ರೈತರ ತ್ಯಾಗವನ್ನು ಗುರುತಿಸಲು ರೈತಪೀಠ ಪ್ರಶಸ್ತಿ ಪ್ರದಾನ: ಡಾ. ಜಿ.ರಾಮಕೃಷ್ಣ ಆಚಾರ್
ಹೆಬ್ರಿ: ರೈತರು ಉತ್ತಮವಾದ ಬದುಕು ಸಾಗಿಬೇಕು. ರೈತರ ತ್ಯಾಗವನ್ನು ಗುರುತಿಸುವ ಉದ್ದೇಶದಿಂದ ರೈತಪೀಠ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ನಾಗಮಂಡಲದ ಮೂಲಕ ಪ್ರಶಸ್ತಿ ಪ್ರಧಾನ ನಡೆಯಲಿದ್ದು ರೈತ ಸಮುದಾಯಕ್ಕೆ ವಿಶೇಷ ಮನ್ನಣೆ ನೀಡುವುದು ನಮ್ಮ ಮುಖ್ಯ ಉದ್ದೇಶ. ದೇಸಿ ಗೋವಿನ ತಳಿಗಳ ಅಭಿವೃದ್ಧಿ, ಸುಧಾರಿತ ತಂತ್ರಜ್ಞಾನ ಬಳಕೆ, ಯುವಜನರನ್ನು ಕೃಷಿಯತ್ತ ಒಲವು ಮೂಡಿಸುವ ಪ್ರಮುಖ ಉದ್ದೇಶದಿಂದ ಪ್ರಕೃತಿಗೆ ಹತ್ತಿರವಾದ ನಾಗಮಂಡಲ ಮಾಡುತ್ತಿದ್ದೇವೆ ಎಂದು ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದ ಪ್ರವರ್ತಕರಾದ ಡಾ. ಜಿ.ರಾಮಕೃಷ್ಣ ಆಚಾರ್ ಹೇಳಿದರು.

ಅವರು ಸೋಮವಾರ ಮುನಿಯಾಲು ಸಂಜೀವಿನಿ ಗೋಧಾಮದ ನಾಗಬನದಲ್ಲಿ ಫೆಬ್ರವರಿ 19 ರಿಂದ 21 ರವರೆಗೆ ನಡೆಯಲಿರುವ ಏಕಪವಿತ್ರ ಶ್ರೀಮನ್ನಾಗಮಂಡಲದ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮುನಿಯಾಲು ಶ್ರೀ ಮನ್ನಾಗಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಕೈಗಾರಿಕೊಧ್ಯಮಿ ಡಾ.ಜಿ. ರಾಮಕೃಷ್ಣ ಆಚಾರ್ ಅವರು ರೈತರಿಗೆ ವಿಶೇಷ ಗೌರವ ಸಿಗಬೇಕೆಂಬ ಹಂಬಲ ಹೊಂದಿದವರು. ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡಲು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಕನಸಿನ ರೈತಪೀಠ ಪ್ರಶಸ್ತಿಯನ್ನು ನಾಗಮಂಡಲದ ಮೂಲಕ ಮಾಡಲು ಹೊರಟಿರುವುದು ಮಾದರಿ ಕಾರ್ಯ ಎಲ್ಲರೂ ಸಹಕಾರ ನೀಡಬೇಕೆಂದು.

ಸಮಿತಿಯ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು ಮಾತನಾಡಿ, ನಾಗಮಂಡಲದಲ್ಲಿ ಪ್ರಸಾದ ರೂಪದಲ್ಲಿ ಗಿಡ ಹಾಗೂ ಬೀಜದ ಉಂಡೆಯನ್ನು ನೀಡುವ ಯೋಚನೆ ಅತ್ಯಂತ ಶ್ರೇಷ್ಠ ಕಾರ್ಯ, ಯಾವುದೇ ಆಡಂಬರವಿಲ್ಲದೆ, ರೈತರು, ವಿದ್ಯಾರ್ಥಿಗಳನ್ನು, ಯುವಜನರನ್ನು ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವಂತೆ ನಾಗಮಂಡಲ ಪುಣ್ಯದ ಕಾರ್ಯ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸವಿತಾ ಆರ್. ಆಚಾರ್, ರಕ್ಷಿತ್ ಆಚಾರ್ ಇದ್ದರು.
