ಕುಂದಾಪುರ: ಗ್ರಾ.ಪಂ ಚುನಾವಣೆಯಲ್ಲಿ ಎರಡನೇ ಭಾರಿಗೆ ವಿಶೇಷ ಚೇತನ ಸುಧಾಕರ್ ಪೂಜಾರಿ (47) ಹಂಗಳೂರು ಪಂಚಾಯತ್ ನ 4ನೇ ವಾರ್ಡ್ ನಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದಾರೆ.
ಬಾಲ್ಯದಲ್ಲೇ ಪೋಲಿಯೋ ಪೀಡಿತರಾಗಿ ಒಂದು ಕಾಲಿನ ಸಂಪೂರ್ಣ ಬಲವನ್ನು ಕಳೆದುಕೊಂಡಿರುವ ಅವರು ಸಮಾಜ ಸೇವೆಯ ತುಡಿತ ದಿಂದ ಕಳೆದ ವರ್ಷ ಇದೇ ವಾರ್ಡಿನಿಂದ ಗೆದ್ದಿದ್ದರು.
ಈ ಬಗ್ಗೆ ಮಾತನಾಡಿದ ಸುಧಾಕರ್ ಅವರು ನನ್ನನ್ನು ಎರಡನೇ ಬಾರಿಗೆ ಆಯ್ಕೆ ಮಾಡಿದ ಜನತೆಗೆ ನನ್ನ ಹೃತ್ಪೂರ್ವಕ ವಂದನೆಗಳು. ಇನ್ನಷ್ಟು ಜನಸೇವೆ ಮಾಡುವ ಅವಕಾಶ ಕೊಟ್ಟಿದ್ದಾರೆ. ಸಂಪೂರ್ಣವಾಗಿ ಜನರು ನನ್ನ ಮೇಲೆ ಇಟ್ಟ ವಿಶ್ವಾಸಕ್ಕೆ ತಲೆದೂಗಿ ಜನಸೇವೆ ಮಾಡುತ್ತೇನೆ ಎಂದರು.
(ಯೋಗೀಶ್ ಕುಂಭಾಸಿ)