ಕರ್ನಾಟಕ

ಹಾಲು ಕುಡಿದ ಮಕ್ಕಳೇ ಬದುಕೋಲ್ಲ ವಿಷ ಕುಡಿದವರು ಬದುಕ್ತಾರಾ?: ಸಿಎಂಗೆ ಬುಲೆಟ್ ಪ್ರಕಾಶ್ ಪ್ರಶ್ನೆ! (Video)

Pinterest LinkedIn Tumblr

ಬೆಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮೀ ದೇವಸ್ಥಾನಕ್ಕೆ ಮೀನೂಟ ಮಾಡಿ ತೆರಳಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವಾರು ಠೀಕೆಗಳು ವ್ಯಕ್ತವಾಗುತ್ತಿದ್ದು ನಟ ಬುಲೇಟ್ ಪ್ರಕಾಶ್ ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಅವರಿಗೆ ಒಂದಷ್ಟು ಸವಾಲು ಹಾಕಿದ ವಿಡಿಯೋ ಸದ್ಯ ವೈರಲ್ ಆಗಿದೆ.

‘ಮಾನ್ಯ ಮುಖ್ಯಮಂತ್ರಿಗಳೇ ಈ ಕಾಲದಲ್ಲಿ ಹಾಲು ಕುಡಿದ ಮಕ್ಕಳೇ ಬದುಕೋಲ್ಲ… ವಿಷ ಕುಡಿದವ್ರು ಬದುಕ್ತಾರಾ?. ಮೀನು ತಿಂದು ದೇವಸ್ಥಾನಕ್ಕೆ ತೆರಳಿದ್ದು ತಪು. ಜನರಿಗೆ ಕೆಟ್ಟ ಸಂದೇಶ ಕೊಡಬೇಡಿ. ಬೇಡರ ಕಣ್ಣಪ್ಪ ಜಿಂಕೆ ಮಾಂಸ ನೈವೇಧ್ಯ ಮಾಡಿದ ಬಗ್ಗೆ ಸ್ಪಷ್ಟನೆ ಕೊಡುವ ನೀವು ಕಣ್ಣಪ್ಪ ಶಿವನಿಗೆ ಕಣ್ಣು ಕೊಟ್ಟಂತೆ ನೀವು ಶಿವನಿಗೆ ಕಣ್ಣು ನೀಡಿ’ ಎಂದು ಸವಾಲು ಹಾಕಿದ್ದಾರೆ.

ನಿಮ್ಮ ಇಂತಹ ವರ್ತನೆಗೆ ಮುಂದಿನ ಚುನಾವಣೆಯಲ್ಲಿ ಜನರೇ ‘ಫುಲ್ ಮೀಲ್ಸ್’ ಕೊಡ್ತಾರೆಂದು ಬುಲೆಟ್ ಖಾರವಾಗಿ ನುಡಿದಿದ್ದಾರೆ.

Comments are closed.