ಕರಾವಳಿ

ತಲ್ಲೂರು ಸೇತುವೆಯಲ್ಲಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಪಾರು

Pinterest LinkedIn Tumblr

ಕುಂದಾಪುರ: ಬೈಂದೂರು-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರ ತಲ್ಲೂರು ಸೇತುವೆಯ ತಡೆಗೋಡೆಗೆ ಮಹಾರಾಷ್ಟ್ರ ಮೂಲದ ಗೂಡ್ಸ್ ವಾಹನ ಢಿಕ್ಕಿಯಾಗಿ, ಅದರ ಹಿಂದೆ ಬರುತ್ತಿದ್ದ ಕಾರು ಆ ಗೂಡ್ಸ್ ವಾಹನಕ್ಕೆ ಢಿಕ್ಕಿಯಾದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ಸಹಿತ ಪ್ರಯಾಣಿಕರು, ಗೂಡ್ಸ್ ವಾಹನ ಚಾಲಕ  ಗಾಯಗೊಂಡು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೂಡ್ಸ್ ವಾಹನ ಚಾಲಕ ವೇಗವಾಗಿ, ಅಜಾಗರೂಕತೆಯಿಂದ ಬಂದು ಸೇತುವೆಯ ತಡೆಗೋಡೆಗೆ ಢಿಕ್ಕಿಯಾಗಿದೆ. ಹಿಂದಿನಿಂದ ಬಂದು ಢಿಕ್ಕಿಯಾದ ಕಾರಿನ ಏರ್ ಬ್ಯಾಗ್ ತೆಗೆದುಕೊಂಡಿದೆ. ಅಪಘಾತದ ತೀವ್ರತೆಗೆ ಕಾರು ಹಾಗೂ ಗೂಡ್ಸ್ ವಾಹನಗಳೆರಡು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಜಖಂಗೊಂಡಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣಾ ಪಿಎಸ್ಐಗಳಾದ ಅನೂಪ್ ನಾಯಕ್, ಸುಧಾ ಪ್ರಭು ಹಾಗೂ ಸಿಬಂದಿಗಳು ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದಾರೆ.

ಟ್ರಾಫಿಕ್ ಜಾಮ್: ಸಂಜೆಯ ವೇಳೆ ಅಪಘಾತ ನಡೆದುದ್ದರಿಂದ‌ ಹೆದ್ದಾರಿಯಲ್ಲಿ ಗಂಟೆಗಳ ಕಾಲ ವಾಹನ ದಟ್ಟಣೆ ಜಾಸ್ತಿಯಾಗಿ, ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದವು.

Comments are closed.