ಕರಾವಳಿ

NH 169ರ ಮಾಳ ಗೇಟ್-ಕಾರ್ಕಳ ರಸ್ತೆ ಚತುಷ್ಪಥಿಕರಣಕ್ಕೆ ಅನುಮೋದನೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Pinterest LinkedIn Tumblr

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ನ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮಾಳ ಗೇಟ್ ನಿಂದ ಕಾರ್ಕಳ ತನಕದ ದ್ವಿಪಥ ರಸ್ತೆಯನ್ನು ಚತುಷ್ಪಥಿಕರಣ ಗೊಳಿಸಬೇಕೆಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಯವರಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭೇಟಿಯಾಗಿ ಮನವಿ ಸಲ್ಲಿಸಿದ್ದರ ಪರಿಣಾಮವಾಗಿ ಇಂದು 15.27 ಕಿ ಮೀ ಉದ್ದದ ರಸ್ತೆಯನ್ನು ಚತುಷ್ಪಥಿಕರಣಗೊಳಿಸಲು ರೂಪಾಯಿ 177.84 ಕೋಟಿಯನ್ನು ಬಿಡುಗಡೆ ಗೊಳಿಸಲು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಅನುಮೋದನೆಯನ್ನು ನೀಡಿದೆ ಎಂದು ತಿಳಿಸಿದ್ದಾರೆ.

ಶೃಂಗೇರಿ ಚಿಕ್ಕಮಗಳೂರು ಹಾಗೂ ಕಾರ್ಕಳ ಭಾಗದ ಜನರಿಗೆ ಪ್ರಯಾಣಿಸಲು ಬಹಳ ತ್ರಾಸದಾಯಕವಾಗಿದ್ದ ಈ ಮಾರ್ಗವನ್ನು ಚತುಷ್ಪಥಿಕರಣ ಗೊಳಿಸಲು ಅನುಮೋದನೆ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಸಚಿವೆ ಶೋಭಾ ಕರಂದ್ಲಾಜೆ ಧನ್ಯವಾದ ತಿಳಿಸಿದ್ದು ಶೀಘ್ರವೇ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಯು ಆರಂಭ ಗೊಳ್ಳಲಿದೆ.

Comments are closed.