ಕರಾವಳಿ

ಕುಂದಾಪುರದಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ; ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ

Pinterest LinkedIn Tumblr

ಕುಂದಾಪುರ: ಮುಸಲ್ಮಾನರ ಪವಿತ್ರ ಹಬ್ಬವಾದ ರಂಜಾನ್ ತಿಂಗಳ ಈದ್-ಉಲ್-ಫಿತೃ್ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಕುಂದಾಪುರದಲ್ಲಿ ಮುಸ್ಲಿಂ ಬಾಂಧವರು ಮಂಗಳವಾರ ಬೆಳಿಗ್ಗೆ ಆಚರಿಸಿದರು.

ಕುಂದಾಪುರದ ಜಾಮೀಯಾ ಮಸೀದಿಯ ಖತೀಬರಾದ ಸದ್ದಾಂ ಹುಸೇನ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ದುವಾ ಹಾಗೂ ನಮಾಜ್ ನಡೆಯಿತು. ಬಳಿಕ ಪರಸ್ಪರ ಆಲಂಗಿಸಿಕೊಂಡು ಶುಭಾಶಯವನ್ನು ವಿನಿಮಯ ಮಾಡಿಕೊಂಡ ಮುಸಲ್ಮಾನ ಬಾಂಧವರು ಈದ್ ಶುಭಾಶಯವನ್ನು ಹಂಚಿಕೊಂಡರು.

ಜಾಮೀಯಾ ಮಸೀದಿಯಿಂದ ಕುಂದಾಪುರದ ಪಾರಿಜಾತ ವೃತ್ತದ ಸಮೀಪವಿರುವ ಈದ್ಗಾ ಮೈದಾನದವರೆಗೂ ಬೃಹತ್ ಮೆರವಣಿಗೆ ಮೂಲಕ ಸಾಗಿ ಬಂದ ಮುಸಲ್ಮಾನ ಬಾಂದವರು ಸಾಮೂಹಿಕ ಪ್ರಾರ್ಥನೆ (ದುವಾ) ಮಾಡಿದರು. ಕುಂದಾಪುರ ನಗರದಲ್ಲಿ ಹಾಗೂ ತಾಲೂಕಿನ ವಿವಿದೆಡೆಯಲ್ಲಿ ಶಾಂತಿಯುತವಾಗಿ ಹಬ್ಬವನ್ನು ಆಚರಿಸಲಾಯಿತು.

ಶಾಂತಿ, ಸಹನೆ, ಸಮಾನತೆ, ಸಹೋದರತೆಯ ಪ್ರತೀಕವಾದ ರಂಜಾನ್ ತಿಂಗಳಿನಲ್ಲಿ ಒಂದು ತಿಂಗಳು ಮುಸಲ್ಮಾನರು ಉಪವಾಸ ಕೈಗೊಳ್ಳುತ್ತಾರೆ.

Comments are closed.