ಕೊರಂಗ್ರಪಾಡಿ ವಿದ್ವಾನ್ ಕೆಪಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ, ವಾಸುದೇವ ಭಟ್ ಅವರ ಸಹಯೋಗದೊಂದಿಗೆ ಪಾತ್ರಿಗಳಾದ ರಾಮಚಂದ್ರ ಕುಂಜಿತ್ತಾಯ ಹಾಗೂ ಗೋಳಿಯಂಗಡಿ ಸುಬ್ರಹ್ಮಣ್ಯ ವೈದ್ಯ ಅವರ ಮೇಳದೊಂದಿಗೆ ನಾಗಮಂಡಲ ನಡೆಯಲಿದೆ.
ಫೆಬ್ರವರಿ 19ರ ಗುರುವಾರ ಋತಿಜ್ವರ ಸ್ವಾಗತ, ಋತಿಗ್ವರಣ, ಫಲನ್ಯಾಸ-ಪ್ರಾರ್ಥನೆ, ಆದ್ಯಶುದ್ಧಿ- ಪುಣ್ಯಾಹ, ಮಾತೃಕಾಪೂಜನಮ್, ನಾಂದೀಸಮಾರಾಧನ್, ಸಪ್ತರ್ಷಿ ಪೂಜನಮ್, ಅರಣಿಮಥನ, ಬ್ರಹ್ಮ ಕೂರ್ಚ ಹೋಮ, 6 ಕಾಯಿ ಗಣಯಾಗ, ನವಗ್ರಹ ಯಾಗ, ಪ್ರತಿಸರಬಂಧಪೂರ್ವಕ ಕಂಕಣಬಂಧನ, ಶ್ರೀಮದ್ ಭಾಗವತ ಪಾರಾಯಣರಂಭ, ಉಗ್ರಾಣ ಮುಹೂರ್ತ, ಅನ್ನರಾಧನ ಉಗ್ರಾಣ ಮುಹೂರ್ತ, ಅಂಕೂರ ಪೂಜೆ, ಸಪ್ತಶುದ್ಧಿ, ಭೂ ಶುದ್ದಿ, ವಾಸ್ತು ವಿದ್ಯಾ ಕಲಪ, ರಾಕ್ಷೋಘ್ನಸೂಕ್ತಯಾಗ, ಪ್ರಕಾರ ಬಲಿ ನಡೆಯಲಿದೆ. 20 ರ ಶುಕ್ರವಾರ ಮೃತ್ಯುಂಜಯ ಹೋಮ, ಕೂಷ್ಮಂಡಯಾಗ, ಭೂತನಾಥ ಪ್ರಿತೀಕರ ಪ್ರತ್ಯಕ್ಷ ಅಶ್ವಪೂಜಾ, ಪ್ರಸನ್ನ ಪೂಜೆ, ಸಾನ್ನಿಧ್ಯಾರ್ಥ ನೂರುಂಪಾಲುಮ್, ಚಕ್ರಬ್ಜಮಂಡಲ ಪೂಜಾ, ಭದ್ರಕಮಂಡಲ ಪೂಜೆ ನಡೆಯಲಿದೆ.
