ಕರ್ನಾಟಕ

ಮೇಕೆದಾಟು ಪಾದಯಾತ್ರೆಗೆ ನಟ ಶಿವರಾಜ್‌ ಕುಮಾರ್‌ ಚಾಲನೆ..!

Pinterest LinkedIn Tumblr

ಬೆಂಗಳೂರು: ಮೇಕೆದಾಟು ಪಾದಯಾತ್ರೆಯನ್ನು ಮಾಡಿಯೇ ಸಿದ್ದ ಎಂದಿರುವ ಕಾಂಗ್ರೆಸ್‌ ನಾಯಕರು ಈಗಾಗಲೇ ಕನಕಪುರದಲ್ಲಿ ಬೀಡುಬಿಟ್ಟಿದ್ದು ಭಾನುವಾರ ಬೆಳಗ್ಗೆ 8:30ಕ್ಕೆ ಪಾದಯಾತ್ರೆಗೆ ಆರಂಭಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಕನ್ನಡ ಚಿತ್ರೋದ್ಯಮ ಈಗಾಗಲೇ ಬೆಂಬಲ ನೀಡಿದ್ದು ಈಗ ನಟ ಶಿವರಾಜ್‌ ಕುಮಾರ್‌ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

ಶನಿವಾರ ತಮ್ಮ ಇಷ್ಟ ದೈವ ಕಬ್ಬಾಳಮ್ಮ, ಜಾಮೀಯಾ ಮಸೀದಿಯಲ್ಲಿ ಡಿಕೆ ಶಿವಕುಮಾರ್ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು ಸಂಗಮದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಡಿಕೆಶಿ ಮನೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆದಿದೆ. ಭಾನುವಾರ ಏನೆಲ್ಲಾ ಮಾಡಬೇಕು ಹಾಗೂ ಪೊಲೀಸರು ಬಂಧಿಸಲು ಆಗಮಿಸಿದರೆ ಏನು ಮಾಡಬೇಕು… ಈ ಎಲ್ಲ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯತಂತ್ರ ರೂಪಿಸಿದ್ದಾರೆ.

ಈ ಮಧ್ಯೆ ಪಾದಯಾತ್ರೆ ಮಾಡುವಂತಿಲ್ಲ ಎಂದು ರಾಮನಗರ ಎಸ್‍ಪಿ ನೋಟಿಸ್‌ ಜಾರಿ ಮಾಡಿದ್ದಾರೆ. ಕೈ ನಾಯಕರ ಮನವೊಲಿಸಲು ಅರ್ಧ ಗಂಟೆ ಪ್ರಯತ್ನಿಸಿದ್ದಾರೆ. ಆದ್ರೆ ಇದಕ್ಕೆ ಕಾಂಗ್ರೆಸ್ ನಾಯಕರು ಜಗ್ಗಿಲ್ಲ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ತುಮಕೂರು, ಕೊಪ್ಪಳದಿಂದ ನೂರಾರು ಕಾರ್ಯಕರ್ತರು ಬರುತ್ತಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ರಾಮನಗರ ಜಿಲ್ಲೆಯಾದ್ಯಂತ ಬಂದೋಬಸ್ತ್ ಕೈಗೊಂಡಿದ್ದು 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

 

Comments are closed.