
ಮಂಗಳೂರು, ಮೇ 13 : ಗ್ರಾಮ ಮಟ್ಟದಕಾರ್ಯಪಡೆಯ ಸಕ್ರೀಯವಾಗಿಒಂದೇ ಕುಟುಂಬದ ಸದಸ್ಯರಂತೆ ಕೊರೋನಾ ನಿಯಂತ್ರಣ ಕಾರ್ಯವನ್ನು ಜಿಲ್ಲೆಯಲ್ಲಿ ಮಾಡುವುದರೊಂದಿಗೆ ಕೊರೋನಾ ಮುಕ್ತವನ್ನಾಗಿಸಿ ರಾಜ್ಯದಲ್ಲಿಯೇ ಮಾದರಿ ಯಾಗಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಪುತ್ತೂರು, ಕಡಬ, ಮಂಗಳೂರು, ಮೂಡಬಿದ್ರೆಮತ್ತು ಬಂಟ್ವಾಳದ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಸೇರಿದ ಗ್ರಾಮ ಮಟ್ಟದ ಟಾಸ್ಕ್‍ಪೋರ್ಸ್ ಸಮಿತಿ ಸದಸ್ಯರೊಂದಿಗೆ ಕೋವಿಡ್-19 ನಿಯಂತ್ರಣಕುರಿತ ಸಂವಾದ ಸಭೆಯಲ್ಲಿ ಮಾತನಾಡಿದರು.
ರಾಜ್ಯಾದ್ಯಂತ ಕೊರೋನಾ ಕಪ್ರ್ಯೂ ಜಾರಿಯ ಕಾರಣ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಉದ್ಯೋಗ ಅರಸಿ ಹೋಗಿರುವವರುತಮ್ಮ ಸ್ವಂತ ಊರುಗಳಿಗೆ ಹಿಂದಿರುಗುತ್ತಿದ್ದಾರೆ. ಅಂತವರುಗಳ ಆರೋಗ್ಯಕ್ಷೇಮದ ಬಗ್ಗೆ ನಿಗಾವಹಿಸುವುದರೊಂದಿಗೆ ಸಾಮಾನ್ಯಕೊರೋನಾ ರೋಗಲಕ್ಷಣಗಳು ಕಂಡುಬಂದಲ್ಲಿ ಅವರುಗಳನ್ನು ಕಡ್ಡಾಯವಾಗಿಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ವರದಿಯು ಬರುವತನಕಅವರುಗಳನ್ನು ಹೋಂ ಕ್ವಾರಂಟೈನ್‍ನಲ್ಲಿಇರಿಸುವುದರೊಂದಿಗೆಅವರುಅನಾವಶ್ಯಕವಾಗಿ ಹೊರಗೆ ಬರದಂತೆಎಚ್ಚರವಹಿಸಬೇಕು ಎಂದರು.
ಆಯಾಗ್ರಾ.ಪಂ. ವ್ಯಾಪ್ತಿಯ ಪಿ.ಡಿ.ಒ ಗಳು, ಆಶಾಕಾರ್ಯಕರ್ತೆಯರು, ಅಂಗನವಾಡಿಕಾರ್ಯಕರ್ತೆಯರು, ಗ್ರಾಮ ಪಂಚಾಯತ್‍ಅಧ್ಯಕ್ಷರು ಮತ್ತುಉಪಾಧ್ಯಕ್ಷರು ಸಕ್ರಿಯವಾಗಿ ಸಭೆಗಳನ್ನು ನಡೆಸುವುದರೊಂದಿಗೆ ಹಾಗೂ ವ್ಯವಸ್ಥಿತವಾದ ಕಾರ್ಯನಿರ್ವಹಿಸುದರಿಂದಕೋವಿಡ್‍ಅನ್ನುತಡೆಗಟ್ಟಬಹುದುಎಂದು ತಿಳಿಸಿದರು.
ಒಂದೇ ಮನೆಯಲ್ಲಿಐದಕ್ಕಿಂತ ಹೆಚ್ಚಿನಜನರಿಗೆಕೊರೋನಾ ಪಾಸಿಟಿವ್ ದೃಢಪಟ್ಟರೇಅಂತವರನ್ನು ಹೋಂ ಐಸೋಲೇಷನ್‍ನಲ್ಲಿಇರಿಸಬೇಕು.ಅಗತ್ಯವೆಂದುಕಂಡುಬಂದಲ್ಲಿ ಅವರುಗಳಿಗೆ ಕೋವಿಡ್‍ಕೇರ್ ಸೆಂಟರ್‍ಗಳಿಗೆ ವರ್ಗಾಯಿಸಬೇಕು.ಆಗ್ರಾಮವನ್ನು ಮೈಕ್ರೋಕಂಟೈನ್‍ಮೆಂಟ್‍ಜೋನ್‍ಎಂದು ಪರಿಗಣಿಸಬೇಕು.ಜೊತೆಗೆ ಆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿಇದ್ದರವರನ್ನು ಗುರುತಿಸಿ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದರು.
14 ನೇ ಹಣಕಾಸು ಆಯೋಗದ ಉಳಿಕೆ ಮೊತ್ತ ಹಾಗೂ ಗ್ರಾಮ ಪಂಚಾಯತ್‍ನ ಉಳಿಕೆ ಹಣದಿಂದಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವಕೊರೋನಾ ಸೋಕಿತರಿಗೆಅಗತ್ಯಮೂಲಭೂತಸೌಕರ್ಯಗಳು, ಆಹಾರ ಸರಬರಾಜು ಮತ್ತುಹೆಲ್ತ್ ಕಿಟ್‍ಗಳನ್ನು ನೀಡಬೇಕುಎಂದರು.
