ಕರಾವಳಿ

ವಕ್ವಾಡಿ: ಆಸರೆ ಟ್ರಸ್ಟ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

Pinterest LinkedIn Tumblr

ಕುಂದಾಪುರ: ಆಸರೆ ಟ್ರಸ್ಟ್ ರಿ. ವಕ್ವಾಡಿ ಇವರ ನೇತೃತ್ವದಲ್ಲಿ ಹೊನ್ನಾವರದ ಶ್ರೀದೇವಿ ಮೆಡಿಕಲ್ ಹಾಸ್ಪಿಟಲ್ ಮುಖ್ಯಸ್ಥರಾದ
ಡಾ. ಚಂದ್ರಶೇಖರ್ ಶೆಟ್ಟಿಯವರು ತನ್ನ ತಾಯಿ ದಿವಂಗತ ಮಂಜಮ್ಮ ಶೆಟ್ಟಿಯವರ ಸ್ಮರಣಾರ್ಥವಾಗಿ ವಕ್ವಾಡಿ ಪ್ರೌಢಶಾಲೆಯ ಎಸ್.ಎಸ್‌.ಎಲ್.ಸಿ. ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ನೀಡುವ ಸಹಾಯಧನವನ್ನು ಜೂ.17 ಬುಧವಾರ ವಕ್ವಾಡಿ ಶ್ರೀ ಹಳೆಯಮ್ಮ ಸಭಾಭವನದಲ್ಲಿ ವಿತರಣೆ ಮಾಡಲಾಯಿತು.

ಆಸರೆ ಟ್ರಸ್ಟ್ ವಕ್ವಾಡಿ ಇದರ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸಣ್ಣ್‌ಗಲ್ ಮನೆ, ಕಾರ್ಯದರ್ಶಿ ಸತೀಶ್ ಪೂಜಾರಿ, ಉಪಾಧ್ಯಕ್ಷ ಆನಂದ ಆಚಾರ್, ಸದಸ್ಯ ಗಿರೀಶ್ ಐತಾಳ್, ಶಾಲೆಯ ದೈಹಿಕ ಶಿಕ್ಷಕರಾದ ಕುಸುಮಾಕರ ಶೆಟ್ಟಿ ಇದ್ದರು.

Comments are closed.