ಕರ್ನಾಟಕ

ಅಜಾನ್ ನಿಲ್ಲಿಸಲು ಸರ್ಕಾರ ಕ್ರಮಕೈಗೊಂಡಿಲ್ಲ; ಉತ್ತರಪ್ರದೇಶದ ಬುಲ್ಡೋಜರ್ ಕಾನೂನು ರಾಜ್ಯದಲ್ಲೂ ತರಲಿ: ಪ್ರಮೋದ್ ಮುತಾಲಿಕ್

Pinterest LinkedIn Tumblr

ಮೈಸೂರು: ಆಜಾನ್ ಗೆ ಪ್ರತಿಯಾಗಿ ಸುಪ್ರಭಾತ ಮೊಳಗಿಸಬೇಕೆಂಬ ಅಭಿಯಾನ ಈಗ ಭುಗಿಲೆದ್ದಿದ್ದು, ಹನುಮಾನ್ ಚಾಲೀಸಾ ಪಠಣೆಗೆ ಪ್ರಮೋದ್ ಮುತಾಲಿಕ್ ಚಾಲನೆ ನೀಡಿದ್ದಾರೆ.

ಮೈಸೂರಿನ ಶಿವರಾಂ ಪೇಟೆಯಲ್ಲಿರುವ ಶ್ರೀ ತ್ರಿಪುರ ಭೈರವಿ ಮಠದ ಆಂಜನೇಯ ಸ್ವಾಮಿ ದೇಗುಲದಲ್ಲಿ ಚಾಲನೆ ನೀಡಲಾಗಿದ್ದು, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಹಿಂದೂ ಕಾರ್ಯಕರ್ತರು ಶ್ರೀರಾಮ, ಶಿವನ ಭಜನೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ್ , ಉತ್ತರಪ್ರದೇಶದ ಬುಲ್ಡೋಜರ್ ಕಾನೂನು ರಾಜ್ಯದಲ್ಲೂ ತರಲಿ, ಧ್ವನಿವರ್ಧಕ ತೆರವು ವಿಚಾರದಲ್ಲಿ ಸರ್ಕಾರ ಹಿಂದೂಪರ ನಿಲ್ಲುತ್ತಿಲ್ಲ. ಧ್ವನಿವರ್ಧಕ ತೆರವು ಮಾಡುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಆಜಾನ್‌ನಿಂದ ವಿದ್ಯಾರ್ಥಿಗಳು, ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಬೆಂಗಳೂರಿನಲ್ಲಿ ಶ್ರೀರಾಮಸೇನೆ ಕಾರ್ಯಕರ್ತರನ್ನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿರುವುದು ಅತ್ಯಂತ ಖಂಡನೀಯವಾದ್ದು. ಯಾರ ಮೇಲೆ ಕ್ರಮ ಕೈಗೊಳ್ಳಬೇಕು ಅವರ ಮೇಲೆ ಕ್ರಮ ಕೈಗೊಂಡಿಲ್ಲ. ನಾಚಿಕೆ ಮಾನ ಮರ್ಯದೆ ಇಲ್ಲವಾ. ನಿಮಗೆ ನಮ್ಮ ದೇವಸ್ಥಾನದಲ್ಲಿ ನಾವು ಪೂಜೆ ಮಾಡಿದ್ದು ಅಪರಾಧಾನಾ? ನಾವು ಯಾವ ದೇಶದಲ್ಲಿ ಇದ್ದೇವೆ ಎಂದು ಪ್ರಶ್ನಿಸಿದರು. ಪೂಜೆ ಮಾಡಲು ನಮಗೆ ಧಾರ್ಮಿಕ ಸ್ವಾತಂತ್ರ್ಯ ಇಲ್ವಾ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರವಾಗಿ ಹೋರಾಟ ಮಾಡುತ್ತೇವೆ. ಮಠಾಧೀಶರ ಜತೆ ಮಾತನಾಡಿ ರೂಪರೇಷೆ ಸಿದ್ಧಪಡಿಸುತ್ತೇವೆ ಎಂದರು.

Comments are closed.