ಫೆಬ್ರವರಿ 21ರ ಶನಿವಾರ ಆಶ್ಲೇಷ ಬಲಿದಾನ, ಪಂಚ ವಿಂಶತಿ ದ್ರವ್ಯ ಮಿಳಿತ ಕಲಶ, ಪ್ರಧಾನಯಾಗ, ಸರ್ಪತ್ರಯ ಮಂತ್ರ ಯಾಗ, ಪವಮಾನ ಸೂಕ್ತಯಾಗ, ತಿಲಯಾಗ, ಬ್ರಹ್ಮಚಾರಿ ಆರಾಧನೆ, ಪ್ರಸನ್ನ ಪೂಜೆ, ಪಲ್ಲಪೂಜೆ, ಅನ್ನರಾದನೆ, ದುರ್ಗ ನಮಸ್ಕಾರ, ಹಾಲಿಟ್ಟು ಸೇವೆ, ಏಕ ಪವಿತ್ರ ಶ್ರೀಮನ್ನಾ ನಾಗಮಂಡಲ ಸೇವೆ, ಅನುಗ್ರಹ ವಾಕ್ಯ ಪ್ರಧಾನ, ಪ್ರಸಾದ ವಿತರಣೆ, ಪ್ರಸನ್ನ -ಉತ್ತರ ಪೂಜೆ, ಮಹಾ ಅನ್ನಸಂತರ್ಪಣೆ ಜರುಗಲಿದೆ.
ಫೆಬ್ರವರಿ 20 ಶುಕ್ರವಾರ : ನಾಗಮಂಡಲದಲ್ಲಿ ಕೃಷಿ ಮಂಡಲ
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ನಡೆಯುವ ನಾಗಮಂಡಲದಲ್ಲಿ ಕೃಷಿಯ ವಿಚಾರಗೋಷ್ಠಿ “ಕೃಷಿ ಮಂಡಲ” ನಡೆಯಲಿದೆ.
ಕೃಷಿ ಮಂಡಲದ ಕೃಷಿ ವಿಚಾರಗೋಷ್ಠಿಯನ್ನು ಬೆಳಗ್ಗೆ 10:30ಕ್ಕೆ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಉದ್ಘಾಟಿಸುವರು. ಪ್ರಸ್ತಾವನೆಯನ್ನು ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾಡಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ನಡೆಯುವ ಮೊದಲ ಕೃಷಿ ವಿಚಾರಗೋಷ್ಠಿಯಲ್ಲಿ ಕರಾವಳಿ ಕೃಷಿ ಬಹುತ್ವ ಮತ್ತು ಧಾರ್ಮಿಕ ನಂಬಿಕೆಗಳು ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿ ನಿವೃತ್ತ ಪ್ರಾಧ್ಯಾಪಕ ಮತ್ತು ಪ್ರಸಿದ್ಧ ಕೃಷಿ ಅಂಕಣಕಾರ ಡಾ. ನರೇಂದ್ರ ರೈ ದೇರ್ಲ ವಿಚಾರ ಮಂಡಿಸುವರು.
2ನೇ ಗೋಷ್ಠಿ : ಯುವಜನತೆ ಮತ್ತು ಭವಿಷ್ಯದಲ್ಲಿ ಕೃಷಿ ಸಾಧ್ಯತೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ಪುತ್ತೂರು ಗ್ರಾಮಜನ್ಯದ ನಿರಂಜನ ಪೊಳ್ಯ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರಾದ ಪ್ರಗತಿಪರ ಕೃಷಿಕ ಗುಣ ಪಾಲ ಕಡಂಬ ವಹಿಸಲಿದ್ದಾರೆ.
ಮಧ್ಯಾಹ್ನ 2:30ಕ್ಕೆ ನಡೆಯಲಿರುವ ಕೃಷಿಗೋಷ್ಠಿಯಲ್ಲಿ ಹೊಸ ತಲೆಮಾರಿನ ಕೃಷಿ ಮತ್ತು ಹಳ್ಳಿ ವಾಪಸತಿಯ ಅನುಭವ ವಿಷಯದ ಮೇಲೆ ಕುರುಡಪದವು ಮೈರುಗದ ಪ್ರಯೋಗಶೀಲ ಕೃಷಿಕ ಪ್ರವೀಣ್ ಕೇಶವ್ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಧನಂಜಯ ವಹಿಸಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಬಡಗುತ್ತಿಟ್ಟಿನ ಖ್ಯಾತ ಭಾಗವಾತರಾದ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ತೆಂಕುತಿಟ್ಟಿನ ಖ್ಯಾತ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಬಳಗದಿಂದ ಯಕ್ಷ ಗಾನವಲ್ಲರಿ ನಡೆಯಲಿದೆ.
Comments are closed.