ರಾಷ್ಟ್ರೀಯ

ದಲಿತ ಕುಟುಂಬದ ಮೂವರಿಗೆ ನಡುರಸ್ತೆಯಲ್ಲಿಯೇ ಹಿಗಾಮುಗ್ಗಾ ಥಳಿಸಿದ ಪೊಲೀಸ್ ಪೇದೆಗಳು…ಇಲ್ಲಿದೆ ವೀಡಿಯೊ

Pinterest LinkedIn Tumblr

https://youtu.be/CV9294qM62Y

ತಿರುವಣಮಲೈ: ಮೂವರು ಪೊಲೀಸ್ ಪೇದೆಗಳು ದಲಿತ ಕುಟುಂಬದ ಮೂವರು ಸದಸ್ಯರಿಗೆ ಹಿಗಾಮುಗ್ಗಾ ಥಳಿಸಿದಂತ ಘಟನೆ ತಿರುವಣಮಲೈನಲ್ಲಿ ನಡೆದಿದೆ.

ಸೋಮವಾರ ಈ ಘಟನೆ ತಿರುವಣಮಲೈನ ಚಂಗಂನಲ್ಲಿ ನಡೆದಿದ್ದು, ಚಿನ್ನ ಖರೀದಿ ವಿಚಾರವಾಗಿ ಚಿನ್ನದ ಅಂಗಡಿಯಲ್ಲಿ ಗಂಡ ಮತ್ತು ಹೆಂಡತಿ ಹಾಗೂ ಮಗನ ನಡುವೆ ವಾಗ್ವಾದ ನಡೆಯುತ್ತಿತ್ತು. ಈ ವೇಳೆ ಎಂಟ್ರಿಯಾದ ಪೊಲೀಸರು ಪತಿಯ ಮೇಲೆ ಲಾಠಿ ಪ್ರಹಾರ ನಡೆಸಿದ್ರು. ಗಲಾಟೆ ಬಿಡಿಸಲು ಮಧ್ಯ ಪ್ರವೇಶಿದಿದ ಮಗನ ಮೇಲೂ ಹಿಗ್ಗಾ ಮಗ್ಗಾ ಥಳಿಸಿದ್ದಾರೆ.

ಪೊಲೀಸ್ ಪೇದೆಗಳಾದ ಮುರುಗನ್, ವಿಜಯ್ ಕುಮಾರ್ ಮತ್ತು ನಮ್ಮಝವಾರ್ ಎಂಬುವವರು ರಾಜ(45) ಈತನ ಪತ್ನಿ ಉಷಾ(40) ಹಾಗೂ ಸೂರ್ಯ(18 ಇವರ ಮೇಲೆ ದಾಳಿ ನಡೆಸಿದ್ದಾರೆ.

ಪತಿ ಹಾಗೂ ಮಗನ ರಕ್ಷಣೆಗೆ ಧಾವಿಸಿದ ಮಹಿಳೆ ಪೊಲೀಸರ ಕಾಲು ಹಿಡಿದು, ಪರಿಪರಿಯಾಗಿ ಹೊಡೆಯೋದನ್ನ ನಿಲ್ಲಿಸುವಂತೆ ಬೇಡಿಕೊಂಡರೂ ಬಿಡದ ಪೊಲೀಸರು ಇಬ್ಬರಿಗೂ ಲಾಠಿ ರುಚಿ ತೋರಿಸಿದ್ರು. ಇದೆಲ್ಲ ದೃಶ್ಯಗಳನ್ನ ಪ್ರತ್ಯಕ್ಷದರ್ಶಿಯೊಬ್ಬರು ಸೆರೆಹಿಡಿದಿದ್ದಾರೆ.

Comments are closed.