ಕರಾವಳಿ

ಕೊರೋನಾ ಸಂಕಷ್ಟ ಪರಿಸ್ಥಿತಿಯಲ್ಲಿ ಗರ್ಭಿಣಿಯರ ಆಹಾರ ಪದ್ಧತಿಯ ಬಗ್ಗೆ ಡಾ.ದುರ್ಗಾಪ್ರಸಾದ್ ಅವರಿಂದ ಸುಂದರ ಕವಿತೆ

Pinterest LinkedIn Tumblr

ಸುಖ-ನೆಮ್ಮದಿಯ ಗರ್ಭಿಣಿ – ಬಾಣಂತಿಯ ಜೀವನಕೆ ಬೇಕು ಸಂತುಲಿತ *ಆಹಾರ.*
ಸಮತೋಲನದ ಪೌಷ್ಟಿಕಾಂಶಗಳು ಆಹಾರದಿ ಬೆರೆತಿರಲು ಬಾಳು ಸುಂದರ *ವಿಹಾರ.*

ಪ್ರೋಟೀನ್, ಶರ್ಕರ, ಕೊಬ್ಬು, ಖನಿಜ, ಲವಣ, ವಿಟಮಿನ್ ಜೊತೆಗೂಡಲದು *ಶ್ರೇಷ್ಠ.*
ಸಮತೂಕದಿ ಈ ಅವಶ್ಯಕತೆಗಳು ಒಳಗೊಂಡಲ್ಲಿ ತಾಯಿ ಮಗುವಿನ ಮೇಲಣ ಪರಿಣಾಮ *ವಿಶಿಷ್ಟ.*

ಆಹಾರವು ದೇಹಕೆ ಒದಗಿಸುವ ಶಕ್ತಿಯನು ಅಳೆಯುವ ಮಾಪನವೇ *ಕ್ಯಾಲೋರಿ.*
ತಲಾ ನಾಲ್ಕು ಕ್ಯಾಲೋರಿ ಪ್ರೋಟೀನ್, ಶರ್ಕರ-ಒಂಭತ್ತು ಕ್ಯಾಲೋರಿ ಕೊಬ್ಬು ನೀಡುವುದೇ *ಪರಿ.*

ಕ್ಯಾಲೋರಿ ಶಕ್ತಿಯ ಪ್ರಸರಣೆಯಿಂದ ಸುಗಮ ರೀತಿಯಲಿ ಜೀವ ಕೋಶಗಳ *ಬೆಳವಣಿಗೆ.*
ಕಾಲ ಕಾಲಕೆ, ನಿರ್ಧಿಷ್ಟತೆಯ ಆಹಾರ ಸೇವನೆ-ಗರ್ಭಿಣಿಯ ಆರೋಗ್ಯ ಹಾದಿಯೊಳು ಸುಂದರ *ಮೆರವಣಿಗೆ.*

ಮೊಟ್ಟೆ, ಹಾಲಿನೊಳಗಿರುವ ಪ್ರೋಟೀನ್- ಶಿಶು ಮೆದುಳಿನ ಬೆಳವಣಿಗೆಗೆ ಹಾಡುವುದು *ನಾಂದಿ.*
ಫೋಲಿಕ್ ಆಸಿಡ್ ಇರುವ ಬೆಣ್ಣೆ ಹಣ್ಣು, ಧವಸ ಧಾನ್ಯ ಪ್ರಾಥಮಿಕ ಬೆಳವಣಿಗೆ ಮಾಡುವುದನರಿತಿರಬೇಕು *ಮಂದಿ.*

ಹಸಿರು ಸೊಪ್ಪಿನೊಳು ಅಡಕ-ಕ್ಯಾಲ್ಸಿಯಂ, ಫೈಬರ್, ಜೊತೆಯಲಿ ವಿಟಮಿನ್ ‘ಎ’ ವ್ರದ್ಧಿಸುವುದು ಕಣ್ಣ *ದ್ರಷ್ಠಿ*
ರಕ್ತ ಹೀನತೆಯ ತಡೆದು, ಚರ್ಮದ ಸೌಂದರ್ಯವ ಹೆಚ್ಚಿಸುವ ಸಾಮರ್ಥ್ಯವಿರುವ ದಾಳಿಂಬೆಯ *ಸ್ರಷ್ಠಿ.*

ಪ್ರತಿರೋಧ ಶಕ್ತಿ ಹೆಚ್ಚಿಸುವ ಕಿತ್ತಳೆಯೊಳು ಇರುವ ವಿಟಮಿನ್’ಸಿ’ ನಿರೋಧಿಸುವುದು *ರಕ್ತ ಸ್ರಾವ*.
ನರದೌರ್ಬಲ್ಯ ನಿರ್ಬಂಧಿಸುವ ವಿಟಮಿನ್ ‘ಬಿ ಸಿಕ್ಸ್’ ಅಡಕದ ಬಾಳೆಹಣ್ಣಿನೊಳಿರುವ ಪೊಟ್ಯಾಸಿಯಂ ತಡೆಯುವುದು ರಕ್ತದೊತ್ತಡದ *ಸಾವ.*

ಬೆಳಗಿನ ಉಪಾಹಾರದಲಿ ಸೇರ್ಪಡೆಗೊಳಿಸಿದರೆ ‘ಓಟ್ಸ್’ ಇರಲಾರದು ಗರ್ಭಿಣಿಗೆ *ಮಲಬದ್ಧತೆ.*
ಸಮರ್ಪಕ, ಅಗತ್ಯತೆಗೆ ತಕ್ಕಂತೆ ಹಿತಮಿತ ಆಹಾರ ಸೇವಿಸುತಾ ಮಾಡು ತಾಯಿ ಹೆರಿಗೆಗೆ *ಸಿದ್ಧತೆ.*

ಗರ್ಭಾವಸ್ಥೆ ಖಾಯಿಲೆಯಲ್ಲ, ಬದಲಾಗಿ ಪ್ರಕ್ರತಿ ಹೆಣ್ಣಿಗೆ ನೀಡಿರುವ ವೈಶಿಷ್ಟ್ಯಪೂರ್ಣ *ವರ.*
ಅಧಿಕ ರಕ್ತದೊತ್ತಡಕೆ ಉಪ್ಪು ಬೇಡ, ಮಧುಮೇಹಕೆ ಸಿಹಿ ನೋಡ ಬೇಡ, ಮಾಡಿಕೋ ಜೀವನ *ಅಮರ.*

ಸೂಕ್ತ ಆಹಾರ ಪದ್ಧತಿಯು ತರುವುದು ತಾಯಿ ಮಗುವಿನ ಸರ್ವಾಂಗೀಣ ಆರೋಗ್ಯ *ಬದಲಾವಣೆ.*
ಕೊರೋನಾ ಪ್ರತಿರೋಧಿಸಲು ಸಧ್ರಢವಾಗಿಸು ತಾಯಿ ದೇಹವ, ಇರಲಿ ಆಹಾರ ನಿಯಮದ *ಅನುಸರಣೆ.*

ಬರಹ:ಡಾ/ದುರ್ಗಾಪ್ರಸಾದ್. ಎಂ. ಆರ್.
ವೈದ್ಯಕೀಯ ಅಧೀಕ್ಷಕರು
ಸರಕಾರಿ ಲೇಡೀಗೋಶನ್ ಆಸ್ಪತ್ರೆ. ಮಂಗಳೂರು

Comments are closed.