ಉಡುಪಿ: ಸೋಮವಾರ ರಾತ್ರಿ ಕೋಟತಟ್ಟು ಕೊರಗ ಕಾಲೋನಿಯ ಮೆಹೆಂದಿ ಕಾರ್ಯಕ್ರಮದಲ್ಲಿ ಕೋಟ ಠಾಣೆ ಪೊಲೀಸರು ಕೊರಗ ಸಮುದಾಯದವರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಉಡುಪಿ ಹಿಂದೂ ಜಾಗರಣಾ ವೇದಿಕೆಯ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ನೇತೃತ್ವದಲ್ಲಿ ಕಾರ್ಯಕರ್ತರು ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿದ್ದು ದಾಳಿಯನ್ನು ಖಂಡಿಸಿದ್ದಾರೆ.
ಅತ್ಯಂತ ಪ್ರಾಮಾಣಿಕತೆ, ನಿಷ್ಟೆಗೆ ಹೆಸರಾದ ಕೊರಗ ಸಮುದಾಯದವರ ಮೇಲೆ ನಡೆದ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ. ಇದೊಂದು ಕ್ರೌರ್ಯವಾಗಿದ್ದು ನಾಗರಿಕ ಸಮಾಜ ಒಪ್ಪುವುದಿಲ್ಲ. ಘಟನೆಗೆ ಕಾರಣರಾಗಿರುವ ಠಾಣಾಧಿಕಾರಿ ಹಾಗೂ ಠಾಣಾ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಂಡು ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಜಿಲ್ಲೆಯಲ್ಲಿಯೇ ಅಪರಾಧ ಪಟ್ಟಿ ತೆಗೆದರೆ ಅದರಲ್ಲಿ ಕೊರಗ ಸಮುದಾಯದವರ ಮೇಲೆ ಯಾವುದೇ ಪ್ರಕರಣಗಳು ಕಾಣಸಿಗಲ್ಲ. ಅಷ್ಟು ಮುಗ್ದರು ಇವರು. ಕೋಟ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿಯವರೆಗೂ ಪಾರ್ಟಿ, ಕಾರ್ಯಕ್ರಮ ನಡೆದ ಅದೆಷ್ಟೋ ಉದಾಹರಣೆಗಳಿದೆ. ಮಟ್ಕಾ ದಂಧೆ, ವೇಶ್ಯಾವಾಟಿಕೆ, ಅಕ್ರಮ ಮರಳು ಸಾಗಾಟದಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಪೊಲೀಸರು ಯಾಕೆ ಕಡಿವಾಣ ಹಾಕುವುದಿಲ್ಲ..? ಎಂದು ಪ್ರಶ್ನಿಸಿದರು.
ಮಟ್ಕಾ, ಮರಳು ದಂಧೆಗೆ ಕೋಟ ಪೊಲೀಸರು ಕಡಿವಾಣ ಹಾಕಲಿ; ಹಿಂಜಾವೇ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ
ನಾವು ಭಾರತದಲ್ಲಿದ್ದೇವಾ..ಅಥವಾ ತಾಲಿಬಾನ್ ನಲ್ಲಿ ಇದ್ದೇವಾ..? ಇನ್ನು ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಸಂಬಂಧಪಟ್ಟ ಇಲಾಖೆ ಎಚ್ಚರಿಕೆ ವಹಿಸಬೇಕಾಗಿದೆ. ಕೊರಗ ಸಮುದಾಯದ ಜೊತೆ ಹಿಂದೂ ಜಾಗರಣ ವೇದಿಕೆ ನಿರಂತವಾಗಿ ಇರುತ್ತದೆ. ಎಂದರು.
ಈ ಸಂದರ್ಭದಲ್ಲಿ ಹಿಂಜಾವೇ ಪ್ರಮುಖರಾದ ಪ್ರವೀಣ್ ಯಕ್ಷಿಮಠ, ಶ್ರೀಕಾಂತ್ ಶೆಟ್ಟಿ, ಜ್ಞಾನೇಶ್ ಆಚಾರ್, ಶಂಕರ್ ಕೋಟ, ರಿಕೇಶ್ ಪಾಲನ್, ರವಿ ಹೇರೂರು, ಶಂಕರ್ ಕೋಟ, ರಂಜಿತ್ ಕುಮಾರ್ ಕೋಟ, ರತ್ನಾಕರ ಬಾರಿಕೆರೆ ಕೋಟ ಪ್ರಮೋದ್ ಮಂದರ್ತಿ, ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
Comments are closed.