ಕರಾವಳಿ

ನಗರದಲ್ಲಿ ಕೊಕೈನ್‌ ಮಾರಾಟಕ್ಕೆ ಯತ್ನ : 2.37 ಲಕ್ಷ ರೂ. ಮೌಲ್ಯದ ಸೊತ್ತು ಸಹಿತಾ ಆರೋಪಿ ಅಂದರ್

Pinterest LinkedIn Tumblr

ಮಂಗಳೂರು: ನಗರದ ಇಕೋನಾಮಿಕ್‌ ಹಾಗೂ ನಾರ್ಕೊಟಿಸ್‌ ಕ್ರೈಂ ಪೊಲೀಸ್‌ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ನಡೆಸಿದ ಕಾರ್ಯಚರಣೆಯಲ್ಲಿ ನಗರದ ವಿವಿಧೆಡೆಗಳಲ್ಲಿ ಕೊಕೈನ್‌ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ವಶಕ್ಕೆ ಪಡೆಯುಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಬೋಳಾರದ ಮಾರಿಗುಡಿ ದೇವಸ್ಥಾನ ಸಮೀಪದ ನಿವಾಸಿ ಸುಪ್ರೀತ್‌ (35) ಎಂದು ಗುರುತಿಸಲಾಗಿದೆ. ಆರೋಪಿಯನ್ನು ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಳಿ ಬಂಧಿಸಲಾಗಿದೆ.

ಆರೋಪಿಯಿಂದ 2 ಲಕ್ಷ ರೂ. ಮೌಲ್ಯದ 21.13 ಗ್ರಾಂ ಕೊಕೇನ್, 35 ಸಾವಿರ ರೂ. ಮೌಲ್ಯದ 2 ಮೊಬೈಲ್, 2 ಸಾವಿರ ರೂ. ನಗದು ಸೇರಿದಂತೆ ಒಟ್ಟು 2.37 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ

ಆರೋಪಿಯನ್ನು ಇಕೋನಾಮಿಕ್‌ ಹಾಗೂ ನಾರ್ಕೊಟಿಸ್‌ ಕ್ರೈಂ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರಾದ ರಾಮಕೃಷ್ಣ ಕೆ.ಕೆ. ಮತ್ತು ಸಿಬ್ಬಂದಿಯವರು ಕಾರ್ಯಚರಣೆ ನಡೆಸಿ ಬಂಧಿಸಿರುತ್ತಾರೆ.

Comments are closed.