ಕರಾವಳಿ

ಉಡುಪಿ ಜಿಲ್ಲೆಯ ಇಬ್ಬರಿಗೆ ಮಂತ್ರಿ ಸ್ಥಾನ: ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನಿಲ್ ಕುಮಾರ್ ಸಂಪುಟಕ್ಕೆ..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜಿನಾಮೆ ಹಿನ್ನೆಲೆ ನೂತನ ಸಿಎಂ‌‌ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದು ಸಂಪುಟ ಪುನರ್ ರಚನೆಗೆ ಬಹಳಷ್ಟು ಸರ್ಕಸ್ ನಡೆದಿದ್ದು ಇಂದು‌ ನೂತನ ಸಚಿವ ಸಂಪುಟ ರಚನೆಯಾಗಲಿದೆ.

ಉಡುಪಿ ಕರಾವಳಿಯಿಂದ ಇಬ್ಬರಿಗೆ ಮಂತ್ರಿಗಿರಿ…
ಉಡುಪಿ‌ ಕರಾವಳಿಯಿಂದ ಈ ಬಾರಿ ಇಬ್ಬರಿಗೆ ಮಂತ್ರಿ ಪಟ್ಟ ಒಲಿದಿದೆ. ಈ ಹಿಂದೆ ಮಂತ್ರಿಯಾಗಿದ್ದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಹಾಗೂ ಈ ಬಾರಿ‌ ಮೊದಲ ಬಾರಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೆ ಸಚಿವ ಸ್ಥಾನ ನೀಡುವುದು ಪಕ್ಕಾ ಆಗಿದೆ. ಮೂಲಗಳ ಪ್ರಕಾರ ಸಿಎಂ ಕಚೇರಿಯಿಂದ ಸುನಿಲ್ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕರೆ ಬಂದಿದ್ದು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅಧೀಕೃತ ಆಹ್ವಾನ ಬಂದಿದೆ ಎನ್ನಲಾಗಿದೆ.

ಕಾರ್ಕಳ ಶಾಸಕ ಸುನೀಲ್ ಕುಮಾರ್..
ಕಾರ್ಕಳ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಹಿಂದುಳಿದ ವರ್ಗದ ನಾಯಕ. ಸುನೀಲ್ ಕುಮಾರ್ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾದವರು. ಈ ಹಿಂದೆ ಸಚೇತಕರಾಗಿ ಕೂಡ ಕಾರ್ಯನಿರ್ವಹಿಸಿದರು. ಮೊದಲಿನಿಂದಲೂ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಾಗಿ ಗುರುತಿಸಿಕೊಂಡ ಸುನಿಲ್ ಕುಮಾರ್ ಇದೇ ಮೊದಲ‌ ಬಾರಿಗೆ ಸಚಿವರಾಗುತ್ತಿದ್ದಾರೆ.

ಇನ್ನು ಉಡುಪಿ ಜಿಲ್ಲೆಯಿಂದ ಈ ಹಿಂದೆ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದರೂ ಕೂಡ ಅವರನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ ಉಡುಪಿ‌ ಉಸ್ತುವಾರಿಯಾಗಿ ಅಂದಿನ ಗೃಹ ಸಚಿವ, ಹಾಲಿ ಸಿಎಂ ಬೊಮ್ಮಾಯಿ ಅವರನ್ನು ನಿಯೋಜಿಸಲಾಗಿತ್ತು.

ಈ ಬಾರಿ ಸಚಿವ ಸಂಪುಟ ಪುನರ್ ರಚನೆಯಲ್ಲಿ ಐದು ಬಾರಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಅವರ ಅಭಿಮಾನಿಗಳು ಪ್ರಬಲವಾಗಿ ಧ್ವನಿ ಮಾಡಿದ್ದರು. ಆದರೆ ಈ ಬಾರಿಯೂ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ಕ್ಷೇತ್ರದ ಜನರಲ್ಲಿ ನಿರಾಸೆಯುಂಟು ಮಾಡಿದೆ.

Comments are closed.