುವ ಘಟನೆ ನಡೆದಿದೆ.

https://youtu.be/rSbH_Iz7lQ8

ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜೀವನ್ (19) ಎಂಬಾತ ‘ನನ್ ವಿಚಾರ ಮಾತನಾಡಿದ್ರೆ ಇದೇ ಥರ ಟ್ರೀಟ್​ಮೆಂಟ್​ ಇರುತ್ತೆ’ ಎಂದು ತಾಯಿಗೆ ಧಮಕಿ ಹಾಕಿದ್ದಾನೆ. ಮಗ ಥಳಿಸುತ್ತಿದ್ದಾಗ ತಾಯಿ ಕೈಮುಗಿದರೂ ಕರುಣೆ ತೋರದ ಜೀವನ್​ ತಾಯಿಗೆ ಬೆದರಿಕೆ ಹಾಕಿರುವುದು ವಿಡಿಯೋದಲ್ಲಿ ಚಿತ್ರೀಕರಣವಾಗಿದೆ.

ಮಗನ ಹುಚ್ಚಾಟಕ್ಕೆ ನೊಂದ ತಾಯಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದು, ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಜೀವನ್​ನನ್ನು ಠಾಣೆಗೆ ಕರೆದು ಬುದ್ಧಿವಾದ ಹೇಳಿದ್ದಾರೆ.

Comments are closed.