ಕರ್ನಾಟಕ

ಅಗಲಿದ ರಾಜಕುಮಾರನಿಗಿಂದು ಚಿತ್ರರಂಗದ ಶೃದ್ಧಾಂಜಲಿ; ‘ಪುನೀತ್ ನಮನ’ಕ್ಕೆ ಅರಮನೆ ಮೈದಾನ ಸಜ್ಜು

Pinterest LinkedIn Tumblr

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಮಂಗಳವಾರಕ್ಕೆ 19 ದಿನಗಳಾಗುತ್ತಿದೆ.

ಪುನೀತ್ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ, ಸಮಾಜಕ್ಕೆ ನೀಡಿದ ಕೊಡುಗೆಯನ್ನು ಅವರು ನಡೆದುಕೊಂಡು ಬಂದ ಹಾದಿಯನ್ನು ಸ್ಮರಿಸಲು ಸ್ಯಾಂಡಲ್ ವುಡ್ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ್ ನಮನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಅಂತಿಮ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಾರ್ವಜನಿಕರಿಗೆ ಅವಕಾಶವಿಲ್ಲ….
ಪುನೀತ್ ನಮನ ಕಾರ್ಯಕ್ರಮ ಕೇವಲ ಚಿತ್ರರಂಗದವರು ಮತ್ತು ಗಣ್ಯರಿಗೆ ಸೀಮಿತವಾಗಿದ್ದು ಸಾರ್ವಜನಿಕರಿಗೆ ಪುನೀತ್ ಅಭಿಮಾನಿಗಳಿಗೆ ಕಾರ್ಯಕ್ರಮಕ್ಕೆ ಪ್ರವೇಶವಿಲ್ಲ. ಅಪರಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಿ ಸಾಯಂಕಾಲ 6 ಗಂಟೆಯವರೆಗೆ ಮುಂದುವರಿಯಲಿದೆ. ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಜನರು ಸುದ್ದಿವಾಹಿನಿಗಳಲ್ಲಿ ಕಾರ್ಯಕ್ರಮಗಳ ನೇರಪ್ರಸಾರವನ್ನು ಕುಳಿತಲ್ಲಿಯೇ ವೀಕ್ಷಿಸಬಹುದು.

ಗಣ್ಯರಿಗೆ ಪಾಸ್..
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳು, ಸಚಿವರು, ಕಲಾವಿದರಿಗೆ, ಗಣ್ಯರಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆಯಿರುತ್ತದೆ. ಮೈಸೂರಿನ‌ ಮಹಾರಾಜ ಯದುವೀರ್ ಅವರು ಕೂಡ ಬರಲಿದ್ದಾರೆ.

ದೊಡ್ಮನೆ ಕುಟುಂಬ ಭಾಗಿ..
ಪುನೀತ್​ ಹೆಸರಲ್ಲೇ ಕಾರ್ಯಕ್ರಮ ನಡೆಯುತ್ತಿರುವುದರಿಂದ ದೊಡ್ಮನೆಯ ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್​ ಹಾಗೂ ಅವರ ಕುಟುಂಬದವರು ಬರಲಿದ್ದಾರೆ.

ಕನ್ನಡ ತಾರೆಗಳ ಆಗಮನ….
ಕಾರ್ಯಕ್ರಮಕ್ಕೆ ಸುದೀಪ್, ಯಶ್, ಗಣೇಶ್, ಶಿವರಾಜ್​​ಕುಮಾರ್, ಉಪೇಂದ್ರ, ರವಿಚಂದ್ರನ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ‌ ಕನ್ನಡದ ಎಲ್ಲಾ ಕಲಾವಿದರು ಭಾಗಿ ಆಗುತ್ತಾರೆ.

ಪರಭಾಷೆಯ ಸ್ಟಾರ್​ಗಳು ಭಾಗಿ
ಪರಭಾಷಾ ಚಿತ್ರರಂಗದಿಂದ ತಮಿಳು ನಟ ವಿಶಾಲ್, ರಜನಿಕಾಂತ್, ದಳಪತಿ ವಿಜಯ್, ಅಜಿತ್, ವಿಜಯ್ ಸೇತುಪತಿ, ಚಿರಂಜೀವಿ, ಅಲ್ಲು ಅರ್ಜುನ್, ಜ್ಯೂ. ಎನ್​ಟಿಆರ್, ಪ್ರಭಾಸ್, ಅಮಿತಾಭ್​ ಬಚ್ಚನ್, ರಾಮ್ ಚರಣ್, ಮೋಹನ್ ಲಾಲ್ ಸೇರಿದಂತೆ ಪ್ರಮುಖ ಕಲಾವಿದರು ಭಾಗವಹಿಸುವ ಸಾಧ್ಯತೆ ಇದೆ.

Comments are closed.