ರಾಷ್ಟ್ರೀಯ

ಹಾಡಹಗಲೇ ಉದ್ಯಮಿಯ ಮೇಲೆ ಲಾಂಗು ಮಚ್ಚುಗಳಿಂದ ದುಷ್ಕರ್ಮಿಗಳಿಂದ ಹಲ್ಲೆ

Pinterest LinkedIn Tumblr

ಲುಧಿಯಾನಾ: ಕ್ಷುಲ್ಲಕ ಕಾರಣಕ್ಕೆ ಉದ್ಯಮಿಯೊಬ್ಬರನ್ನು ಅವರ ಕಚೇರಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

ಉದ್ಯಮಿ ಗುರುಪ್ರೀತ್ ಸಿಂಗ್ ಹಲ್ಲೆಗೊಳಗಾದ ವ್ಯಕ್ತಿ. ಆಗ ತಾನೆ ಕಚೇರಿಗೆ ಆಗಮಿಸಿದ್ದ ಗುರುಪ್ರೀತ್ ಮೇಲೆ ದುಷ್ಕರ್ಮಿಗಳು ಲಾಂಗು ಮಚ್ಚುಗಳಿಂದ ಹಲ್ಲೆ ಮಾಡುವ ಭಯಾನಕ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪಾರ್ಕಿಂಗ್ ಸ್ಥಳದಲ್ಲಿ ಗುರುಪ್ರೀತ್ ಸಿಂಗ್ ಕಾರು ತಮ್ಮ ಕಾರಿಗೆ ಗುದ್ದಿದ್ದರಿಂದ ನಡೆದ ಜಗಳವೇ ದುಷ್ಕರ್ಮಿಗಳು ಹಲ್ಲೆ ನಡೆಸಲು ಕಾರಣ ಅಂತ ಹೇಳಲಾಗಿದೆ.

ಸದ್ಯಕ್ಕೆ ಹಲ್ಲೆಗೊಳಗಾದ ಗುರುಪ್ರೀತ್ ಅವರನ್ನು ದಯಾನಂತ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Write A Comment