ಕರಾವಳಿ

ಹಿಂದೂ ಸಂಘಟನೆಯ ಕಾರ್ಯಕರ್ತ, ಕುಂದಾಪುರ ಬಿಜೆಪಿ ಯುವಮೋರ್ಚಾ ಮಾಜಿ ಪ್ರ.ಕಾರ್ಯದರ್ಶಿ ಪ್ರದೀಪ್ ಸಂಗಮ್ ನಿಧನ

Pinterest LinkedIn Tumblr

ಕುಂದಾಪುರ: ವರ್ಷಗಳಿಂದೀಚೆಗೆ ತೀವೃ ಅನಾರೋಗ್ಯದಿಂದ ಬಳಲಿ ಹಾಸಿಗೆ ಹಿಡಿದಿದ್ದ ಕುಂದಾಪುರ ಭಾಗದ ಹಿಂದೂಪರ ಸಂಘಟನೆಯ ಮುಂಚೂಣಿ ಕಾರ್ಯಕರ್ತ ಪ್ರಸ್ತುತ ಕೋಟೇಶ್ವರ ಮಾರ್ಕೋಡು‌ ನಿವಾಸಿ ಪ್ರದೀಪ್ ಸಂಗಮ್ (41) ಚಿಕಿತ್ಸೆಗೆ ಸ್ಪಂದಿಸದೆ‌ ಸ್ವಗೃಹದಲ್ಲಿ ಬುಧವಾರ ಮಧ್ಯಾಹ್ನ ಮೃತರಾದರು ಎಂದು ವರದಿಯಾಗಿದೆ.

ಕಳೆದ ಮೂರು ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಅವರು ತೀವೃ ಗಾಯಗೊಂಡಿದ್ದರು. ಈ‌ ಮೊದಲು ನೇತೃ ಸಂಬಂಧಿ‌ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಅಪಘಾತದ ಬಳಿಕ ಹಂತಹಂತವಾಗಿ ಆರೋಗ್ಯದಲ್ಲಿ ಏರುಪೇರಾಗಿ ವರ್ಷದ ಹಿಂದೆ ಸಂಪೂರ್ಣ ಹಾಸಿಗೆ ಹಿಡಿದಿದ್ದರು. ಇವರ ಚಿಕಿತ್ಸೆಗೆ ಹಲವರು ಸಹಕಾರವನ್ನು ನೀಡಿದ್ದರು. ಇತ್ತೀಚೆಗೆ ಹಿರಿಯ ಸಹೋದರ ಕೂಡ ಮೃತರಾಗಿದ್ದು ಅವಿವಾಹಿತರಾಗಿದ್ದ ಪ್ರದೀಪ್‌ರನ್ನು ತಾಯಿ ಹಾಗೂ ಕಿರಿಯ ಸೋದರ ಆರೈಕೆ ಮಾಡುತ್ತಿದ್ದರು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಮನೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ವಿಶ್ವಹಿಂದೂಪರಿಷತ್, ಬಜರಂಗದಳದ ಕಾರ್ಯಕರ್ತನಾಗಿ ಕುಂದಾಪುರ ನಗರ ಹಾಗೂ ತಾಲೂಕು ಸಂಚಾಲಕರಾಗಿ ಹಲವು ವರ್ಷಗಳ ಕಾಲ ಹಿಂದೂಪರ ಕಾರ್ಯಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದರು. ಕೆಲ ವರ್ಷದ ಹಿಂದೆ ಬಿಜೆಪಿಯ ಯುವಮೋರ್ಚಾ ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿದ್ದರು.

 

Comments are closed.