ಲಸಿಕೆ ನೀಡುವಾಗಎರಡನೇಡೋಸ್ ಪಡೆಯುವವರಿಗೆಆಧ್ಯತೆ ನೀಡಬೇಕು.18 ರಿಂದ44 ವರ್ಷ ವಯೋಮಿತಿಯವರಿಗೆಕೊರೋನಾರೋಗ ನಿರೋಧಕ ಲಸಿಕೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಿಸುವ ಮೂಲಕ ನೀಡಬೇಕು.ವಿಕಲಚೇತನರು ಹಾಗೂ ನೋಂದಣಿ ಮಾಡಲುಗೊತ್ತಿಲ್ಲದವರು ನೇರವಾಗಿಗ್ರಾಮ ಪಂಚಾಯತ್‍ನಲ್ಲಿ ಭೇಟಿ ನೀಡಿಅಲ್ಲಿನ ಸಿಬ್ಬಂದಿಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದುಎಂದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ನೀಡುತ್ತಿರುವಆಹಾರಪಡಿತರವನ್ನುಅರ್ಹ ಪಡಿತರ ಚೀಟಿದಾರರಿಗೆ ತಪ್ಪದೇ ನೀಡಬೇಕು. ಪಡಿತರವನ್ನು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ನೀಡಲು ಸಾಧ್ಯವಾಗ ಲಿಲ್ಲವೆಂದರೆ ಮಧ್ಯಾಹ್ನ 12 ಗಂಟೆಯವರೆಗೆನೀಡಲು ಅವಕಾಶ ಮಾಡಿ ಕೊಡಲಾಗುವುದು ಎಂದ ಅವರು, ಪಡಿತರವನ್ನು ಪಡೆದುಕೊಳ್ಳುವಾಗ ಸಾರ್ವಜನಿಕರು ತಪ್ಪದೇ ಮಾಸ್ಕ್‍ಗಳನ್ನು ಧರಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ತಿಳಿಸಿದರು.
ಗ್ರಾಮ ಪಂಚಾಯತ್ ಗಳಲ್ಲಿ ಕೋವಿಡ್ ಸೋಂಕಿತರು ಮನೆಗಳಲ್ಲಿ ಪ್ರತ್ಯೇಕವಾಗಿರಲುಐಸೋಲೇಷನ್ ವ್ಯವಸ್ಥೆಇಲ್ಲದವರನ್ನು ಗುರುತಿಸಿ, ಅವರಿಗೆಸ್ಥಳೀಯವಾಗಿ ಲಭ್ಯವಿರುವ , ಎಲ್ಲಾಅಗತ್ಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರುವ ಕಟ್ಟಡಗಳಲ್ಲಿ ಕೋವಿಡ್‍ಕೇರ್ ಸೆಂಟರ್ ಗಳನ್ನು ತೆರೆದುಅವರಿಗೆಅಗತ್ಯ ವ್ಯವಸ್ಥೆಗಳನ್ನು ಒದಗಿಸಬೇಕು.
ಕೋವಿಡ್‍ಕೇರ್ ಸೆಂಟರ್ ಗಳಲ್ಲಿ ದಾಖಲು ಮಾಡುವುದರಿಂದ ಸೋಂಕು ಕುಟುಂಬ ಸದಸ್ಯರಿಗೆ ಹರಡುವುದನ್ನುತಡೆಯುವದರಜೊತೆಗೆ, ಸೋಂಕಿತರನ್ನು ಹೆಚ್ಚಿನ ನಿಗಾವಹಿಸಿ ಚಕಿತ್ಸೆ ನೀಡಲು ಹಾಗೂ ತುರ್ತು ಸಂದರ್ಭದಲ್ಲಿಆಸ್ಪತ್ರೆಗೆದಾಖಲಿಸಲು ಸಾಧ್ಯವಾಗಲಿದೆಎಂದರು.
ಟಾಸ್ಕ್‍ಪೋರ್ಸ್ ಸದಸ್ಯರು ಸಕ್ರೀಯವಾಗಿಕಾರ್ಯನಿರ್ವಹಿಸಬೇಕು ಇಲ್ಲದಲ್ಲಿಅಂತವರ ವಿರುದ್ಧಕ್ರಮ ಕೈಗೊಳ್ಳಲಾಗುತ್ತದೆ ಎಂದಅವರು, ಪ್ರಾಥಮಿಕಆರೋಗ್ಯ ಕೇಂದ್ರಗಳಲ್ಲಿ ಸ್ಟಾಪ್‍ನರ್ಸ್‍ಗಳ ಕೊರತೆಕಂಡುಬಂದಲ್ಲಿ ಅವರುಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದರು.
ವಿಡಿಯೋ ಸಂವಾದದಲ್ಲಿ ಶಾಸಕರಾದ ರಾಜೇಶ್ ನಾಯ್ಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್, ಪುತ್ತೂರು, ಕಡಬ, ಮಂಗಳೂರು, ಮೂಡಬಿದ್ರೆ ಮತ್ತು ಬಂಟ್ವಾಳದ ಗ್ರಾಮ ಪಂಚಾಯತ್‍ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಸೇರಿದಗ್ರಾಮ ಮಟ್ಟದ ಟಾಸ್ಕ್‍ಪೋರ್ಸ್ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
Comments are closed.