ತಿರುವನಂತಪುರಂ: ಶಬರಿಮಲೆ ದೇವರ ದರ್ಶನಕ್ಕೆ ತೆರಳಿದ ಕರ್ನಾಟಕದ ಟಿಟಿ ವಾಹವೊಂದು ಭೀಕರ ಅಪಘಾತಕ್ಕಿಡಾಗಿ ಮೂವರು ಮರಣ ಹೊಂದಿರುವ ಘಟನೆ ಕೇರಳದ ಕೋಝಿಕ್ಕೋಡ್‍ನ ಪುರಕ್ಕಾಟ್ಟಿರಿಯಲ್ಲಿ ನಡೆದಿದೆ.

ಕರ್ನಾಟಕ ಮೂಲದ ಭಕ್ತರು ಟಿಟಿ ವಾಹನದಲ್ಲಿ ಶಬರಿ ಮಲೆಗೆ ತೆರಳುತ್ತಿದ್ದಾಗ ಪುರಕ್ಕಾಟ್ಟಿರಿಯ ಪುಲದಿಕುನ್ನು ಬೈಪಾಸ್ ಬಳಿ ಟಿಪ್ಪರ್ ಲಾರಿ ಮತ್ತು ಟಿಟಿ ನಡುವೆ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮರಣ ಹೊಂದಿದ್ದು 11 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರನ್ನು ಕರ್ನಾಟಕ ಮೂಲದ ಶಿವಣ್ಣ ಮತ್ತು ನಾಗರಾಜ ಎಂದು ಗುರುತಿಸಲಾಗಿದ್ದು, ಟಿಪ್ಪರ್ ಚಾಲಕ ಎರ್ನಾಕುಲಂ ಮೂಲದವರಾಗಿದ್ದಾರೆ.
Comments are closed.