ಮಂಗಳೂರು / ಉಳ್ಳಾಲ, ಮಾರ್ಚ್.13 : ನಗರದ ಕಾಲೇಜೊಂದರ ವಿದ್ಯಾರ್ಥಿನಿ ಕುಂಪಲ ಆಶ್ರಯಕಾಲನಿ ನಿವಾಸಿ ವಿದ್ಯಾರ್ಥಿನಿ ಪ್ರೇಕ್ಷಾ ಸಾವಿನ ಪ್ರಕರಣ ಮತ್ತೊಂದು ತಿರುವು ಪಡೆದು ಕೊಂಡಿದೆ. ಗಾಂಜಾ ವ್ಯಸನಿಗಳ ಜೊತೆಗೆ ಇದ್ದ ತನ್ನ ಸ್ನೇಹಿತ ಹಾಗು ಆತನ ಗಾಂಜಾ ವ್ಯಸನಿ ಸ್ನೇಹಿತರ ಬೆದರಿಕೆಗೆ ಹೆದರಿ ವಿದ್ಯಾರ್ಥಿನಿ ಪ್ರೇಕ್ಷಾ ಆತ್ಮಹತ್ಯೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಆತ್ಮಹತ್ಯೆಗೂ ಮುನ್ನ ಪ್ರೇಕ್ಷಾ ಆತ್ಮಹತ್ಯೆ ಕಾರಣ ಹೇಳಿ ಲೈವ್ ವೀಡಿಯೋ ಮಾಡಿ ಕೃತ್ಯ ಎಸಗಿದ್ದು, ಈ ವಿಡೀಯೋ ಪರಿಶೀಲಿಸಿದರೆ ಎಲ್ಲಾ ಸತ್ಯಾ ಹೊರಬೀಳುವ ಸಾಧ್ಯತೆ ಇದೆ. ಜೊತೆಗೆ ಬೆದರಿಕೆ ಹಾಕಿದ ಆರೋಪಿಗಳ ಹೆಸರು ಬಹಿರಂಗಗೊಳ್ಳಲ್ಲಿದೆ.
ಈ ಮಾತನ್ನು ಸ್ವತಹ ಪ್ರೇಕ್ಷಾ ತಂದೆ ಚಿತ್ತಪ್ರಸಾದ್ ಅವರೇ ಒಪ್ಪಿಕೊಂಡಿದ್ದಾರೆ. ಶಾಲಾ ಸಂದರ್ಭ ಯುವಕನ ಜತೆಗಿದ್ದ ಫೋಟೋವನ್ನು ಇದೀಗ ವೈರಲ್ ಮಾಡಲಾಗುತ್ತಿದೆ. ಗಾಂಜಾ ವ್ಯಸನಿಗಳ ಜತೆಗಿರುವ ಯುವಕ ಮತ್ತು ಆತನ ತಂಡದ ಬೆದರಿಕೆಗೆ ಹೆದರಿ ಪ್ರೇಕ್ಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ.
ಶುಕ್ರವಾರದಂದು ಪ್ರೇಕ್ಷಾಳ ಮನೆಗೆ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಆಕೆಯ ತಂದೆ ಗಾಂಜಾ ವ್ಯಸನಿಗಳ ಬೆದರಿಕೆಗೆ ಹೆದರಿ ಪ್ರೇಕ್ಷಾ ಆತ್ಮಹತ್ಯೆ ನಡೆಸಿರುವುದಾಗಿ ಹೇಳಿಕೆ ನೀಡುವ ಮೂಲಕ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿಗೆ ತೆರಳಲು ಪೋಷಕರಾಗಿ ನಾವು ವಿರೋಧಿಸಿರಲಿಲ್ಲ. ಸಾಯುವ ಮುನ್ನ ಮನೆಯ ರ್‍ಯಾಕ್ ನಲ್ಲಿ ಮೊಬೈಲ್ ಪತ್ತೆಯಾಗಿದೆ. ಅದರಲ್ಲಿ ಆತ್ಮಹತ್ಯೆ ಕಾರಣ ಹೇಳಿ ಲೈವ್ ವೀಡಿಯೋ ಮಾಡಿ ಕೃತ್ಯ ಎಸಗಿದ್ದಾಳೆ. ಆ ವೀಡಿಯೋ ಪರಿಶೀಲಿಸಿದಲ್ಲಿ ಆತ್ಮಹತ್ಯೆ ಕಾರಣ ಗೊತ್ತಾಗಲಿದೆ ಎಂದು ಆಕೆಯ ತಂದೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.