ಕರಾವಳಿ

ಮಾವಿನಕಾಯಿ ಕೀಳಲು ಮರ ಹತ್ತಿದ್ದ ಮಂಗಳೂರು ಕೊಣಾಜೆ ಯುವಕ ವಿದ್ಯುತ್ ತಂತಿ‌ ತಗುಲಿ ಸಾವು

Pinterest LinkedIn Tumblr

ಮಂಗಳೂರು: ಮಾವಿನಕಾಯಿ ಕೊಯ್ಯಲೆಂದು ಮರ ಏರಿದ ಯುವಕನೋರ್ವ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ ನಲ್ಲಿ ಸಂಭವಿಸಿದೆ.

ಮಹಮ್ಮದ್ ಇಲಿಯಾಸ್ (21) ಮೃತ ಯುವಕನಾಗಿದ್ದಾನೆ. ಸಂಜೆ ವೇಳೆ ಮನೆ ಸಮೀಪದ ಕಾಂಪೌಂಡಿನಲ್ಲಿರುವ ಮಾವಿನಮರಕ್ಕೆ ಕಾಯಿ ಕೀಳಲೆಂದು ತೆರಳಿದ ವೇಳೆ ವಿದ್ಯುತ್ ತಂತಿ ತಗುಲಿ‌ ಈ ದುರ್ಘಟನೆ ನಡೆದಿದೆ.

ಮಾವಿನ ಕಾಯಿ ಕೀಳಲು ಬಳಸುತ್ತಿದ್ದ ಕೋಲಿನ ಕಬ್ಬಿಣದ ಕೊಕ್ಕೆಗೆ ಮರದ ಕೊಂಬೆಗಳ ಮೂಲಕ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

Comments are closed.