ಕರಾವಳಿ

ಬೈಂದೂರು ನೆರೆ ಬಾಧಿತ ಪ್ರದೇಶಗಳ ಜನರಿಗೆ ದಿನಸಿ‌ ಕಿಟ್, ಸ್ವಯಂಸೇವಕರಿಗೆ ಲೈಫ್ ಜಾಕೇಟ್ ವಿತರಿಸಿದ ಸಮಾಜಸೇವಕ ನಿತಿನ್ ನಾರಾಯಣ್

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಉಡುಪಿ: ಕರಾವಳಿಯಲ್ಲಿ ಸುಮಾರು ಹದಿನೈದು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದ್ದು ಜಿಲ್ಲೆಯ ಬೈಂದೂರು ತಾಲೂಕಿನ ಹಲವೆಡೆ ಮಳೆಯಿಂದ ಹಾನಿ ಸಂಭವಿಸಿದೆ.

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಯುವ ಮುಖಂಡರಾದ ನಿತಿನ್ ನಾರಾಯಣ್ ಅವರು ಭೇಟಿ ನೀಡಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ನೆರೆ ಪ್ರದೇಶಗಳಾದ ನಾವುಂದ,ಬಡಾಕೆರೆ, ಸಾಲ್ಬುಡ, ಹಳಗೇರಿ ಹಾಗೂ ನೇರಳಕಟ್ಟೆ ಗ್ರಾಮಗಳಿಗೆ ತೆರಳಿದ ಅವರು ನಿತಿನ್ ನಾರಾಯಣ್ ಜೀ ಗೆಳೆಯರ ಬಳಗದ ವತಿಯಿಂದ 150ಕ್ಕೂ ಅಧಿಕ ದಿನಸಿ ಕಿಟ್ ಗಳನ್ನು ವಿತರಿಸಿದರು. ಹಾಗೂ ನೆರೆಯ ಸಂದರ್ಭ ದೋಣಿಗಳಲ್ಲಿ ಜನ ಹಾಗೂ ಜಾನುವಾರು ರಕ್ಷಣೆಯಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಸ್ವಯಂಸೇವಕರಿಗೆ ಉತ್ತಮ ಗುಣಮಟ್ಟದ ಲೈಫ್ ಜಾಕೆಟ್ ಗಳನ್ನು ನೀಡಿ ಹುರಿದುಂಬಿಸಿದರು.

ಎನ್.ಎನ್ ಗ್ರೂಫ್ ಮಾಲೀಕರಾದ ನಿತಿನ್ ನಾರಾಯಣ್ ಅವರು ಸಾಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದು ಇವರ ಕುಟುಂಬ ಬೈಂದೂರು ತಾಲೂಕಿನ ಶಿರೂರಿನಲ್ಲಿದೆ.

Comments are closed.