ಕರಾವಳಿ

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

Pinterest LinkedIn Tumblr

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್‍ತಿ (97) ವಯೋಸಹಜ ಅಸೌಖ್ಯದಿಂದ ಜೂ.30ರಂದು ನಿಧನ ಹೊಂದಿದರು ಎಂದು ವರದಿಯಾಗಿದೆ. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮೃತರು ಕೃಷಿಕರಾಗಿದ್ದರು. ಸಂಸದ ಪೂಜಾರಿಯವರು ತನ್ನ ರಾಜಕೀಯ ಜೀವನದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವ ಪ್ರತಿ ಸಂದರ್ಭ ತಾಯಿ ವಾಸವಿರುವ ಮನೆಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ದರು. ಚುನಾವಣೆಯಲ್ಲೂ ತಾಯಿಯೊಂದಿಗೆ ಆಗಮಿಸಿ ಮತ ಚಲಾಯಿಸುತ್ತಿದ್ದರು.

ಗಣ್ಯರ ಸಂತಾಪ: ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಉದ್ಯಮಿ ಆನಂದ ಸಿ.ಕುಂದರ್ ಸಹಿತ ಹಲವು ಗಣ್ಯರು ಮೃತರ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ.

Comments are closed.