ಕರ್ನಾಟಕ

ಗಾಂಜಾ ಮಾರಾಟ: ಮೂವರು ಆರೋಪಿಗಳ ಬಂಧಿಸಿದ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು

Pinterest LinkedIn Tumblr

ಮಡಿಕೇರಿ: ಮಡಿಕೇರಿ-ಮಂಗಳೂರು ರಸ್ತೆಯ ತಾಳತ್ತಮನೆ ಜಂಕ್ಷನ್‌ ಬಳಿ ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆ ಮಾಡಿದ್ದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

(ಸಾಂದರ್ಭಿಕ ಚಿತ್ರ)

ಆರೋಪಿಗಳಾದ ಮಡಿಕೇರಿ ನಗರದ ಟಿ.ಜಾನ್‌ ಲೇಔಟ್‌ ನಿವಾಸಿ ಮಹಮ್ಮದ್‌ ಮೊಹಿಸೀನ್‌, ಹಾಕತ್ತೂರು ಗ್ರಾಮದ ನಿವಾಸಿ ಕರುಣಾ ಕುಮಾರ್‌, ಅಪ್ಪಂಗಳ ಗ್ರಾಮದ ನಿವಾಸಿ ಪ್ರತಾಪ್‌ ಕುಮಾರ್‌ ಎಂಬುವವರನ್ನು ಬಂಧಿಸಲಾಗಿದ್ದು ಬಂಧಿತರಿಂದ 680 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದ ಪತ್ತೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸ್‌ ನಿರೀಕ್ಷಕರಾದ ರವಿಕಿರಣ್‌ ಎಸ್‌,ಎಸ್, ಸಿಬ್ಬಂದಿಯವರಾದ ಮಂಜುನಾಥ್‌ ಎನ್.ಎಂ, ರವಿಕುಮಾರ್‌, ಪ್ರಸನ್ನ, ಸೋಮಶೇಖರ್‌ ಸಜ್ಜನ್‌, ದಿನೇಶ್‌ ಕೆ.ಡಿ, ಮಧು ಎಸ್‌, ಪ್ರವೀಣ್‌ ಮತ್ತು ಸುನಿಲ್‌ ಪಾಲ್ಗೊಂಡಿದ್ದರು.

ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.

Comments are closed.