ಕರಾವಳಿ

ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಗೆ ತಜ್ಞರು, ಶುಶ್ರೂಷಕರ ಹಾಗೂ ವಿವಿಧ ಹುದ್ದೆಗೆ ನಾಳೆ ನೇರ ಸಂದರ್ಶನ

Pinterest LinkedIn Tumblr

ಮಂಗಳೂರು, ಮೇ 11: ಜಿಲ್ಲೆಯಾದ್ಯಂತ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಡಿ.ಸಿ.ಹೆಚ್ (dedicated covid hospital) ಆಗಿ ಕಾರ್ಯನಿರ್ವಹಿಸುತ್ತಿರುವ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಗೆ ತಜ್ಷರು, ಶುಶ್ರೂಷಕರು ಮತ್ತು ಕೋವಿಡ್ ಐಸಿಯು ವಿಭಾಗದಲ್ಲಿ oxygen lines functioning of air conditioner ಇವುಗಳನ್ನು ತಪರಿಶೀಲಿಸಿ ನಿರ್ವಹಣೆ ಮಾಡಲು ತವಿವಿಧ ತಂತ್ರಜ್ಞರ ಗುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಅವಶ್ಯಕತೆಗೆ ಅನುಗುಣವಾಗಿ, ತಾತ್ಕಾಲಿಕವಾಗಿ ಸೆಪ್ಟೆಂಬರ್ 30 ರವರೆಗೆ ನೇಮಕ ಮಾಡಿಕೊಳ್ಳಲು ಮೇ 13 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರ ಕಚೇರಿಯಲ್ಲಿ ನೇರ ಸಂದರ್ಶನ ಕರೆಯಲಾಗಿದೆ.

ತಾತ್ಕಾಲಿಕ ಹುದ್ದೆಗಳ ವಿವರ: ತಜ್ಞರು-ಪಿಜಿಷಿಯನ್ ಹುದ್ದೆಗಳ ಸಂಖ್ಯೆ-5, ಎಂ.ಬಿ.ಬಿ.ಎಸ್, ಎಂ.ಡಿ, ಮೆಡಿಕಲ್ ಕೌನ್ಸೆಲಿಂಗ್ ರಿಜಿಸ್ಟರ್ ಆಗಿರಬೇಕು.

ಅನಸ್ತೆಟಿಸ್ಟ್, ಹುದ್ದೆಗಳ ಸಂಖ್ಯೆ-5, ಎಂ.ಬಿ.ಬಿ.ಎಸ್, ಡಿ.ಎ, ಎಂ.ಡಿ, ಡಿಎನ್.ಬಿ, ಮೆಡಿಕಲ್ ಕೌನ್ಸೆಲಿಂಗ್ ರಿಜಿಸ್ಟರ್ ಆಗಿರಬೇಕು.

ಶುಶ್ರೂಷಕಿ-ಹುದ್ದೆಗಳ ಸಂಖ್ಯೆ-46, ಡಿಪ್ಲೋಮಾ ನರ್ಸಿಂಗ್/ಬಿ.ಎಸ್.ಸಿ ನರ್ಸಿಂಗ್ (ನರ್ಸಿಂಗ್ ಕೌನ್ಸಿಲಿಂಗ್ ರಿಜಿಸ್ಟರ್‍ನಲ್ಲಿ ನೋಂದಣಿಯಾಗಿರಬೇಕು).

ಒ.ಟಿ ಟೆಕ್ನಿಷಿಯನ್ ಕಮ್ ಅನಸ್ತೇಟಿಕ್ ಟಿಕ್ನಿಷಿಯನ್-ಹುದ್ದೆಗಳ ಸಂಖ್ಯೆ-4, ಡಿಪ್ಲೋಮಾ ಇನ್ ಒ.ಟಿ ಟೆಕ್ನಿಷಿಯನ್/ ಡಿ.ಒ.ಟಿ ಮತ್ತು ಎ.ಟಿ ಆಗಿರಬೇಕು.

ಸೆಂಟ್ರಲ್ ಆಕ್ಸಿಜೆನ್ ಲೈನ್ ನಿರ್ವಹಣಾ ತಂತ್ರಜ್ಞ-ಹುದ್ದೆಗಳ ಸಂಖ್ಯೆ-1, ಐ.ಟಿ.ಐ ಇನ್ ಮ್ಯಾಕಾನಿಕಲ್ ಆಗಿರಬೇಕು.

ಬಯೋಮೆಡಿಕಲ್ ಇಂಜಿನಿಯರ್-ಹುದ್ದೆಗಳ ಸಂಖ್ಯೆ_2, ಬಿ.ಇ ಬಯೋಮೆಡಿಕಲ್ ಇಂಜಿನಿಯರಿಂಗ್ ಆಗಿರಬೇಕು.

ಎ.ಸಿ ಟೆಕ್ನಿಷಿಯನ್/ ಎಲೆಕ್ಟ್ರಿಷಿಯನ್-ಹುದ್ದೆಗಳ ಸಂಖ್ಯೆ-2, ಡಿಪ್ಲೋಮಾ ಇನ್ ಎ.ಸಿ ಮ್ಯಾಕಾನಿಕಲ್/ ಐ.ಟಿ.ಐ ಆಗಿರಬೇಕು.

ಸಾರ್ವಜನಿಕ ಸಂಪರ್ಕ ಅಧಿಕಾರಿ-ಹುದ್ದೆಗಳ ಸಂಖ್ಯೆ-4, ಎಂ.ಎಸ್.ಡಬ್ಲ್ಯೂ ಆಗಿರಬೇಕು.

ಅಭ್ಯರ್ಥಿಗಳು ವಿದ್ಯಾರ್ಹತೆಯ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿ ಹಾಗೂ ಅವುಗಳ ಸ್ವಯಂ ದೃಢೀಕೃತ ನಕಲು ಪ್ರತಿಗಳು, ಅನುಭವಕ್ಕೆ ಆಧ್ಯತೆ ನೀಡಲಾಗುವುದು. ಆದ್ದರಿಂದ ಅನುಭವ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರ ಕಚೇರಿ ದೂ. ಸಂಖ್ಯೆ: 0824-2413205, 0824-2421351, 0824-2425137 ಅಥವಾ ಜsಜಞಚಿಟಿಟಿಚಿಜಚಿ- dsdkannada-hfws@karnataka.gov.in ಅನ್ನು ಸಂಪರ್ಕಿಸಬಹುದು ಎಂದ ವೆನ್‍ಲಾಕ್ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.